Home ಅಪರಾಧ ಮನೆಯಲ್ಲಿ ಜನ ಮಲಗಿರುವಾಗಲೇ ಕನ್ನ ಹಾಕಿದ ಕಳ್ಳರು: ಕೋಟೆನಗರಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

ಮನೆಯಲ್ಲಿ ಜನ ಮಲಗಿರುವಾಗಲೇ ಕನ್ನ ಹಾಕಿದ ಕಳ್ಳರು: ಕೋಟೆನಗರಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

0

ಬಾಗಲಕೋಟೆ: ಮನೆಯಲ್ಲಿ ಕುಟುಂಬಸ್ಥರು ಇರುವಾಗಲೇ ಅವರ ಗಮನಕ್ಕೆ ಬಾರದಂತೆ ರಾತೋ ರಾತ್ರಿ ಕಳ್ಳರು ಕನ್ನ ಹಾಕಿದ ಘಟನೆ ವಿದ್ಯಾಗಿರಿಯ ನಂದಿಕೇಶ್ವರ ಕಾಲನಿಯಲ್ಲಿ ನಡೆದಿದೆ.
ಸತೀಶ ಶಿರೋಳ ಸೇರಿ ನಾಲ್ವರು ಮನೆಯಲ್ಲಿ ಮಲಗಿರುವಾಗ ಮಧ್ಯರಾತ್ತಿ ಈ ಘಟನೆ ನಡೆದಿದೆ ಎಂದು ಕುಟುಂವಸ್ಥರು ಹೇಳುತ್ತಿದ್ದಾರೆ. ೨೦ ತೊಲಿ ಚಿನ್ನ, ೧೦ ತೊಲಿ ಬೆಳ್ಳಿ ಜತೆಗೆ ಎರಡು ಮೊಬೈಲಗಳನ್ನು ಕಳ್ಳರು ಎಗರಿಸಿದ್ದಾರೆ. ಅಲ್ಲದೇ ಸತೀಶ ಅವರ ಪಕ್ಕದ ಮನೆಯ ಬೀಗವನ್ನೂ ಕಳ್ಳರು ಹೊಡೆದಿದ್ದಾರೆ‌. ಅದೇ ಪ್ರದೇಶದ ೮ ಮನೆಗೆ ಕನ್ನ ಹಾಕಲು ಕಳ್ಳರು ಯತ್ನಿಸಿರುವ ಬಗ್ಗೆ ಸ್ಥಳೀಯರು ಹೇಳುತ್ತಿದ್ದಾರೆ.
ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮನೆಯ ಬಳಿಯಲ್ಲಿರುವ ಬ್ರಿಡ್ಜ್ ಕೆಳಭಾಗದಲ್ಲಿ ಕಳ್ಳತನವಾಗಿರುವ ಕೆಲವು ವಸ್ತುಗಳು ಪತ್ತೆ ಆಗಿವೆ. ನವನಗರ ಠಾಣೆ ಪೊಲೀಸರು ಸ್ಥಳದಲ್ಲಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ‌.

ಮನೆಯಲ್ಲಿ ಜನ ಮಲಗಿರುವಾಗಲೇ ಕನ್ನ ಹಾಕಿದ ಕಳ್ಳರು   ಕೋಟೆನಗರಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ

Exit mobile version