Home ಅಪರಾಧ ಬೆಂಕಿ ಅವಘಡ: ಪರಿಕರಗಳು ಬೆಂಕಿಗೆ ಆಹುತಿ

ಬೆಂಕಿ ಅವಘಡ: ಪರಿಕರಗಳು ಬೆಂಕಿಗೆ ಆಹುತಿ

0

ಕೊಪ್ಪಳ: ನಗರದ ನಗರಸಭೆ ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಯಲ್ಲಿ ಶನಿವಾರ ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿದ್ದು, ಮಳಿಗೆಯಲ್ಲಿ ಪರಿಕರಗಳು ಬೆಂಕಿಗೆ ಆಹುತಿಯಾಗಿವೆ.

ವಾಣಿಜ್ಯ ಮಳಿಗೆಯು ನಗರಸಭೆಗೆ ಸೇರಿದ್ದಾಗಿದ್ದು, ನಗರಸಭೆಯ ವಿದ್ಯುತ್ ಗುತ್ತಿಗೆದಾರ ಮೌಲಾಸಾಬ್ ಬನ್ನಿಕೊಪ್ಪ ಎನ್ನುವವರು ಬಾಡಿಗೆ ಪಡೆದಿದ್ದಾರೆ‌.

ದಾಖಲೆಗಳ ನಾಶ ಮಾಡಲು ಯಾರೋ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗುತ್ತಿದ್ದು, ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version