Home ಅಪರಾಧ ಅಪಘಾತಕ್ಕೆ ಇಬ್ಬರು ಬಲಿ

ಅಪಘಾತಕ್ಕೆ ಇಬ್ಬರು ಬಲಿ

0
accident

ಬೆಳಗಾವಿ: ಎರಡು ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಅಣ್ಣ, ತಂಗಿ ಸಾವನ್ನಪ್ಪಿದ್ದು, ಮತ್ತೊಂದು ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಬಳಿ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ-18 ರಲ್ಲಿ ನಡೆದಿದೆ.
ಮೃತರನ್ನು ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ಅಡಿವೆಪ್ಪ ಬಡಿಗೇರ (34), ಸಹೋದರಿ ಭಾಗ್ಯಶ್ರೀ ನವಿನ್ ಕಂಬಾರ (22) ಎಂದು ಗುರುತಿಸಲಾಗಿದೆ. ಧಾರವಾಡದಿಂದ ಕಪ್ಪಲಗುದ್ದಿ ಗ್ರಾಮಕ್ಕೆ ಹೊರಟದ್ದ ಟಾಟಾ ಟೀಯಾಗೋ ಕಾರ್ ಹಾಗೂ ಲೋಕಾಪೂರದಿಂದ ಪಣೆ ಕಡೆ ಹೊರಟಿದ್ದ ಎರಟೀಗಾ ಕಾರ್ ಮಧ್ಯೆ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಗೋಕಾಕದ ಉಮರಾಣಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version