Home ನಮ್ಮ ಜಿಲ್ಲೆ ಅಥಣಿಯಲ್ಲಿ ಲಕ್ಷ್ಮಣ ಸವದಿ ನಾಗಾಲೋಟ

ಅಥಣಿಯಲ್ಲಿ ಲಕ್ಷ್ಮಣ ಸವದಿ ನಾಗಾಲೋಟ

0

ಚಿಕ್ಕೋಡಿ; ರಾಜ್ಯದ ಗಮನ ಸೆಳೆದಿದ್ದ ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಭಾರಿ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಿಜೆಪಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಸವದಿ ಸೋಲಿಸಲು ರಮೇಶ ಜಾರಕಿಹೊಳಿ ಭಾರಿ ಕಸರತ್ತು ನಡೆಸಿದ್ದರು.
ಆದರೆ, ಮೊದಲ ಸುತ್ತಿನಿಂದಲೇ ಭಾರಿ ಅಂತರದ ಮುನ್ನಡೆ ಕಾಯ್ದುಕೊಂಡಿರುವ ಲಕ್ಷ್ಮಣ ಸವದಿ 7 ನೇ ಸುತ್ತಿನ ಹೊತ್ತಿಗೆ 13000 ಮತಗಳ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನೊಂದೆಡೆ 6 ಸುತ್ತುಗಳವರೆಗೆ ಮುನ್ನಡೆಯಲ್ಲಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ 7ನೇ ಸುತ್ತಿನಲ್ಲಿ 3 ಸಾವಿರ ಲೀಡ್ ಪಡೆದುಕೊಂಡಿದ್ದರೆ, ಸತತ ಹಿನ್ನಡೆಯಲ್ಲಿದ್ದ ಸಚಿವೆ ಶಶಿಕಲಾ ಜೊಲ್ಲೆ 2000 ಮತಗಳ ಮುನ್ನಡೆ ಸಾಧಿಸಿದ್ದಾರೆ.

Exit mobile version