ಕ್ರೀಡೆ Archives - Samyukta Karnataka

ಶಫಾಲಿ ಸಿಡಿಲಬ್ಬರಕ್ಕೆ ಬಾಂಗ್ಲಾ ಧೂಳಿಪಟ: ಫೈನಲ್‌ಗೆ ಭಾರತ
ನಿಶಿನ್ (ಜಪಾನ್): ಮಹಿಳೆಯರ ಏಷ್ಯನ್ ಗೇಮ್ಸ್‌ ಕ್ರಿಕೆಟ್‌ನ 2ನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಮಹಿಳಾ ತಂಡ 114 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್‌ ಗಳಿಸಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 49 ಎಸೆತಗಳಲ್ಲಿ 100 ರನ್‌ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 9 ಸಿಕ್ಸರ್‌ಗಳು ಸೇರಿದ್ದವು. ಸ್ಮೃತಿ ಮಂದಾನ 37 ರನ್‌ ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 33 ಎಸೆತಗಳಲ್ಲಿ 40 ರನ್‌ ಕೊಡುಗೆ ನೀಡಿದರು.

196 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ 15.4 ಓವರ್‌ಗಳಲ್ಲಿ 81 ರನ್‌ಗಳಿಗೆ ಆಲೌಟ್‌ ಆಯಿತು. ದಿಲಾರಾ ಅಕ್ತರ್ 27 ರನ್‌ ಗಳಿಸಿದ್ದು ತಂಡದ ಪರ ಗರಿಷ್ಠ ಸ್ಕೋರ್‌ ಆಯಿತು.

ಭಾರತದ ಪರ ದೀಪ್ತಿ ಶರ್ಮಾ ಮತ್ತು ನಂದಿನಿ ಶರ್ಮಾ ತಲಾ 3 ವಿಕೆಟ್, ಶ್ರೇಯಾಂಕಾ ಪಾಟೀಲ್ 1 ವಿಕೆಟ್ ಪಡೆದು ಬಾಂಗ್ಲಾದೇಶದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಶಫಾಲಿ ವರ್ಮಾ ಅವರ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತ 114 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

22ರಂದು ಫೈನಲ್ ಪಂದ್ಯ: ಭಾರತ ತಂಡ ಸೆಪ್ಟೆಂಬರ್ 22ರಂದು ನಡೆಯಲಿರುವ ಚಿನ್ನದ ಪದಕದ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.

ಏಷ್ಯಾಡ್‌ ಅಖಾಡಕ್ಕೆ ಭಾರತದ ಕ್ರೀಡಾಪಟುಗಳು; ‘ಇದು ನಿಮ್ಮ ಕ್ಷಣ’ ಎಂದ ನೀತಾ ಅಂಬಾನಿ

The post ಶಫಾಲಿ ಸಿಡಿಲಬ್ಬರಕ್ಕೆ ಬಾಂಗ್ಲಾ ಧೂಳಿಪಟ: ಫೈನಲ್‌ಗೆ ಭಾರತ appeared first on Samyukta Karnataka.

ವಿಶ್ವ ಕೌಶಲ್ಯ ಸ್ಪರ್ಧೆಗೆ ಧಾರವಾಡದ ಇಬ್ಬರು ಯುವ ಪ್ರತಿಭೆಗಳ ಆಯ್ಕೆ
ವಿಶ್ವ ಕೌಶಲ್ಯ ಸ್ಪರ್ಧೆಗೆ ಧಾರವಾಡದ ಇಬ್ಬರು ಯುವ ಪ್ರತಿಭೆಗಳು; ಚೀನಾದಲ್ಲಿ ಭಾರತ ಪ್ರತಿನಿಧಿಸಲಿರುವ ಚರಣ್–ಸಿದ್ಧಾರೂಢ್

ಹುಬ್ಬಳ್ಳಿ: ಜಾಗತಿಕ ಕೌಶಲ್ಯ ವೇದಿಕೆಯಲ್ಲಿ ಧಾರವಾಡದ ಕೀರ್ತಿ ಮತ್ತೊಮ್ಮೆ ಮೊಳಗುವಂತಾಗಿದೆ. ರಾಯಾಪುರದಲ್ಲಿರುವ ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC)ನ ಇಬ್ಬರು ಯುವ ಪ್ರತಿಭೆಗಳು ಚೀನಾದ ಶಾಂಘೈನಲ್ಲಿ ನಡೆಯಲಿರುವ WorldSkills Competition 2026ರಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

GTTC ಧಾರವಾಡದ ವಿದ್ಯಾರ್ಥಿಗಳಾದ ಚರಣ್ ಎ.ಎಸ್. ಅವರು ಕಾಟ್ರಾನಿಕ್ಸ್ (Mechatronics) ವಿಭಾಗದಲ್ಲಿ ಹಾಗೂ ಸಿದ್ಧಾರೂಢ ಕಳ್ಳಿಹಾಳ್ ಅವರು CNC Milling ವಿಭಾಗದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.

ಕೌಶಲ್ಯದ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಒಂದಾಗಿರುವ WorldSkills Competition ಅನ್ನು ಸಾಮಾನ್ಯವಾಗಿ ‘ಕೌಶಲ್ಯದ ಒಲಿಂಪಿಕ್ಸ್’ ಎಂದು ಕರೆಯಲಾಗುತ್ತದೆ. ವಿವಿಧ ದೇಶಗಳ ಯುವ ಕೌಶಲ್ಯ ಪ್ರತಿಭೆಗಳು ತಮ್ಮ ತಾಂತ್ರಿಕ ಸಾಮರ್ಥ್ಯ, ನಿಖರತೆ, ವೇಗ ಮತ್ತು ಪ್ರಾಯೋಗಿಕ ಜ್ಞಾನವನ್ನು ಪ್ರದರ್ಶಿಸುವ ಈ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಧಾರವಾಡದ ವಿದ್ಯಾರ್ಥಿಗಳಿಗೆ ದೊರೆತಿರುವುದು ಜಿಲ್ಲೆಯ ಪಾಲಿಗೆ ಗಮನಾರ್ಹ ಸಾಧನೆಯಾಗಿದೆ.

ಜಿಲ್ಲಾಧಿಕಾರಿಯಿಂದ ಅಭಿನಂದನೆ : ವಿದ್ಯಾರ್ಥಿಗಳ ಸಾಧನೆಗೆ ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಭಿನಂದನೆ ಸಲ್ಲಿಸಿದ್ದಾರೆ. ಕೌಶಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ಈ ಸಾಧನೆ ಮತ್ತೊಮ್ಮೆ ತೋರಿಸಿಕೊಟ್ಟಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಣದ ಜತೆಗೆ ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಿದಾಗ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು ಎಂಬುದಕ್ಕೆ ಚರಣ್ ಮತ್ತು ಸಿದ್ಧಾರೂಢ್ ಅವರ ಸಾಧನೆ ಉತ್ತಮ ಉದಾಹರಣೆಯಾಗಿದೆ.

ಏಳು ವರ್ಷಗಳಿಂದ ವಿಶೇಷ ತರಬೇತಿ : GTTC ಧಾರವಾಡದ ಪ್ರಾಂಶುಪಾಲ ಶಿವಾನಂದ ಕುಂಬಾರ್ ಮಾತನಾಡಿ, ಸಂಸ್ಥೆಯು 1998ರಿಂದ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ ತರಬೇತಿ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಕಳೆದ ಏಳು ವರ್ಷಗಳಿಂದ WorldSkills ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಸಂಸ್ಥೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ. 2021ರಲ್ಲಿಯೂ GTTC ಧಾರವಾಡದ ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಿ ಶ್ರೇಷ್ಠತಾ ಪದಕ ಪಡೆದಿದ್ದರು. ಇದೀಗ ಇಬ್ಬರು ವಿದ್ಯಾರ್ಥಿಗಳು ಮತ್ತೊಮ್ಮೆ ಅಂತರರಾಷ್ಟ್ರೀಯ ವೇದಿಕೆಗೆ ಆಯ್ಕೆಯಾಗಿರುವುದು ಆ ಪರಂಪರೆಯನ್ನು ಮುಂದುವರಿಸಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ತರಬೇತುದಾರರು, ಪೋಷಕರ ಶ್ರಮವೂ ಕಾರಣ : ಚರಣ್ ಮತ್ತು ಸಿದ್ಧಾರೂಢ್ ಅವರ ಈ ಸಾಧನೆಯ ಹಿಂದೆ ಅವರ ವೈಯಕ್ತಿಕ ಪರಿಶ್ರಮದ ಜತೆಗೆ ತರಬೇತುದಾರರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ಹಾಗೂ ಸಂಸ್ಥೆಯ ನಿರಂತರ ತರಬೇತಿಯೂ ಪ್ರಮುಖ ಪಾತ್ರ ವಹಿಸಿದೆ.

