Home ಅಪರಾಧ ಜಿಮ್ ಮಾಲಿಕ ಆತ್ಮಹತ್ಯೆ

ಜಿಮ್ ಮಾಲಿಕ ಆತ್ಮಹತ್ಯೆ

0

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ಶಿರೂರು ಪಾರ್ಕ್ ಬಳಿಯ ಜಿಮ್ ವೊಂದರ ಮಾಲೀಕ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಿತೇಂದ್ರ ಶೀಗಿಹಳ್ಳಿ (48) ಎಂಬಾತ ತಮ್ಮ ಮನೆಯ ಕೊಠಡಿಯಲ್ಲಿನ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾರೆ.
ಮೇಲ್ಮನೆಯ ಕೊಠಡಿಗೆ ತೆರಳಿದ್ದ ಅವರು ತಡವಾದರೂ ಹೊರಗೆ ಬಂದಿರಲಿಲ್ಲ. ಬಾಗಿಲು ಬಡಿದರೂ ತೆರೆಯಲು ಬಂದಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬದವರು ಕಿಟಕಿಯಲ್ಲಿ‌ ನೋಡಿದಾಗ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಬಾಗಿಲು ಮುರಿದು ಜಿತೇಂದ್ರ ಅವರನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿರುವ ಬಗ್ಗೆ ವೈದ್ಯರು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Exit mobile version