Home ನಮ್ಮ ಜಿಲ್ಲೆ ಕೊಪ್ಪಳ ಕೆಲಸ ಮಾಡದೇ ಬಿಲ್ ಕೊಡುವುದು ಕಾಂಗ್ರೆಸ್ ಚಾಳಿ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕೆಲಸ ಮಾಡದೇ ಬಿಲ್ ಕೊಡುವುದು ಕಾಂಗ್ರೆಸ್ ಚಾಳಿ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0
CM

ಕೊಪ್ಪಳ : ಕೆಲಸ ಮಾಡದೇ ಬಿಲ್ ಕೊಡುವುದು ಕಾಂಗ್ರೆಸ್ ಚಾಳಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆನೆಗುಂದಿಯಲ್ಲಿ ಕಾಮಗಾರಿಗೆ 125 ಕೋಟಿ ಮಂಜೂರು ಮಾಡಿದ್ದು ಬಿಡುಗಡೆಯಾಗಿಲ್ಲಯೆಂದು ವಿರೋಧ ಪಕ್ಷದವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲಸ ಹೇಗೆ ನಡೆಯುತ್ತದೆ ಎಂಬ ಕಲ್ಪನೆ ಇರಬೇಕು. ಅನುಮೋದನೆಯಾಗಿ ಸರ್ಕಾರಿ ಆದೇಶವಾಗಿ ಟೆಂಡರ್ ಆಗಿದೆ. ಅನಂತರ ಬಿಲ್ ಕೊಡುತ್ತಾರೆ ಎಂದರು.
ಪ್ರತಿಕ್ರಿಯೆ ಇಲ್ಲ
ಮಾಜಿ ಸಿಎಂ ಆಪ್ತರ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಲಾಗುವುದಿಲ್ಲ. ಹೇಳಿಕೆ ಕೊಟ್ಟವರು ಅದಕ್ಕೆ ಜವಾಬ್ದಾರರು ಎಂದರು.
35 ವರ್ಷಗಳ ಸಂಬಂಧ
ಸಚಿವ ವಿ.ಸೋಮಣ್ಣ ಅವರು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸ್ನೇಹಿತರು ಎಂದಿರುವ ಬಗ್ಗೆ ಉತ್ತರಿಸಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸೋಮಣ್ಣ ನಮ್ಮದು 35 ವರ್ಷಗಳ ಸಂಬಂಧ ಎಂದರು. ಅದು ಸತ್ಯ ಎಂದರು.

Exit mobile version