Home ಅಪರಾಧ ವಸತಿಗೃಹದಲ್ಲಿ ವ್ಯಾಪಾರಿಯ ಮೃತದೇಹ ಪತ್ತೆ

ವಸತಿಗೃಹದಲ್ಲಿ ವ್ಯಾಪಾರಿಯ ಮೃತದೇಹ ಪತ್ತೆ

0
CRIME

ಮಂಗಳೂರು: ಪಂಪ್‌ವೆಲ್ ಬಳಿ ವಸತಿಗೃಹ ವೊಂದರಲ್ಲಿ ವ್ಯಾಪಾರಿಯೊಬ್ಬರ ಮೃತದೇಹ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನುಮಾನಾಸ್ಪದ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತರನ್ನು ಮೂಲತಃ ಕುಂಬಳೆ ನಿವಾಸಿ ಅಬ್ದುಲ್ ಕರೀಂ(55) ಎಂದು ಗುರುತಿಸಲಾಗಿದೆ. ನಗರದಲ್ಲಿ ವ್ಯಾಪಾರ ವಹಿವಾಟು ಹೊಂದಿದ್ದ ಇವರು ಸೋಮವಾರ ಪಂಪ್‌ವೆಲ್ ಬಳಿ ವಸತಿ ಗೃಹದಲ್ಲಿ ರೂಮ್ ಪಡೆದಿದ್ದರು. ಇಂದು ಬೆಳಗ್ಗೆ ಮನೆಯವರು ನಿರಂತರ ಮೊಬೈಲ್ ಕರೆ ಮಾಡಿದರೂ ಅಬ್ದುಲ್ ಕರೀಂ ಸ್ವೀಕರಿಸಿಲ್ಲ. ಈ ನಡುವೆ ಕರೀಂ ಪಡೆದಿದ್ದ ಕೊಠಡಿಯಿಂದ ನಿರಂತರ ಮೊಬೈಲ್ ರಿಂಗುಣಿಸುತ್ತಿದ್ದರೂ ಕರೆ ಸ್ವೀಕರಿಸುತ್ತಿಲ್ಲವಾದ್ದರಿಂದ ಸಂಶಯಗೊಂಡು ಲಾಡ್ಜ್ ಸಿಬ್ಬಂದಿ 11 ಗಂಟೆ ವೇಳೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳಕ್ಕೆ ಭೇಟಿ ಪರಿಶೀಲಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ತನಿಖೆ ಮುಂದುವರಿದಿದೆ.

Exit mobile version