Home ಅಪರಾಧ ಪಡಿತರ ಅಕ್ಕಿ ಸಾಗಾಟ ಓರ್ವನ ಬಂಧನ: ೧೧.೮೦ ಲಕ್ಷ ಮೌಲ್ಯದ ಅಕ್ಕಿ ವಶ

ಪಡಿತರ ಅಕ್ಕಿ ಸಾಗಾಟ ಓರ್ವನ ಬಂಧನ: ೧೧.೮೦ ಲಕ್ಷ ಮೌಲ್ಯದ ಅಕ್ಕಿ ವಶ

0

ಹುಬ್ಬಳ್ಳಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಗ್ರಾಮೀಣ ಠಾಣೆಯ ಪೊಲೀಸರು ಆತನಿಂದ ೧೧.೮೦ ಲಕ್ಷ ರೂ. ಮೌಲ್ಯದ ೫೦ ಕೆ.ಜಿ.ಯ ೮೦೦ ಚೀಲ ಅಕ್ಕಿ ಹಾಗೂ ಲಾರಿ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿಯಿಂದ ಹಾವೇರಿಗೆ ಅಕ್ಕಿ ಸಾಗಿಸುತ್ತಿರುವಾಗ ಗ್ರಾಮೀಣ ಪೊಲೀಸರು ಲಾರಿಯನ್ನು ಹಿಡಿದಿದ್ದಾರೆ. ಬಳಿಕ ಆರೋಪಿಯನ್ನು ವಿಚಾರಿಸಿದಾಗ ಸೂಕ್ತ ಮಾಹಿತಿ ಹಾಗೂ ದಾಖಲೆ ನೀಡಿಲ್ಲ ಎನ್ನಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Exit mobile version