ಚಿಕ್ಕಮಗಳೂರು: ಆಸ್ತಿ ಮಾರಾಟದಿಂದ ಬಂದ ಹಣ ಹಂಚಿಕೆ ವಿಚಾರದಲ್ಲಿ ನಡೆದ ಗಲಾಟೆ ವ್ಯಕ್ತಿ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ.
ಆಸ್ತಿ ಮಾರಾಟ ಮಾಡಲು ಮಧ್ಯಸ್ಥಿಕೆಗೆ ಬಂದಿದ್ದ ಕಾರ್ತಿಕ್ (45) ನನ್ನು ಮಚ್ಚಿನಿಂದ ಹಲ್ಲೆ ನಡೆಸಿ ಆರೋಪಿ ಸಂತೋಷ್ ಕೊಲೆ ಮಾಡಿದ್ದಾನೆ
ಸಂತೋಷ್ ಗೆ ಸೇರಿದ ಜಮೀನನ್ನು ಮಾರಾಟ ಮಾಡಲು ಕಾರ್ತಿಕ್ ಮಧ್ಯಸ್ಥಿಕೆ ವಹಿಸಿದ್ದ .
ಜಗಳ ಬಿಡಿಸಲು ಮಧ್ಯಪ್ರವೇಶ ಮಾಡಿದ ಕಾರ್ತಿಕ್ ತಂದೆ ತಾಯಿ ಮೇಲೂ ಹಲ್ಲೆ ನಡೆಸಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೃತ್ಯ ಎಸಗಿದ ಬಳಿಕ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು,
12 ಲಕ್ಷ ರೂ. ಹಣಕಾಸಿನ ವಿಚಾರವಾಗಿ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ . ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