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಎದುರಾಳಿಗಳನ್ನು ಮೀರಿಸಿ ಪ್ರಥಮ ಸ್ಥಾನ ಗಳಿಸಿರುವ ಇಬ್ಬರು ವಿದ್ಯಾರ್ಥಿಗಳು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಕಾಟ್ರಾನಿಕ್ಸ್ ಮತ್ತು CNC Millingನಂತಹ ಕೈಗಾರಿಕಾ ಕ್ಷೇತ್ರಕ್ಕೆ ನೇರವಾಗಿ ಸಂಬಂಧಿಸಿದ ಕೌಶಲ್ಯ ವಿಭಾಗಗಳಲ್ಲಿ ಅವರು ಭಾರತವನ್ನು ಪ್ರತಿನಿಧಿಸುತ್ತಿರುವುದು ವಿಶೇಷವಾಗಿದೆ.

ಧಾರವಾಡದ GTTC ಕೇಂದ್ರದಿಂದ ಹೊರಹೊಮ್ಮಿದ ಈ ಇಬ್ಬರು ಯುವ ಪ್ರತಿಭೆಗಳು ಶಾಂಘೈನಲ್ಲಿ ನಡೆಯಲಿರುವ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಭಾರತದ ಪರ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಈ ಮೂಲಕ ಧಾರವಾಡದ ಕೌಶಲ್ಯ ಶಿಕ್ಷಣದ ಹೆಗ್ಗಳಿಕೆ ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳುವಂತಾಗಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

The post ವಿಶ್ವ ಕೌಶಲ್ಯ ಸ್ಪರ್ಧೆಗೆ ಧಾರವಾಡದ ಇಬ್ಬರು ಯುವ ಪ್ರತಿಭೆಗಳ ಆಯ್ಕೆ appeared first on Samyukta Karnataka.

ಜಪಾನ್ ಮಣಿಸಿದ ಭಾರತ ವನಿತೆಯರು: ಶ್ರೀ ಚರಣಿ ದಾಖಲೆಯ ಬೌಲಿಂಗ್, ಸೆಮಿಫೈನಲ್‌ಗೆ ಲಗ್ಗೆ
ಜಪಾನ್‌ನ ನಿಸ್ಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಭಾರತ ತಂಡ ಆತಿಥೇಯ ಜಪಾನ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾದ ಉಭಯ ದೇಶಗಳ ಈ ಚಾರಿತ್ರಿಕ ಕದನದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಸಂಪೂರ್ಣ ಪ್ರಾಬಲ್ಯ ಮೆರೆದಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಆತಿಥೇಯ ಜಪಾನ್ ಆರಂಭದಲ್ಲಿ ಅಚ್ಚರಿಯ ಪ್ರತಿರೋಧ ತೋರಿತು. ಜಪಾನ್ ಆರಂಭಿಕ ಬ್ಯಾಟರ್‌ಗಳು ಯಾವುದೇ ವಿಕೆಟ್ ನಷ್ಟವಿಲ್ಲದೆ ಪವರ್‌ಪ್ಲೇನಲ್ಲಿ 24 ರನ್ ಸೇರಿಸಿದರು. ಆದರೆ, ನಂತರ ದಾಳಿಗಿಳಿದ ಭಾರತೀಯ ಸ್ಪಿನ್ನರ್‌ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಎಡಗೈ ಸ್ಪಿನ್ನರ್ ಶ್ರೀ ಚರಣಿ ಮಾರಕ ದಾಳಿ ಸಂಘಟಿಸಿ, 4 ಓವರ್‌ಗಳಲ್ಲಿ ಎರಡು ಮೇಡನ್ ಸಹಿತ ಕೇವಲ 10 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತೀಯ ಬೌಲರ್ ಒಬ್ಬರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಜತೆಗೆ ದೀಪ್ತಿ ಶರ್ಮಾ ಎರಡು ಆವೃತ್ತಿಗಳಲ್ಲಿ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡರೆ, ಶಫಾಲಿ ವರ್ಮಾ (2/13) ಸಾಥ್ ನೀಡಿದ ಪರಿಣಾಮವಾಗಿ ಜಪಾನ್ 19.5 ಓವರ್‌ಗಳಲ್ಲಿ 57 ರನ್‌ಗಳಿಗೆ ಆಲೌಟ್ ಆಯಿತು.

ಸುಲಭದ 58 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಕೇವಲ 5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಕೇವಲ 15 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 40 ರನ್ ಸಿಡಿಸಿ ಅಬ್ಬರಿಸಿದರು. ಜಪಾನ್‌ನ ನೊನೊಹಾ ಯಸುಮೊಟೊ ಮತ್ತು ಆಯಾಕಾ ಕ್ಯಾಟೊ ಐಸಿಸಿ ಪೂರ್ಣ ಸದಸ್ಯತ್ವ ರಾಷ್ಟ್ರದ ವಿರುದ್ಧ ತಮ್ಮ ದೇಶದ ಐತಿಹಾಸಿಕ ಮೊದಲ ವಿಕೆಟ್‌ಗಳನ್ನು ಪಡೆದರು.

ಈ ಅಮೋಘ ವಿಜಯದೊಂದಿಗೆ ಏಷ್ಯನ್ ಗೇಮ್ಸ್ ಸೆಮಿಫೈನಲ್‌ಗೆ ಮುನ್ನಡೆದಿರುವ ಭಾರತ ವನಿತೆಯರು, ಅಂತಿಮ ನಾಲ್ಕರ ಘಟ್ಟದ ಕದನದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.

The post ಜಪಾನ್ ಮಣಿಸಿದ ಭಾರತ ವನಿತೆಯರು: ಶ್ರೀ ಚರಣಿ ದಾಖಲೆಯ ಬೌಲಿಂಗ್, ಸೆಮಿಫೈನಲ್‌ಗೆ ಲಗ್ಗೆ appeared first on Samyukta Karnataka.

