Home News ಯುವತಿ ಕತ್ತುಕೊಯ್ದ ಕಿರಾತಕರು

ಯುವತಿ ಕತ್ತುಕೊಯ್ದ ಕಿರಾತಕರು

ಬೆಂಗಳೂರು : ಬೆಂಗಳೂರು ಹೊರ ವಲಯದಲ್ಲಿ ಘನಘೋರ ಕೊಲೆಯಾಗಿದ್ದು, ಕಿರಾತಕ ಪ್ರೀತಿ ನಿರಾಕರಿಸಿದ ಯುವತಿ ಕತ್ತೊಕೊಯ್ದದಿದ್ದಾನೆ. ಈ ಘಟನೆ ರಾಜಾನುಕುಂಟೆ ಸಮೀಪದ ಶಾನುಭೋಗನಹಳ್ಳಿ ಬಳಿ ನಡೆದಿದೆ. ಪ್ರಥಮ ದರ್ಜೆ ವಿದ್ಯಾರ್ಥಿನಿ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಕತ್ತು ಸೀಳಿ ಯುವತಿಯನ್ನು ಹತ್ಯೆಗೈದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಲಹಂಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ರಾಶಿ (19) ಮೃತ ಯುವತಿ.
ರಾಜನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳ ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ಚಾಕುವಿನ ಇರಿತದಿಂದ ರಕ್ತಸ್ರಾವ ಅಧಿಕವಾಗಿ ಜಮೀನನಲ್ಲೇ ರಾಶಿ ಬಿದ್ದು ಕೊನೆಯುಸಿರೆಳೆದ್ದಾರೆ. ಘಟನಾ ನಡೆದ ಸ್ಥಳಕ್ಕೆ ರಾಜನಕುಂಟೆ ಪೊಲೀಸರು, ಬೆಂಗಳೂರು ಗ್ರಾಮಾಂತರ ಎಸ್‌ಪಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ರಾಶಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರ ಮಾಡಲಿದ್ದಾರೆ. ಕೊಲೆಯನ್ನು ಯಾರು ಯಾಕೆ ಮಾಡಿದ್ದಾರೆ ಅನ್ನೋದು ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Exit mobile version