Home ನಮ್ಮ ಜಿಲ್ಲೆ ಕಲುಷಿತ ನೀರು ಕುಡಿದು ಮತ್ತೆ 12 ಜನತೆ ಆಸ್ಪತ್ರೆಗೆ ದಾಖಲು

ಕಲುಷಿತ ನೀರು ಕುಡಿದು ಮತ್ತೆ 12 ಜನತೆ ಆಸ್ಪತ್ರೆಗೆ ದಾಖಲು

0
Mudenur

ರಾಮದುರ್ಗ: ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ವಾಂತಿ-ಬೇಧಿಯಿಂದ ಮತ್ತೆ ೧೨ ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ ಗ್ರಾಮದಲ್ಲಿ ಇಬ್ಬರು ಮೃತಪಟ್ಟು 94 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಗ್ರಾಮದಲ್ಲಿ ಚಿಕಿತ್ಸೆಗೆ ಓಪಿಡಿ ಪ್ರಾರಂಭಿಸಿ, ಸಮಸ್ಯೆ ಉಂಟಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಉಂಟಾದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಾ ಆಸ್ಪತ್ರೆ ಸೇರಿದಂತೆ ವಿವಿಧೆಡೆ ದಾಖಲಿಸಲಾಗಿದೆ.

Exit mobile version