ಈ ಆಟಗಾರನ ಪರ ಗೌತಮ್ ಗಂಭೀರ್ ಬ್ಯಾಟಿಂಗ್: ವೈಭವ್ ಕಾಯಲೇಬೇಕು ಎಂದ ಕೋಚ್!
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 127 ರನ್‌ಗಳ ಭರ್ಜರಿ ಜಯ ಸಾಧಿಸಿ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಬೆನ್ನಲ್ಲೇ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡದ ಆಯ್ಕೆ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. 15 ವರ್ಷದ ಬಾಲಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಸರಣಿಯಲ್ಲಿ ಅವಕಾಶ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಗಂಭೀರ್, ಯುವ ಆಟಗಾರರು ತಮ್ಮ ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

‘ವೈಭವ್ ಅವರ ಬಳಿ ಅದ್ಭುತ ಪ್ರತಿಭೆ ಇರುವುದು ನಮಗೆ ತಿಳಿದಿದೆ. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಹೊಸಬರಿಗಿಂತ ಮೊದಲ ಆದ್ಯತೆ ಸಿಗುತ್ತದೆ. ಆಟಗಾರನಿಗೆ 15 ವರ್ಷವಿರಲಿ ಅಥವಾ 30 ವರ್ಷವಿರಲಿ, ಅವಕಾಶಕ್ಕಾಗಿ ಸರದಿಯಲ್ಲಿ ಕಾಯುವುದು ಅನಿವಾರ್ಯ. ವೈಭವ್‌ಗೆ ಅವಕಾಶ ಸಿಕ್ಕಾಗ ಅವರಿಗೆ ದೀರ್ಘಾವಧಿಯ ಕಾಲಾವಕಾಶ ನೀಡಲಾಗುವುದು’ ಎಂದು ಗಂಭೀರ್ ತಿಳಿಸಿದರು. ಇದೇ ವೇಳೆ ಸತತ ಎರಡು ಅರ್ಧಶತಕ ಸಿಡಿಸಿದ ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿದ ಕೋಚ್, ‘ಕೆಲವು ವೈಫಲ್ಯಗಳಿಂದಾಗಿ ವಿಶ್ವಕಪ್ ವಿಜೇತ ಆಟಗಾರರು ಕೆಟ್ಟವರಾಗುವುದಿಲ್ಲ. ಸ್ಯಾಮ್ಸನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ’ ಎಂದರು.

ಇನ್ನೊಂದೆಡೆ, ವೇಗದ ಬೌಲಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರ ಅಮೋಘ ಬೆಳವಣಿಗೆಯನ್ನು ಗಂಭೀರ್ ಹಾಡಿ ಹೊಗಳಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿಶ್ವಕಪ್ ದೃಷ್ಟಿಯಿಂದ ಸೀಮ್ ಬೌಲಿಂಗ್ ಆಲ್‌ರೌಂಡರ್‌ಗಳ ಪಾತ್ರ ಅತ್ಯಂತ ನಿರ್ಣಾಯಕ. ಸತತ ಪಂದ್ಯಗಳಲ್ಲಿ ತಲಾ ಮೂರು ವಿಕೆಟ್ ಪಡೆದು ಮಿಂಚಿರುವ ನಿತೀಶ್, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ.

ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ತರಾತುರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಗಂಭೀರ್, ಅವರು ಪುದುಚೇರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ‘ಭಾರತ ಎ’ ಸರಣಿಯಲ್ಲಿ 10 ಓವರ್ ಬೌಲಿಂಗ್ ಫಿಟ್‌ನೆಸ್ ಸಾಬೀತುಪಡಿಸಬೇಕಿದೆ ಎಂದರು. ಭವಿಷ್ಯದಲ್ಲಿ ಪಾಂಡ್ಯ ಮತ್ತು ನಿತೀಶ್ ರೆಡ್ಡಿ ಇಬ್ಬರೂ ಒಟ್ಟಿಗೆ ಆಡುವ ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ. ಅಲ್ಲದೆ, ಮುಂಬರುವ ವಿಂಡೀಸ್ ಏಕದಿನ ಸರಣಿಯಲ್ಲಿ ನಮನ್ ಧೀರ್ ಮತ್ತು ಆಕಿಬ್ ನಬಿ ಅವರಂತಹ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ಸಿಗಲಿದೆ ಎಂದು ತಿಳಿಸಿದರು.

The post ಈ ಆಟಗಾರನ  ಪರ ಗೌತಮ್ ಗಂಭೀರ್ ಬ್ಯಾಟಿಂಗ್: ವೈಭವ್ ಕಾಯಲೇಬೇಕು ಎಂದ ಕೋಚ್! appeared first on Samyukta Karnataka.

ಬಿಸಿಸಿಐ ಮುಖ್ಯ ಆಯ್ಕೆಗಾರರ ಹುದ್ದೆಯಿಂದ ಅಜಿತ್ ಅಗರ್ಕರ್ ಔಟ್? ರೇಸ್‌ನಲ್ಲಿ ಇಬ್ಬರು ಮಾಜಿ ಕ್ರಿಕೆಟಿಗರು!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಪುರುಷರ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಅವರಿಗೆ ಅವಧಿ ವಿಸ್ತರಣೆ ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಬಿಸಿಸಿಐನ ಮುಂಬರುವ ವಾರ್ಷಿಕ ಮಹಾಸಭೆಯಲ್ಲಿ (AGM) ನೂತನ ಚೀಫ್ ಸೆಲೆಕ್ಟರ್ ನೇಮಕವಾಗುವ ಸಾಧ್ಯತೆಯಿದ್ದು, ಈ ಮಹತ್ವದ ಹುದ್ದೆಯ ರೇಸ್‌ನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಪಾರ್ಥಿವ್ ಪಟೇಲ್ ಮತ್ತು ಪ್ರಗ್ಯಾನ್ ಓಜಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮುಂದಿನ ವರ್ಷದ ಏಕದಿನ ವಿಶ್ವಕಪ್‌ವರೆಗೆ ಅಗರ್ಕರ್ ಅವರ ಒಪ್ಪಂದವನ್ನು ಮುಂದುವರಿಸುವ ಕುರಿತು ವದಂತಿಗಳಿದ್ದವು. ಆದರೆ ಬಿಸಿಸಿಐನ ಪ್ರಮುಖ ವಲಯವು ಹೊಸ ಮುಖಕ್ಕೆ ಮಣೆ ಹಾಕಲು ನಿರ್ಧರಿಸಿದೆ. ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ವೈಟ್‌ಬಾಲ್ ಸರಣಿ ಹಾಗೂ ಇರಾನಿ ಟ್ರೋಫಿ ತಂಡಗಳ ಆಯ್ಕೆ ಸಭೆಯೇ ಅಗರ್ಕರ್ ಅಧ್ಯಕ್ಷತೆಯಲ್ಲಿ ನಡೆದ ಕೊನೆಯ ಸಭೆ ಎಂದು ಹೇಳಲಾಗುತ್ತಿದೆ.

ಐಪಿಎಲ್‌ನಲ್ಲಿ ತಲಾ ಮೂರು ಬಾರಿ ಚಾಂಪಿಯನ್ ಆಗಿರುವ ಮಾಜಿ ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ಮತ್ತು ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರ ಪೈಕಿ ಒಬ್ಬರು ಆಯ್ಕೆ ಸಮಿತಿಯ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ.

ಇನ್ನೊಂದೆಡೆ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಅವರನ್ನೂ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 138 ರನ್‌ಗಳ ಭರ್ಜರಿ ಶತಕ ಸಿಡಿಸುವ ಮೂಲಕ 39ರ ಹರೆಯದ ರೋಹಿತ್ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರು.

ರೋಹಿತ್ ಭವಿಷ್ಯದ ಕುರಿತು ಹಬ್ಬಿದ್ದ ಊಹಾಪೋಹಗಳನ್ನು ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ತಳ್ಳಿಹಾಕಿದ್ದು, ರೋಹಿತ್ ಶರ್ಮಾ ಆಯ್ಕೆಗಾರರ ಯೋಜನೆಯಲ್ಲಿರುವವರೆಗೂ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಅಗರ್ಕರ್ ನಿರ್ಗಮನದ ನಂತರ ನೂತನ ಮುಖ್ಯಸ್ಥರಾಗಿ ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

The post ಬಿಸಿಸಿಐ ಮುಖ್ಯ ಆಯ್ಕೆಗಾರರ ಹುದ್ದೆಯಿಂದ ಅಜಿತ್ ಅಗರ್ಕರ್ ಔಟ್? ರೇಸ್‌ನಲ್ಲಿ ಇಬ್ಬರು ಮಾಜಿ ಕ್ರಿಕೆಟಿಗರು! appeared first on Samyukta Karnataka.

