Home News ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದವರು ಅಂದರ್

ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದವರು ಅಂದರ್

ಯಾದಗಿರಿ: ‌ಯಾದಗಿರಿ ಪರೀಕ್ಷಾ ಕೇಂದ್ರವೊಂದರಲ್ಲಿ ಬ್ಲೂಟೂತ್ ಬಳಕೆ ಮಾಡಿ ನಕಲು ಮಾಡುತ್ತಿದ್ದ ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿದ್ದ ಯಾದಗಿರಿ ಪೊಲೀಸರು. ಮೂವರು ಆರೋಪಿಗಳನ್ನು ಯಾದಗಿರಿ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅ. 28 ಮತ್ತು 29ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ ಪರೀಕ್ಷೆ ನಡೆಯುತ್ತಿದ್ದು. ರಾಜ್ಯಾದ್ಯಂತ ಮೊದಲ ದಿನ 350 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು.

https://samyuktakarnataka.in/%e0%b2%8e%e0%b2%9a%e0%b3%8d%e0%b2%8e%e0%b2%b8%e0%b3%8d%e0%b2%86%e0%b2%b0%e0%b3%8d%e0%b2%aa%e0%b2%bf-%e0%b2%95%e0%b2%a1%e0%b3%8d%e0%b2%a1%e0%b2%be%e0%b2%af-%e0%b2%86%e0%b2%a6/
Exit mobile version