Home News ತಾಳಿ ಕಟ್ಟಿ ಮಸಣ ಸೇರಿದ ವರ

ತಾಳಿ ಕಟ್ಟಿ ಮಸಣ ಸೇರಿದ ವರ

ಕೋಲಾರ: ಸಹದ್ಯೋಗಿಯನ್ನು ವಿವಾಹವಾಗಿ ಮನೆಯಲ್ಲಿ ತಿಳಿಸಲು ಧೈರ್ಯ ಸಾಲದೆ ಜಿಲ್ಲಾ ಆಸ್ಪತ್ರೆಯ ಡೇಟಾ ಎಂಟ್ರಿ ಆಪರೇಟರ್‌ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಹರೀಶ್ ಬಾಬು (33) ಆತ್ಮಹತ್ಯೆಗೆ ಶರಣಾಗಿರುವ ನೌಕರ. ಇವರು ಜಿಲ್ಲಾಸ್ಪತ್ರೆಯ ಇಎನ್‌ಟಿ ವಿಭಾಗದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಂಗಾರಪೇಟೆ ತಾಲೂಕಿನ ನಾಯಕನಹಳ್ಳಿ ನಿವಾಸಿ ಹರೀಶ್ ಬಾಬು ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹದ್ಯೋಗಿ ಜತೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ವಿವಾಹವಾಗಿದ್ದರು. ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಮದುವೆಯಾಗಿರುವುದನ್ನು ಬಹುಶಃ ಕುಟುಂಬದ ಸದಸ್ಯರಿಗೆ ತಿಳಿಸಲು ಭಯಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕೋಲಾರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Exit mobile version