LA28 ಒಲಿಂಪಿಕ್ಸ್‌ಗೆ ಭಾರತೀಯ ಬಾಕ್ಸರ್‌ಗಳ ದಾರಿ ಸ್ಪಷ್ಟ: BFI ಹೊಸ ಆಯ್ಕೆ ನೀತಿ ಪ್ರಕಟ
ನವದೆಹಲಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಭಾರತೀಯ ಬಾಕ್ಸರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹತೆ ಪಡೆಯುವ ಗುರಿಯೊಂದಿಗೆ ಭಾರತೀಯ ಬಾಕ್ಸಿಂಗ್ ಫೆಡರೇಶನ್ (BFI) ಹೊಸ ಆಯ್ಕೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ನೀತಿಯ ಮೂಲಕ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಭಾರತೀಯ ಬಾಕ್ಸರ್‌ಗಳ ಆಯ್ಕೆ ಪ್ರಕ್ರಿಯೆಯನ್ನು ಸ್ಪಷ್ಟಪಡಿಸುವ ಪ್ರಯತ್ನ ಮಾಡಲಾಗಿದೆ.

ಹೊಸ ವ್ಯವಸ್ಥೆಯಲ್ಲಿ 2026ರ ಏಷ್ಯನ್ ಗೇಮ್ಸ್ ಪ್ರಮುಖ ಪಾತ್ರ ವಹಿಸಲಿದ್ದು, ಅಲ್ಲಿ ಪದಕ ಗೆಲ್ಲುವ ಭಾರತೀಯ ಬಾಕ್ಸರ್‌ಗಳಿಗೆ 2027ರಲ್ಲಿ ಕಜಕಸ್ಥಾನದಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ನೇರ ಪ್ರವೇಶ ನೀಡುವ ವ್ಯವಸ್ಥೆಯನ್ನು BFI ರೂಪಿಸಿದೆ.

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಪ್ರಮುಖ ಅವಕಾಶ : 2026ರ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಬಾಕ್ಸರ್‌ಗಳು ತಮ್ಮ ತೂಕದ ವಿಭಾಗದಲ್ಲಿ 2027ರ ವಿಶ್ವ ಚಾಂಪಿಯನ್‌ಷಿಪ್‌ಗೆ ಭಾರತದ ಮುಖ್ಯ ಪ್ರವೇಶ (Main Entry) ಪಡೆಯಲಿದ್ದಾರೆ. ಅದೇ ವಿಭಾಗದಲ್ಲಿ 10ನೇ ಎಲೈಟ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಚಿನ್ನದ ಪದಕ ವಿಜೇತರನ್ನು ರಿಸರ್ವ್ ಎಂಟ್ರಿಯಾಗಿ ಪರಿಗಣಿಸಲಾಗುತ್ತದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕ ದೊರೆಯದ ತೂಕದ ವಿಭಾಗಗಳಲ್ಲಿ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಚಿನ್ನದ ಪದಕ ವಿಜೇತರಿಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮುಖ್ಯ ಪ್ರವೇಶ ನೀಡುವ ವ್ಯವಸ್ಥೆಯೂ ಇದೆ. ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧೆಯಲ್ಲಿರದ ಒಲಿಂಪಿಕ್ ತೂಕದ ವಿಭಾಗಗಳಿಗೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಫಲಿತಾಂಶವನ್ನು ಆಧಾರವಾಗಿರಿಸಲಾಗುತ್ತದೆ.

LA28 ಅರ್ಹತಾ ವ್ಯವಸ್ಥೆಯಲ್ಲಿ ಹಲವು ಅವಕಾಶ : World Boxing ರೂಪಿಸಿರುವ ಮತ್ತು IOC ಅನುಮೋದಿಸಿರುವ LA28 ಅರ್ಹತಾ ವ್ಯವಸ್ಥೆಯಲ್ಲಿ ಬಾಕ್ಸರ್‌ಗಳಿಗೆ ಒಟ್ಟು ನಾಲ್ಕು ಅವಕಾಶಗಳಷ್ಟೇ ಅಲ್ಲದೆ, 2027ರ ವಿಶ್ವ ಚಾಂಪಿಯನ್‌ಷಿಪ್, ಐದು ಖಂಡೀಯ ಅರ್ಹತಾ ಸ್ಪರ್ಧೆಗಳು ಹಾಗೂ 2028ರ ಎರಡು ವಿಶ್ವ ಅರ್ಹತಾ ಟೂರ್ನಿಗಳು ಸೇರಿವೆ. ಒಲಿಂಪಿಕ್ಸ್‌ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ತಲಾ ಏಳು ತೂಕದ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಒಟ್ಟು 248 ಕೋಟಾ ಸ್ಥಾನಗಳು ಲಭ್ಯವಿವೆ.

2027ರ ವಿಶ್ವ ಚಾಂಪಿಯನ್‌ಷಿಪ್ ಕಜಕಸ್ಥಾನದ ಅಸ್ತಾನಾದಲ್ಲಿ ನಡೆಯಲಿದೆ. ನಂತರ ಏಷ್ಯಾ ಅರ್ಹತಾ ಸ್ಪರ್ಧೆ ಚೀನಾದಲ್ಲಿ ನಡೆಯಲಿದ್ದು, 2028ರ ಎರಡು ವಿಶ್ವ ಅರ್ಹತಾ ಟೂರ್ನಿಗಳಿಗೆ ಇಟಲಿ ಮತ್ತು ಹಂಗೇರಿ ಆತಿಥ್ಯ ವಹಿಸಲಿವೆ. ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಪುರುಷರ ಮತ್ತು ಮಹಿಳೆಯರ ತಲಾ ಏಳು ಒಲಿಂಪಿಕ್ ತೂಕದ ವಿಭಾಗಗಳಲ್ಲಿ ಒಟ್ಟು 28 ಒಲಿಂಪಿಕ್ ಕೋಟಾ ಸ್ಥಾನಗಳು ಲಭ್ಯವಿರಲಿವೆ.

ಕ್ವೋಟಾ ಸ್ಥಾನ ತಪ್ಪಿದರೂ ಮತ್ತೊಂದು ಅವಕಾಶ : ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕೋಟಾ ಬೌಟ್ ಹಂತದವರೆಗೆ ತಲುಪಿದರೂ ಒಲಿಂಪಿಕ್ ಕೋಟಾ ಸ್ಥಾನ ಪಡೆಯಲು ವಿಫಲವಾಗುವ ಭಾರತೀಯ ಬಾಕ್ಸರ್‌ಗಳಿಗೆ ಏಷ್ಯನ್ ಕ್ವಾಲಿಫೈಯರ್‌ನಲ್ಲಿ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು BFI ತನ್ನ ಆಯ್ಕೆ ನೀತಿಯಲ್ಲಿ ಒಳಗೊಂಡಿದೆ. ಉಳಿದ ಸ್ಥಾನಗಳನ್ನು ರಾಷ್ಟ್ರೀಯ ಶಿಬಿರದಲ್ಲಿರುವ ಬಾಕ್ಸರ್‌ಗಳ ನಡುವೆ ನಡೆಯುವ ರ‍್ಯಾಂಕಿಂಗ್ ಟ್ರಯಲ್ಸ್ ಮೂಲಕ ಭರ್ತಿ ಮಾಡುವ ಉದ್ದೇಶವಿದೆ.

ಒಲಿಂಪಿಕ್ಸ್‌ನಲ್ಲಿ ಇಲ್ಲದ ತೂಕದ ವಿಭಾಗಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, 10ನೇ ಎಲೈಟ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಚಿನ್ನದ ಪದಕ ವಿಜೇತರು ಮುಖ್ಯ ಪ್ರವೇಶ ಹಾಗೂ ಬೆಳ್ಳಿ ಪದಕ ವಿಜೇತರು ರಿಸರ್ವ್ ಸ್ಥಾನ ಪಡೆಯಲಿದ್ದಾರೆ.

BFI ಅಧ್ಯಕ್ಷ ಅಜಯ್ ಸಿಂಗ್ ಅವರ ಪ್ರಕಾರ, ಭಾರತೀಯ ಬಾಕ್ಸರ್‌ಗಳಿಗೆ LA28 ತಲುಪಲು ಸ್ಪಷ್ಟವಾದ ಮಾರ್ಗಸೂಚಿ ಒದಗಿಸುವ ಉದ್ದೇಶದಿಂದ ಈ ಆಯ್ಕೆ ನೀತಿಯನ್ನು ರೂಪಿಸಲಾಗಿದೆ.

