Home News ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ

ಮಂಗಳೂರು : ಮಂಗಳೂರು ಕೊಟ್ಟಾರದಲ್ಲಿ ತಡರಾತ್ರಿ ಇಬ್ಬರು ಯುವತಿಯರು ಅನ್ಯಕೋಮಿನ ಯುವಕರೊಂದಿಗೆ ಸುತ್ತಾಡುತ್ತಿರುವ ಮಾಹಿತಿ ಪಡೆದ ಭಜರಂಗದಳ ಕಾರ್ಯಕರ್ತರು ಅವರನ್ನು ತಡೆದು ಹಲ್ಲೆಗೆ ಮುಂದಾಗಿದ್ದಾರೆ. ಹೋಟೆಲ್​ಗೆ ಊಟಕ್ಕೆ ಬಂದಿರುವುದಾಗಿ ಯುವಕ, ಯುವತಿಯರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ, ಮಧ್ಯರಾತ್ರಿ ಯಾವ ಹೋಟೆಲ್ ಇದೆ ಎಂದು ಪ್ರಶ್ನಿಸಿ ಭಜರಂಗ ದಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದರು. ಉರ್ವ ಠಾಣಾ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು ಬಳಿಕ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ಹೊರಟ ಜೋಡಿ,ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ನಡೆದ ಘಟನೆ.

Exit mobile version