Home ಅಪರಾಧ ಹುಬ್ಬಳ್ಳಿಯಲ್ಲಿ 80 ಕುರಿಗಳು ಸಾವು

ಹುಬ್ಬಳ್ಳಿಯಲ್ಲಿ 80 ಕುರಿಗಳು ಸಾವು

0
ಕುರಿ

ಹುಬ್ಬಳ್ಳಿ: ಇಲ್ಲಿನ ಮೇದಾರ ಓಣಿಯ ಮಟನ್ ಮಾರುಕಟ್ಟೆಯ ಗೋದಾಮಿನಲ್ಲಿದ್ದ ೮೦ ಕುರಿಗಳು ಸಾವನಪ್ಪಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ರಾಕೇಶ ಕಲಾಲ್ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ದಸರಾ ಹಬ್ಬದ ಪ್ರಯುಕ್ತ ಕುರಿಗಾರರಿಂದ ಕುರಿಗಳನ್ನು ಖರೀದಿಸಿಕೊಂಡು ಬಂದು ಗೋದಾಮಿನಲ್ಲಿ ಕೂಡಿ ಹಾಕಿದ್ದರು.
ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಬೆಚ್ಚನೆಯ ಜಾಗದಲ್ಲಿ ನಿಲ್ಲಲು ಹೋಗಿ ಉಸಿರುಗಟ್ಟಿ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ.
ರಾಕೇಶ ಕಲಾಲ ಅವರು ಕುರಿಗಳ ಮಾರಾಟ ಮಾಡಲು ಸುಮಾರು ೮ ಲಕ್ಷ ರೂಪಾಯಿ ಖರ್ಚು ಮಾಡಿ ಕುರಿಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಆದರೆ ತಡರಾತ್ರಿ ಕುರಿಗಳು ಧಿಡೀರ್ ಆಗಿ ಸಾವನ್ನಪ್ಪಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕುರಿಗಳ ಮಾಲೀಕ ರಾಕೇಶ ಅವರು ಕುರಿಗಳ ಸಾವಿನಿಂದ ತೊಂದರೆಗೆ ಒಳಗಾಗಿದ್ದು, ಪರಿಹಾರಕ್ಕೆ ಸರಕಾರಕ್ಕೆ ಮನವಿ ಮಾಡಿದ್ದಾರೆ.

Exit mobile version