ಈ ನಡುವೆ World Boxing 2027-29ರ ಸ್ಪರ್ಧಾ ವೇಳಾಪಟ್ಟಿಯನ್ನು ರೂಪಿಸಿದ್ದು, ಒಲಿಂಪಿಕ್ ಅರ್ಹತಾ ಟೂರ್ನಿಗಳು, ವಿಶ್ವ ಚಾಂಪಿಯನ್‌ಷಿಪ್‌ಗಳು ಮತ್ತು World Boxing Cup ಸ್ಪರ್ಧೆಗಳನ್ನು ಒಳಗೊಂಡ ವ್ಯವಸ್ಥೆ ಪ್ರಕಟಿಸಿದೆ. 2026ರ World Boxing Cup Finalsನಲ್ಲಿ ದೊರೆಯುವ ರ‍್ಯಾಂಕಿಂಗ್ ಅಂಕಗಳು 2027 ಮತ್ತು 2028ರ ಒಲಿಂಪಿಕ್ ಅರ್ಹತಾ ಸ್ಪರ್ಧೆಗಳ ಸೀಡಿಂಗ್‌ಗೆ ಮಾರ್ಗದರ್ಶಿಯಾಗಲಿವೆ.

ಹೀಗಾಗಿ 2026ರ ಏಷ್ಯನ್ ಗೇಮ್ಸ್‌ನಿಂದಲೇ ಭಾರತೀಯ ಬಾಕ್ಸರ್‌ಗಳ LA28 ಒಲಿಂಪಿಕ್ ಪಯಣದ ಪ್ರಮುಖ ಹಂತ ಆರಂಭವಾಗಲಿದ್ದು, ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳ ಪ್ರದರ್ಶನವೂ ಆಯ್ಕೆ ಪ್ರಕ್ರಿಯೆಯಲ್ಲಿ ಮಹತ್ವ ಪಡೆಯಲಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

The post LA28 ಒಲಿಂಪಿಕ್ಸ್‌ಗೆ ಭಾರತೀಯ ಬಾಕ್ಸರ್‌ಗಳ ದಾರಿ ಸ್ಪಷ್ಟ: BFI ಹೊಸ ಆಯ್ಕೆ ನೀತಿ ಪ್ರಕಟ appeared first on Samyukta Karnataka.

RCB ಹರಾಜಿನ ಅಸಲಿ ಕಥೆ ಬಿಚ್ಚಿಟ್ಟ ಭುವನೇಶ್ವರ್ ಕುಮಾರ್
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಬರೋಬ್ಬರಿ 10.75 ಕೋಟಿ ರೂ. ನೀಡಿ ತನ್ನನ್ನು ಖರೀದಿಸಿದಾಗ ತಮಗೆ ತೀವ್ರ ಅಚ್ಚರಿಯಾಗಿತ್ತು ಎಂದು ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಬಹಿರಂಗಪಡಿಸಿದ್ದಾರೆ. ಖ್ಯಾತ ಕ್ರೀಡಾ ನಿರೂಪಕ ಜತಿನ್ ಸಪ್ರು ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಹರಾಜಿನ ದಿನ ಮೈದಾನದಲ್ಲಿ ನಡೆದ ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ಮೆಗಾ ಹರಾಜಿನ ಎರಡನೇ ದಿನ ತಮ್ಮ ಹೆಸರು ಬಿಡ್ಡಿಂಗ್‌ಗೆ ಬಂದಾಗ, ಭುವನೇಶ್ವರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸುತ್ತಿದ್ದರು. ‘ನಾವು ಮೈದಾನಕ್ಕೆ ಕಾಲಿಡುತ್ತಿದ್ದ ವೇಳೆ ತಂಡದ ವಿಡಿಯೋ ವಿಶ್ಲೇಷಕರು ಹರಾಜು ವೀಕ್ಷಿಸುತ್ತಿದ್ದರು. ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ನನಗಾಗಿ ಪೈಪೋಟಿ ನಡೆಸುತ್ತಿದ್ದವು. ಬಿಡ್ಡಿಂಗ್ 5 ರಿಂದ 6 ಕೋಟಿ ರೂ. ತಲುಪಿದಾಗ ಅಂಪೈರ್‌ಗಳು ಮೈದಾನ ಪ್ರವೇಶಿಸಿದ್ದರಿಂದ ನಾನು ಪಂದ್ಯವಾಡಲು ತೆರಳಬೇಕಾಯಿತು. ಪಂದ್ಯದ ಕೆಲವು ಓವರ್‌ಗಳ ಬಳಿಕ ಯಾರೋ ಬಂದು ಆರ್‌ಸಿಬಿ ನನ್ನನ್ನು 10.75 ಕೋಟಿಗೆ ಖರೀದಿಸಿದೆ ಎಂದರು. ಆರಂಭದಲ್ಲಿ ಬೇರೆ ತಂಡಗಳು ಬಿಡ್ ಮಾಡುತ್ತಿದ್ದ ಕಾರಣ ಆರ್‌ಸಿಬಿ ಖರೀದಿಸಿದ್ದು ನನಗೆ ಅಚ್ಚರಿ ತಂದಿತು’ ಎಂದು ಭುವಿ ಹೇಳಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಕ್ಕೂ ನನ್ನನ್ನು ತೆಗೆದುಕೊಳ್ಳುವ ಆಸೆಯಿತ್ತು, ಆದರೆ ಬಜೆಟ್ ಸಮಸ್ಯೆಯಿಂದ ಸಾಧ್ಯವಾಗಲಿಲ್ಲ ಎಂದು ಕೋಚ್ ಡೇನಿಯಲ್ ವೆಟ್ಟೋರಿ ಮೊದಲೇ ತಿಳಿಸಿದ್ದರು ಎಂದಿದ್ದಾರೆ. ಇನ್ನು ಬೃಹತ್ ಅಭಿಮಾನಿ ಬಳಗ ಹೊಂದಿರುವ ಆರ್‌ಸಿಬಿ ಸೇರಿದಾಗ ಯಾವುದೇ ಕಪ್ ಗೆಲ್ಲುವ ಅನಗತ್ಯ ಒತ್ತಡವಿರಲಿಲ್ಲ ಎಂದು ತಿಳಿಸಿದ್ದಾರೆ.

ತಮ್ಮ ಅನುಭವದ ಬಲದಿಂದ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಭುವನೇಶ್ವರ್ ಕುಮಾರ್, 2026ರ ಐಪಿಎಲ್‌ನಲ್ಲಿ 28 ವಿಕೆಟ್ ಕಬಳಿಸಿ ಆರ್‌ಸಿಬಿ ಬ್ಯಾಕ್-ಟು-ಬ್ಯಾಕ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಎರಡು ಋತುಗಳಲ್ಲಿ ಆರ್‌ಸಿಬಿ ಪರ 30 ಪಂದ್ಯಗಳಿಂದ ಒಟ್ಟು 45 ವಿಕೆಟ್ ಕಬಳಿಸಿ ತಂಡದ ಯಶಸ್ವಿ ಬೌಲರ್ ಆಗಿ ಮಿಂಚಿದ್ದಾರೆ.

The post RCB ಹರಾಜಿನ ಅಸಲಿ ಕಥೆ ಬಿಚ್ಚಿಟ್ಟ ಭುವನೇಶ್ವರ್ ಕುಮಾರ್ appeared first on Samyukta Karnataka.

