Home ಅಪರಾಧ ಪ್ರಿಯಾಂಕ್ ಖರ್ಗೆ ಶೂಟ್ ಮಾಡಲು ಸಿದ್ದ ಎಂದಿದ್ದ ಬಿಜೆಪಿ ಮುಖಂಡ ಅಂದರ್

ಪ್ರಿಯಾಂಕ್ ಖರ್ಗೆ ಶೂಟ್ ಮಾಡಲು ಸಿದ್ದ ಎಂದಿದ್ದ ಬಿಜೆಪಿ ಮುಖಂಡ ಅಂದರ್

0

ಚಿತ್ತಾಪೂರ ಪೋಸ್ಟರ್ ವಾರ್ ತಾರಕ್ಕೆರಿದೆ. ಪ್ರೀಯಾಂಕ್ ಖರ್ಗೆರನ್ನ ಶೂಟ್ ಮಾಡಲು ಸಿದ್ದ ಎಂದಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನ ಪೊಲೀಸ್ ವಶಕ್ಕೆ ಪಡೆದಿದ್ದಾರೆ.

ಹೈದ್ರಾಬಾದನಲ್ಲಿ ವಶಕ್ಕೆ ಪಡೆದ ಕಲಬುರಗಿ ಪೊಲೀಸರು ಬ್ರಹ್ಮಪುರ ಠಾಣೆಗೆ ಕರೆ ತಂದಿದ್ದಾರೆ.. ನಾವು ದೇಶ ಕಾಯುವ ಸೈನಿಕರಿದ್ದಂಗೆ ಪ್ರೀಯಾಂಕ್ ಖರ್ಗೆ ನಮ್ಮ ಮೇಲೆ ಗುಂಡು ಹೊಡೆದ್ರೂ ಎದುರಿಸಲು ಸಿದ್ದ, ಅವರನ್ನ ಶೂಟ್ ಮಾಡಲೂ ಸಿದ್ದ ಎಂದು ಮಣಿಕಂಠ ರಾಠೋಡ್ ವಿವಾದಿತ ಹೇಳಿಕೆ ನೀಡಿದ್ದರು.

ಮಣಿಕಂಠ ರಾಠೋಡ ಹೇಳಿಕೆಯಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ, ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಬ್ರಹ್ಮಪುರ ಠಾಣೆಯಲ್ಲಿ ರಾಠೋಡ ವಿರುದ್ಧ ಜೀವ ಬೇದರಿಕೆ ಪ್ರಕರಣ ಕೂಡಾ ದಾಖಲಿಸಿದ್ದರು.

ಅಲ್ಲದೆ ಇಂದು ಕಲಬುರಗಿ ನಗರಕ್ಕೆ ಆಗಮಿಸುತ್ತಿರು ಸಿಎಂಗೆ ಮುತ್ತಿಗೆ ಹಾಕುವ ಎಚ್ಚರಿಕೆ ಕೂಡಾ ಕಾಂಗ್ರೆಸ್ ಕಾರ್ಯಕರ್ತರು ನೀಡಿದ್ದರು. ಇದೀಗ ಸಿಎಂ ಕಲಬುರಗಿಗೆ ಆಗಮನಕ್ಕೂ ಮುನ್ನವೇ ಮಣಿಕಂಠ ರಾಠೋಡ್‌ನನ್ನ ಅಂದರ್ ಮಾಡಲಾಗಿದೆ.

Exit mobile version