Home ಅಪರಾಧ ಪೊಕ್ಸೋ ಪ್ರಕರಣ: ೨೧ ವರ್ಷಗಳ ಜೈಲು ಶಿಕ್ಷೆ ಪ್ರಕಟ

ಪೊಕ್ಸೋ ಪ್ರಕರಣ: ೨೧ ವರ್ಷಗಳ ಜೈಲು ಶಿಕ್ಷೆ ಪ್ರಕಟ

0

ಬಾಗಲಕೋಟೆ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸೆಗಿದ್ದ ಪ್ರಕರಣದಲ್ಲಿ ಆರೋಪಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಶೀಘ್ರಗತಿ ನ್ಯಾಯಾಲಯ ೨೧ ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.
೨೦೨೨ರಲ್ಲಿ ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲಿನ ಆಪಾದನೆಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಸೈಯ್ಯದ ಬಲೇಗೂರ ರೆಹಮಾನ ಅವರು ಪೊಕ್ಸೋ ಕಾಯ್ದೆ ಸೆಕ್ಟನ್ ೪ರ ಅಡಿ ಅಪರಾಧಕ್ಕಾಗಿ ೨೦ ವರ್ಷ ಜೈಲು ಶಿಕ್ಷೆ, ೧೦ ಸಾವಿರ ದಂಡ ತಪ್ಪಿದಲ್ಲಿ ಹೆಚ್ಚುವರಿ ೩ ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದ್ದಾರೆ.
ಸೆಕ್ಷನ್ ೬ರ ಪೋಕ್ಸೋ ಕಾಯ್ದೆ ಅಡಿಯಲ್ಲಿ ೨೦ ಸರ್ವ ಜೈಲು ಶಿಕ್ಷೆ, ೧೦ ಸಾವಿರ ರೂ.ಗಳ ದಂಡ, ತಪ್ಪಿದಲ್ಲಿ ಹೆಚ್ಚುವರಿ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಕಲಂ ೩೬೩ಅಪರಾಧಕ್ಕೆ ೧ ವರ್ಷ ಕಠಿಣ ಜೈಲು ವಾಸದ ಶಿಕ್ಷೆ ಮತ್ತು ೨ ಸಾವಿರ ರೂ.ಗಳ ದಂಡ, ತಪ್ಪಿದಲ್ಲಿ ಹೆಚ್ಚುವರಿ ೧೫ ದಿನಗಳ ಜೈಲು ಶಿಕ್ಷೆಯನ್ನು ನೀಡಿದ್ದಾರೆ. ಏಕಕಾಲಕ್ಕೆ ಎರಡು ೨೦ ವರ್ಷಗಳ ಕಠಿಣ ಶಿಕ್ಷೆ ನೀಡಿದಂತಾಗಿದೆ.
ಪ್ರಕರಣದಲ್ಲಿ ನೊಂದ ಅಪ್ರಾಪ್ತೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ೪ ಲಕ್ಷ ರೂ.ಗಳ ಪರಿಹಾರಧನವನ್ನು ನೀಡುವಂತೆ ಸೂಚಿಸಲಾಗಿದೆ. ಪ್ರಕರಣದಲ್ಲಿ ವಿಶೇಷ ಜಿಲ್ಲಾ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಹಂಡಿ ಅವರು ಅಭಿಯೋಗದ ಪರವಾಗಿ ವಾದ ಮಂಡಿಸಿ, ಆರೋಪಿತನ ಮೇಲಿನ ಆಪಾದನೆಗಳನ್ನು ಸಾಬೀತುಪಡಿಸುವಲ್ಲಿ ಸಫಲರಾಗಿದ್ದಾರೆ.

Exit mobile version