ಮಹಿಳಾ ಫುಟ್‌ಬಾಲ್ ಅಭಿವೃದ್ಧಿಗೆ ದಲಿಮಾ ಛಿಬ್ಬರ್ ಸಾರಥ್ಯ: ತರಬೇತಿ, ಮಾರ್ಗದರ್ಶನಕ್ಕೆ ಹೊಸ ಯೋಜನೆ
ಮುಂಬೈ: ಭಾರತೀಯ ಮಹಿಳಾ ಫುಟ್‌ಬಾಲ್ ತಂಡದ ಪ್ರಮುಖ ಆಟಗಾರ್ತಿ ದಲಿಮಾ ಛಿಬ್ಬರ್ ಅವರು ನೋವಾ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ‘ಫುಟ್‌ಬಾಲ್ ಸಂಸ್ಕೃತಿ ಮತ್ತು ಆಟಗಾರರ ಅಭಿವೃದ್ಧಿ ಹಾದಿ’ (Football Culture & Player Pathways Lead) ವಿಭಾಗದ ಮುಖ್ಯಸ್ಥೆಯಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಭಾರತದಲ್ಲಿ ಹೆಣ್ಣುಮಕ್ಕಳ ಫುಟ್‌ಬಾಲ್‌ಗೆ ತಳಮಟ್ಟದಿಂದಲೇ ಬಲ ನೀಡುವುದು ಹಾಗೂ ಮುಂದಿನ ಪೀಳಿಗೆಯ ಆಟಗಾರ್ತಿಯರನ್ನು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದೊಂದಿಗೆ ಸಿದ್ಧಪಡಿಸುವುದು ಈ ಹೊಸ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಹೊಸ ಪಾತ್ರದಲ್ಲಿ ದಲಿಮಾ ಅವರು ನೋವಾ ಫುಟ್‌ಬಾಲ್ ಅಕಾಡೆಮಿಯ ತರಬೇತಿ ಪಠ್ಯಕ್ರಮ ರೂಪಿಸುವುದು, ಕಾರ್ಯಾಚರಣಾ ವಿಧಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆಟಗಾರ್ತಿಯರ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮುನ್ನಡೆಸಲಿದ್ದಾರೆ. ಆಟಗಾರ್ತಿಯರು, ತರಬೇತುದಾರರು ಹಾಗೂ ಪೋಷಕರ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಿಯೂ ಅವರು ಕಾರ್ಯನಿರ್ವಹಿಸಲಿದ್ದಾರೆ.

ಸಮಗ್ರ ಅಭಿವೃದ್ಧಿಗೆ ಆದ್ಯತೆ : ತಮ್ಮ ಹೊಸ ಜವಾಬ್ದಾರಿಯ ಕುರಿತು ಮಾತನಾಡಿರುವ ದಲಿಮಾ ಛಿಬ್ಬರ್, ತಾವು ಆಟಗಾರ್ತಿಯಾಗಿದ್ದ ಸಂದರ್ಭದಲ್ಲಿ ಕ್ರೀಡೆಯಲ್ಲಿ ಅಗತ್ಯವಾದ ವ್ಯವಸ್ಥೆ ಮತ್ತು ಬೆಂಬಲಕ್ಕಾಗಿ ಕಾಯಬೇಕಾಗಿತ್ತು ಎಂದು ಹೇಳಿದ್ದಾರೆ. ಇದೀಗ ತಳಮಟ್ಟದಿಂದ ವೃತ್ತಿಪರ ಹಂತದವರೆಗೆ ಹೆಣ್ಣುಮಕ್ಕಳಿಗೆ ಬೆಂಬಲ ನೀಡುವ ಪ್ರಯತ್ನ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡಾಪಟುವಾಗಿ ತಮ್ಮ ಅಂತಾರಾಷ್ಟ್ರೀಯ ಅನುಭವದ ಜತೆಗೆ ಕ್ರೀಡಾ ಮನೋವಿಜ್ಞಾನ ಕ್ಷೇತ್ರದ ಜ್ಞಾನವನ್ನೂ ಅಕಾಡೆಮಿಯ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಆಟಗಾರರ ಅಭಿವೃದ್ಧಿ ಕೇವಲ ಫುಟ್‌ಬಾಲ್ ಕೌಶಲ್ಯಕ್ಕೆ ಸೀಮಿತವಾಗಬಾರದು. ದೈಹಿಕ ಸಾಮರ್ಥ್ಯ, ಮಾನಸಿಕ ಸಿದ್ಧತೆ, ಪೌಷ್ಟಿಕಾಂಶ ಮತ್ತು ಸೂಕ್ತ ಮಾರ್ಗದರ್ಶನವೂ ಸಮಗ್ರ ಕ್ರೀಡಾಪಟು ಅಭಿವೃದ್ಧಿಯ ಭಾಗವಾಗಬೇಕು ಎಂಬುದಕ್ಕೆ ಅವರು ಒತ್ತು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೂಪರ್‌ನೋವಾ ಫುಟ್‌ಬಾಲ್ ಚಾಂಪಿಯನ್‌ಶಿಪ್ : ನೋವಾ ಸ್ಪೋರ್ಟ್ಸ್ ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಚೊಚ್ಚಲ ‘ಸೂಪರ್‌ನೋವಾ ಫುಟ್‌ಬಾಲ್ ಚಾಂಪಿಯನ್‌ಶಿಪ್’ (SNFC) ಆಯೋಜಿಸಿತ್ತು. ನಗರದ ವಿವಿಧ ಶಾಲೆಗಳ ನೂರಾರು ಹೆಣ್ಣುಮಕ್ಕಳು 7-ಎ-ಸೈಡ್ ಮಾದರಿಯ ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಫುಟ್‌ಬಾಲ್ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ಪಂದ್ಯಾವಳಿಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ದಲಿಮಾ, ತಮ್ಮ ಬಾಲ್ಯದ ದಿನಗಳಲ್ಲಿ ಇಂತಹ ಅವಕಾಶಗಳು ವಿರಳವಾಗಿದ್ದವು ಎಂದು ಹೇಳಿದ್ದರು. ತಳಮಟ್ಟದಲ್ಲೇ ಹೆಣ್ಣುಮಕ್ಕಳಿಗೆ ಪಂದ್ಯಾವಳಿ, ತರಬೇತಿ, ಮೂಲಸೌಕರ್ಯ ಮತ್ತು ಮಾರ್ಗದರ್ಶನದ ಅವಕಾಶಗಳನ್ನು ಒದಗಿಸುವುದು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರತಿಭೆಗಳು ಬೆಳೆಯಲು ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ಹೊಸ ಜವಾಬ್ದಾರಿಯ ಭಾಗವಾಗಿ ಮಹಿಳಾ ತರಬೇತುದಾರರನ್ನು ಸಬಲೀಕರಣಗೊಳಿಸುವುದು, ಕೋಚ್‌ಗಳ ನೆಟ್‌ವರ್ಕ್ ನಿರ್ಮಿಸುವುದು ಹಾಗೂ ತಳಮಟ್ಟದಲ್ಲಿ ಗುರುತಿಸಲ್ಪಡುವ ಪ್ರತಿಭಾವಂತ ಆಟಗಾರ್ತಿಯರಿಗೆ ಮುಂದಿನ ಹಂತದ ಅವಕಾಶಗಳನ್ನು ಕಲ್ಪಿಸುವ ವ್ಯವಸ್ಥೆ ರೂಪಿಸುವ ಗುರಿಯನ್ನೂ ದಲಿಮಾ ಹೊಂದಿದ್ದಾರೆ.

ತಳಮಟ್ಟದ ಫುಟ್‌ಬಾಲ್‌ನಿಂದ ರಾಷ್ಟ್ರೀಯ ಮಟ್ಟದವರೆಗೆ ನಿರಂತರ ಅಭಿವೃದ್ಧಿಯ ಹಾದಿ ನಿರ್ಮಾಣವಾದರೆ, ಭಾರತದಲ್ಲಿ ಮಹಿಳಾ ಫುಟ್‌ಬಾಲ್‌ಗೆ ಇನ್ನಷ್ಟು ಪ್ರತಿಭಾವಂತ ಆಟಗಾರ್ತಿಯರು ಹೊರಹೊಮ್ಮಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

The post ಮಹಿಳಾ ಫುಟ್‌ಬಾಲ್ ಅಭಿವೃದ್ಧಿಗೆ ದಲಿಮಾ ಛಿಬ್ಬರ್ ಸಾರಥ್ಯ: ತರಬೇತಿ, ಮಾರ್ಗದರ್ಶನಕ್ಕೆ ಹೊಸ ಯೋಜನೆ appeared first on Samyukta Karnataka.

