Home ಅಪರಾಧ ಆಕಸ್ಮಿಕ ಬೆಂಕಿಗೆ ಮನೆ ಆಹುತಿ

ಆಕಸ್ಮಿಕ ಬೆಂಕಿಗೆ ಮನೆ ಆಹುತಿ

0

ಬಳ್ಳಾರಿ(ಕೂಡ್ಲಿಗಿ): ಆಕಸ್ಮಿಕ ಬೆಂಕಿ ಅವಘಡದಿಂದಾಗಿ ವಾಸದ ಮನೆಯೊಂದು ಸುಟ್ಟು ಹೋಗಿರುವ ಘಟನೆ ತಾಲೂಕಿನ ಗುಂಡುಮುಣುಗು ಗ್ರಾಮದ ಪಂಚಾಯಿತಿ ವ್ಯಾಪ್ತಿಯ ಓಬಳಶೆಟ್ಟಿ ಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಗ್ರಾಮದ ಗೊಲ್ಲರ ನಿಂಗಮ್ಮ ಹನುಮಂತಪ್ಪ ಇವರಿಗೆ ಸೇರಿದ ಮನೆಯು ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ. ಮನೆಯಲ್ಲಿರುವ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ಯಾರು ಇಲ್ಲದೆ ಹೊಲದಲ್ಲಿನ ಬದುಕಿಗೆ ಹೋದಾಗ ಈ ಘಟನೆ ಸಂಭವಿಸಿದೆ.
ಗ್ರಾಮಸ್ಥರು ಸೇರಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಿಲ್ಲ. ಸಮೀಪದ ಅಗ್ನಿಶಾಮಕ ದಳಕ್ಕೆ ತಿಳಿಸಿದಾಗ, ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಈ ಮೂಲಕ ನೆರಹೊರೆಯ ಮನೆಗಳಿಗೆ ಬೆಂಕಿಯಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Exit mobile version