Home ಅಪರಾಧ ಅಕ್ರಮ‌ ಗುಟ್ಕಾ ತಯಾರು ದಂಧೆ: 28 ಯುವಕರು ವಶಕ್ಕೆ

ಅಕ್ರಮ‌ ಗುಟ್ಕಾ ತಯಾರು ದಂಧೆ: 28 ಯುವಕರು ವಶಕ್ಕೆ

0

ಕಲಬುರಗಿ: ಅಕ್ರಮ‌ ಗುಟ್ಕಾ ತಯಾರು ಮಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರ ದಾಳಿ ನಡೆಸಿ 28 ಜನ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲಬುರಗಿ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ದಾಲ್‌‌ಮಿಲ್‌‌ನಲ್ಲಿ ಮಾಣಿಕ್‌ಚಂದ್ ಕಂಪನಿ ಹೆಸರಿನ ಮೇಲೆ ನಕಲಿ ಗುಟ್ಕಾ ತಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಗುಟ್ಕಾ, ಗುಟ್ಕಾ ತಯಾರು ಮಾಡುವ ಯಂತ್ರ ಜಪ್ತಿ ಮಾಡಿದ್ದಾರೆ.
ಯುಪಿ‌ ಬಿಹಾರ್, ಮಧ್ಯಪ್ರದೇಶದಿಂದ ಬಂದು ಕೆಲಸ ಮಾಡುತ್ತಿದ್ದ 28 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಣಿಕ್‌ಚಂದ್ ಗುಟ್ಕಾ ತಯಾರು ಮಾಡಿ ಹೊರದೇಶಕ್ಕೆ ರವಾನೆ ಮಾಡುತ್ತಿದ್ದರು. ತಂಬಾಕು ಮಿಶ್ರಿತ ಗುಟ್ಕಾ ಬ್ಯಾನ್ ಇದ್ರು ಇಲ್ಲಿ ತಂಬಾಕು ಮಿಶ್ರಿತ ಗುಟ್ಕಾ ತಯಾರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version