ಅಗರ್ಕರ್ ಸಮಿತಿಯ ಮಹತ್ವದ ಸಭೆ: ODI–T20 ತಂಡದಲ್ಲಿ ಪ್ರಮುಖ ನಿರ್ಧಾರಗಳಿಗೆ ಕ್ಷಣಗಣನೆ
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳ ಸರಣಿಗೆ ಭಾರತ ತಂಡದ ಆಯ್ಕೆ ಇಂದು ನಡೆಯಲಿದೆ. ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಬುಧವಾರ ದೆಹಲಿಯಲ್ಲಿ ಸಭೆ ಸೇರಿ ಎರಡೂ ಮಾದರಿಯ ತಂಡಗಳನ್ನು ಅಂತಿಮಗೊಳಿಸಲಿದೆ. ಈ ಆಯ್ಕೆ ಸಭೆ ಅಗರ್ಕರ್ ಅವರ ಮುಖ್ಯ ಆಯ್ಕೆಗಾರರ ಅವಧಿಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಅವರ ಪ್ರಸ್ತುತ ಒಪ್ಪಂದ ಅಕ್ಟೋಬರ್ 4ರಂದು ಕೊನೆಗೊಳ್ಳಲಿದೆ ಎಂಬ ವರದಿಗಳಿವೆ.

ಭಾರತ–ವೆಸ್ಟ್ ಇಂಡೀಸ್ ಸರಣಿಯ ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್ 27ರಂದು ತಿರುವನಂತಪುರದಲ್ಲಿ ನಡೆಯಲಿದೆ. ನಂತರ ಸೆಪ್ಟೆಂಬರ್ 30ರಂದು ಗುವಾಹಟಿ ಮತ್ತು ಅಕ್ಟೋಬರ್ 3ರಂದು ನ್ಯೂ ಚಂಡೀಗಢದಲ್ಲಿ ಎರಡು ಹಾಗೂ ಮೂರನೇ ಏಕದಿನ ಪಂದ್ಯಗಳು ನಡೆಯಲಿವೆ. ಐದು ಪಂದ್ಯಗಳ ಟಿ20 ಸರಣಿ ಅಕ್ಟೋಬರ್ 6ರಂದು ಲಖನೌದಲ್ಲಿ ಆರಂಭವಾಗಿ, ಅಕ್ಟೋಬರ್ 9ರಂದು ರಾಂಚಿ, 11ರಂದು ಇಂದೋರ್, 14ರಂದು ಹೈದರಾಬಾದ್ ಮತ್ತು 16ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಈ ಬಾರಿ ತಂಡದ ಆಯ್ಕೆಗೆ ಏಷ್ಯನ್ ಗೇಮ್ಸ್‌ನ ವೇಳಾಪಟ್ಟಿ ಮತ್ತು ಆಟಗಾರರ ಲಭ್ಯತೆ ಪ್ರಮುಖ ಅಂಶವಾಗಿದೆ. ಏಷ್ಯನ್ ಗೇಮ್ಸ್‌ಗೆ ತೆರಳಿರುವ ಹಲವು ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಗೆ ಲಭ್ಯವಿರುವುದಿಲ್ಲ. ಹೀಗಾಗಿ 50 ಓವರ್‌ಗಳ ತಂಡದಲ್ಲಿ ಕೆಲವು ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಎಲ್ಲಕ್ಕಿಂತ ಪ್ರಮುಖವಾಗಿ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಆಯ್ಕೆ ಸಮಿತಿಯ ಮುಂದಿರುವ ಪ್ರಶ್ನೆಯಾಗಿದೆ. ಪಾಂಡ್ಯ ಅವರನ್ನು ಆಸ್ಟ್ರೇಲಿಯಾ ‘ಎ’ ವಿರುದ್ಧದ ಮೂರು ಏಕದಿನ ಪಂದ್ಯಗಳಿಗಾಗಿ ಭಾರತ ‘ಎ’ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಅವರ ಭಾಗವಹಿಸುವಿಕೆ ಫಿಟ್ನೆಸ್‌ಗೆ ಒಳಪಟ್ಟಿದೆ. ಇದರಿಂದ ವೆಸ್ಟ್ ಇಂಡೀಸ್ ವಿರುದ್ಧದ ODI ತಂಡಕ್ಕೆ ಅವರ ಲಭ್ಯತೆ ಇನ್ನೂ ಪ್ರಮುಖ ಚರ್ಚೆಯ ವಿಷಯವಾಗಿದೆ.

ಇದೇ ವೇಳೆ, ರಿಷಭ್ ಪಂತ್ ಅವರ ವೈಟ್-ಬಾಲ್ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಕೂಡ ಗಮನ ಸೆಳೆದಿದೆ. ಏಷ್ಯನ್ ಗೇಮ್ಸ್‌ಗೆ ಇಶಾನ್ ಕಿಶನ್ ತೆರಳಿರುವ ಹಿನ್ನೆಲೆಯಲ್ಲಿ ಪಂತ್‌ಗೆ ಅವಕಾಶದ ಸಾಧ್ಯತೆ ಕುರಿತು ವರದಿಗಳು ಬಂದಿವೆ. ಆದರೆ ಕೆ.ಎಲ್. ರಾಹುಲ್ ವಿಕೆಟ್‌ಕೀಪರ್ ಆಯ್ಕೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ ಎಂಬ ವಿಶ್ಲೇಷಣೆಯೂ ಇದೆ. ಧ್ರುವ ಜುರೆಲ್ ಅವರನ್ನೂ ಪರಿಗಣಿಸುವ ಸಾಧ್ಯತೆ ಇದೆ.

ರವೀಂದ್ರ ಜಡೇಜಾ ಅವರ ODI ಮರಳುವಿಕೆ ಮತ್ತೊಂದು ಕುತೂಹಲದ ಅಂಶವಾಗಿದೆ. ಅವರು 2026ರ ಜನವರಿಯ ನಂತರ ODI ಆಡಿಲ್ಲ. ಏಷ್ಯನ್ ಗೇಮ್ಸ್‌ಗಾಗಿ ಕೆಲವು ಪ್ರಮುಖ ಆಲ್‌ರೌಂಡರ್‌ಗಳು ಲಭ್ಯವಿಲ್ಲದಿರುವ ಹಿನ್ನೆಲೆಯಲ್ಲಿ ಜಡೇಜಾ ಅವರನ್ನು ಮತ್ತೆ ಪರಿಗಣಿಸಬಹುದೇ ಎಂಬ ಚರ್ಚೆ ನಡೆಯುತ್ತಿದೆ.

ಭಾರತ ತಂಡದ ಆಯ್ಕೆದಾರರಾಗಿ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಇಂದು ಕೊನೆಗೊಳ್ಳಬಹುದು : ಇದರ ನಡುವೆ, ಅಗರ್ಕರ್ ಮತ್ತು ಬಿಸಿಸಿಐ ಅಧಿಕಾರಿಗಳ ನಡುವಿನ ಸಂವಹನ ಹಾಗೂ ಅವರ ಒಪ್ಪಂದ ವಿಸ್ತರಣೆ ಕುರಿತ ಚರ್ಚೆಯೂ ವರದಿಗಳಲ್ಲಿ ಕಾಣಿಸಿಕೊಂಡಿದೆ. ಸೆಪ್ಟೆಂಬರ್ 3ರ ಬಿಸಿಸಿಐ ಪರಿಶೀಲನಾ ಸಭೆಗೆ ಅಗರ್ಕರ್ ಹಾಜರಾಗಿರಲಿಲ್ಲ ಮತ್ತು ಅವರ ಒಪ್ಪಂದ ಅಕ್ಟೋಬರ್ 4ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ವರದಿಯಾಗಿದೆ. ಆದರೆ ಅವರ ಮುಂದಿನ ಅವಧಿ ಕುರಿತು ಅಂತಿಮ ನಿರ್ಧಾರ ಇನ್ನೂ ಸ್ಪಷ್ಟವಾಗಿಲ್ಲ.

