Home ಅಪರಾಧ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ: ಪತಿ ಸೇರಿ ಮೂವರ ಬಂಧನ

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ: ಪತಿ ಸೇರಿ ಮೂವರ ಬಂಧನ

0
ಕ್ರೈಂ

ಬೆಳಗಾವಿ: ಹಾಲಭಾವಿಯಲ್ಲಿ ರೇಣುಕಾ ಭರಮಾ ನಾಯಿಕ ಎಂಬಾಕೆ ತನ್ನ ಪತಿ, ಆತನ ಸಹೋದರ, ಆತನ ಪತ್ನಿ ಹಾಗೂ ಮಾವಂದಿರು ಸೇರಿಕೊಂಡು ತವರು ಮನೆಯಿಂದಿ ವರದಕ್ಷಿಣೆ ತರುವಂತೆ ನೀಡುತಿದ್ದ ಕಿರುಕುಳಕ್ಕೆ ಬೇಸತ್ತು ಸೆ. 11ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರಿಸಿಕೊಂಡಿದ್ದ ಐವರು ಆರೋಪಿಗಳಲ್ಲಿ ಮೂವರನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.
ಅಥಣಿ, ಪಾಶ್ಚಾಪೂರ ಹಾಗೂ ಐನಾಪೂರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಭರಮಾ ಮುಶಪ್ಪಾ ನಾಯಿಕ, ಹಾಲಪ್ಪಾ ಮುಶಪ್ಪಾ ನಾಯಿಕ ಹಾಗೂ ಯಲ್ಲಪ್ಪಾ ಮುಶಪ್ಪಾ ನಾಯಿಕ ಮೂವರು ಸಹೋದರರನ್ನು ಪತ್ತೆ ಹಚ್ಚಿ ಬಂಧಿಸಿ ಹಿಂಡಲಗಾ ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉಳಿದಿರುವ ಇಬ್ಬರು ಆರೋಪಿಗಳಿಗಾಗಿ ತೀವ್ರ ತನಿಖೆ ಕೈಕೊಂಡಿದ್ದು ಶೀಘ್ರದಲ್ಲೇ ಬಂಧನ ಮಾಡುವುದಾಗಿ ತಿಳಿದು ಬಂದಿದೆ.

Exit mobile version