Home ಅಪರಾಧ ಟ್ರ್ಯಾಕ್ಟರ್ ಪಲ್ಟಿ ಚಾಲಕ ಸ್ಥಳದಲ್ಲೆ ಸಾವು

ಟ್ರ್ಯಾಕ್ಟರ್ ಪಲ್ಟಿ ಚಾಲಕ ಸ್ಥಳದಲ್ಲೆ ಸಾವು

0

ಹುಬ್ಬಳ್ಳಿ: ತಾಲ್ಲೂಕಿನ ಅದರಗುಂಚಿ ಗ್ರಾಮದ ತೆಗ್ಗಿನ ಕೆರೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೆ ಮೃತಪಟ್ಟ ಘಟನೆ ಬೆಳ್ಳಿಗ್ಗೆ ನಡೆದಿದೆ.
ಟ್ಯಾಕ್ಟರ್ ಸವಾರ ಅಪಣ್ಣ ಮೃತಪಟ್ಟವರು. ಗ್ರಾಮದ ತೆಗ್ಗಿನಕೆರೆಯಲ್ಲಿ ಹೂಳುತ್ತೇವು ಸಮಯದಲ್ಲಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಮೃತಪಟ್ಟಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಮೃತಪಟ್ಟ ಅಪ್ಪಣ್ಣನ ಶವವನ್ನು ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದು,ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version