ಹೀಗಾಗಿ ಇಂದು ನಡೆಯುವ ಆಯ್ಕೆ ಸಭೆಯಲ್ಲಿ ಪಾಂಡ್ಯ ಅವರ ಫಿಟ್ನೆಸ್, ಪಂತ್ ಅವರ ವಾಪಸಿ, ಜಡೇಜಾ ಅವರ ODI ಸ್ಥಾನ, ಏಷ್ಯನ್ ಗೇಮ್ಸ್‌ನಿಂದ ಹೊರಗುಳಿಯುವ ಆಟಗಾರರ ಬದಲಾವಣೆ ಹಾಗೂ 2027ರ ವಿಶ್ವಕಪ್‌ಗಾಗಿ ODI ತಂಡದ ಸಂಯೋಜನೆ ಪ್ರಮುಖ ಚರ್ಚೆಯ ವಿಷಯಗಳಾಗಿವೆ. ಅಧಿಕೃತ ತಂಡ ಪ್ರಕಟವಾದ ಬಳಿಕ ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆಯಲಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

The post ಅಗರ್ಕರ್ ಸಮಿತಿಯ ಮಹತ್ವದ ಸಭೆ: ODI–T20 ತಂಡದಲ್ಲಿ ಪ್ರಮುಖ ನಿರ್ಧಾರಗಳಿಗೆ ಕ್ಷಣಗಣನೆ appeared first on Samyukta Karnataka.

ಶಿವನಿಂದ ಪ್ರೇರಿತ ವಾರಾಣಸಿಯ ಹೊಸ ಕ್ರಿಕೆಟ್ ತಾಣ ಅಂತಿಮ ಹಂತದಲ್ಲಿ : 2027ರ WPL ಮೇಲೆ ಕಣ್ಣು
ವಾರಾಣಸಿಯ ಗಂಜಾರಿ ಕ್ರೀಡಾಂಗಣಕ್ಕೆ ಹೊಸ ರೂಪ : ಶೇ.92ರಷ್ಟು ಕಾಮಗಾರಿ ಪೂರ್ಣ – ಡಮರು ಮಾದರಿ ಮೀಡಿಯಾ ಸೆಂಟರ್, ಘಾಟ್‌ಗಳಂತಿರುವ ಗ್ಯಾಲರಿ – ಅಂತಿಮ ಹಂತಕ್ಕೆ ಗಂಜಾರಿ ಕ್ರೀಡಾಂಗಣ

ವಾರಣಾಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಿರ್ಮಾಣವಾಗುತ್ತಿರುವ ಗಂಜಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಇದೀಗ ಕಾಮಗಾರಿಯ ಅಂತಿಮ ಹಂತಕ್ಕೆ ತಲುಪಿದೆ. ಇತ್ತೀಚಿನ ವರದಿಗಳ ಪ್ರಕಾರ, ಕ್ರೀಡಾಂಗಣದ ನಿರ್ಮಾಣ ಕಾಮಗಾರಿ ಶೇ.92ರಷ್ಟು ಪೂರ್ಣಗೊಂಡಿದ್ದು, 2027ರ ವೇಳೆಗೆ ಪ್ರಮುಖ ಕ್ರಿಕೆಟ್ ಪಂದ್ಯಗಳಿಗೆ ವೇದಿಕೆಯಾಗುವ ನಿರೀಕ್ಷೆ ಹೆಚ್ಚಾಗಿದೆ.

ಕೇವಲ ಕ್ರಿಕೆಟ್ ಪಂದ್ಯಗಳಿಗಾಗಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣ ಎನ್ನುವುದಕ್ಕಿಂತಲೂ, ಕಾಶಿ ನಗರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇದರ ವಿನ್ಯಾಸ ರೂಪಿಸಲಾಗಿದೆ. ಶಿವನಿಗೆ ಸಂಬಂಧಿಸಿದ ವಿನ್ಯಾಸದ ಅಂಶಗಳು ಕ್ರೀಡಾಂಗಣದ ಪ್ರಮುಖ ಆಕರ್ಷಣೆಯಾಗಿವೆ. ಮಾಧ್ಯಮ ಕೇಂದ್ರವನ್ನು ಡಮರು ಆಕಾರದಲ್ಲಿ, ಪ್ರೇಕ್ಷಕರ ಆಸನ ವ್ಯವಸ್ಥೆಯನ್ನು ವಾರಣಾಸಿಯ ಘಾಟ್‌ಗಳ ಮೆಟ್ಟಿಲುಗಳನ್ನು ನೆನಪಿಸುವ ರೀತಿಯಲ್ಲಿ ರೂಪಿಸಲಾಗಿದೆ. ತ್ರಿಶೂಲದ ಆಕಾರದ ಫ್ಲಡ್‌ಲೈಟ್‌ಗಳು ಮತ್ತು ಇತರ ವಿನ್ಯಾಸ ಅಂಶಗಳೂ ಯೋಜನೆಯ ವಿಶೇಷತೆಯಾಗಿವೆ.

ಸುಮಾರು 30.60 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಗೆ ವಾರಣಾಸಿ ಜಿಲ್ಲಾಡಳಿತದ ಅಧಿಕೃತ ಮಾಹಿತಿಯ ಪ್ರಕಾರ ₹330 ಕೋಟಿ ಯೋಜನಾ ವೆಚ್ಚ ನಿಗದಿಯಾಗಿದೆ. ಕ್ರೀಡಾಂಗಣದಲ್ಲಿ ಸುಮಾರು 30,000 ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಇರಲಿದ್ದು, ಮುಂದಿನ ಹಂತದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶವೂ ಇದೆ.

2023ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಕಾಮಗಾರಿ ಅಂತಿಮ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಮತ್ತು ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಮೂಲಕ ಮೈದಾನದ ಸಿದ್ಧತೆಯನ್ನು ಪರೀಕ್ಷಿಸುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ. 2026-27ರ ರಣಜಿ ಟ್ರೋಫಿ ಮೊದಲ ಹಂತದ ಪಂದ್ಯಗಳು ಅಕ್ಟೋಬರ್ 11ರಿಂದ ನವೆಂಬರ್ 5ರವರೆಗೆ ನಡೆಯಲಿವೆ ಎಂಬ ವೇಳಾಪಟ್ಟಿ ಪ್ರಕಟವಾಗಿದೆ.

ಗಂಜಾರಿ ಕ್ರೀಡಾಂಗಣದ ಪೂರ್ಣಗೊಳ್ಳುವಿಕೆ ಪೂರ್ವ ಉತ್ತರ ಪ್ರದೇಶದಲ್ಲಿ ಕ್ರಿಕೆಟ್ ಮೂಲಸೌಕರ್ಯಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ. ವಾರಣಾಸಿಗೆ ಪಂದ್ಯಗಳನ್ನು ವೀಕ್ಷಿಸಲು ಬರುವ ಕ್ರಿಕೆಟ್ ಅಭಿಮಾನಿಗಳ ಮೂಲಕ ಹೋಟೆಲ್, ಸಾರಿಗೆ, ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯಾಪಾರ ವಲಯಗಳಿಗೂ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

The post ಶಿವನಿಂದ ಪ್ರೇರಿತ ವಾರಾಣಸಿಯ ಹೊಸ ಕ್ರಿಕೆಟ್ ತಾಣ ಅಂತಿಮ ಹಂತದಲ್ಲಿ : 2027ರ WPL ಮೇಲೆ ಕಣ್ಣು appeared first on Samyukta Karnataka.