Home ಅಪರಾಧ ದಾರಿ ಬಿಡುವ ವಿಚಾರಕ್ಕೆ ಜಗಳ: ಮಹಿಳೆ ಹತ್ಯೆ

ದಾರಿ ಬಿಡುವ ವಿಚಾರಕ್ಕೆ ಜಗಳ: ಮಹಿಳೆ ಹತ್ಯೆ

0

ಚಿತ್ರದುರ್ಗ: ಜಮೀನಲ್ಲಿ ದಾರಿ ಬಿಡುವ ವಿಚಾರಕ್ಕೆ ಎರಡು ಕುಟುಂಬಗಳ‌ ನಡಯವೆ ಜಗಳ ನಡೆದಿದ್ದು, ಜಗಳದಲ್ಲಿ ಓರ್ವ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಲಕ್ಷ್ಮಿದೇವರಹಳ್ಳಿಯಲ್ಲಿ ನಡೆದಿದೆ.
ಪಾಲಕ್ಷಮ್ಮ(40) ಕೊಲೆಯಾದ ಮಹಿಳೆಯಾಗಿದ್ದು, ಈಕೆ ಪತಿ ಪ್ರಸನ್ನ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಿರಿಯಳ್ಳಿ ರಾಜಪ್ಪನ ಕುಟುಂಬದಿಂದ ದಂಪತಿ ಮೇಲೆ ಹಲ್ಲೆ ನಡೆದಿದ್ದು, ಮಹಿಳೆಯ ಹತ್ಯೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version