Home ಅಪರಾಧ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಗುಳುಂ

ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಗುಳುಂ

0

ಗದಗ: ಮಹಿಳಾ ಸದಸ್ಯರಿಗೆ ಸಾಲ ನೀಡುವ ಖಾಸಗಿ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸೇರಿ ಮಹಿಳೆಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಪ್ರಕರಣ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣದಿಂದ ಸ್ವಸಹಾಯ ಗುಂಪಿನಲ್ಲಿ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡುತ್ತಿರುವ ಲಕ್ಷಾಂತರ ಜನ ಮಹಿಳೆಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ತಮ್ಮ ಹೆಸರಿನಲ್ಲಿರುವ ಸಾಲದ ಹಣವನ್ನು ಪರೀಕ್ಷಿಸಲು ಸ್ವಸಹಾಯ ಗುಂಪುಗಳ ಮುಖ್ಯಸ್ಥರ ಮನೆಗೆ, ವಿವಿಧ ಮಹಿಳಾ ಸಂಘ ಸಂಸ್ಥೆಗಳ ಕಚೇರಿಗೆ ಅಲೆದಾಡುತ್ತಿರುವದು ಸಾಮಾನ್ಯವಾಗಿದೆ.

Exit mobile version