ದಕ್ಷಿಣ ಕನ್ನಡ Archives - Samyukta Karnataka

ಭೀಕರ ಅಪಘಾತ: ಟಿಪ್ಪರ್‌ಗೆ ಬೈಕ್ ಡಿಕ್ಕಿ – ತಾಯಿ-ಮಗ ಸಾವು
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣದ ಪುರಸಭಾ ವ್ಯಾಪ್ತಿಯ ಕೆಇಬಿ ಸಮೀಪದಲ್ಲಿ ಮಂಗಳವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಗಂಟಾಲ್ಕಟ್ಟೆ ನೀರಲ್ಕೆ ನಿವಾಸಿಗಳಾದ ಪ್ರೇಮಾ ಹಾಗೂ ಅವರ ಪುತ್ರ ಸೀನ ಯಾನೆ ಶ್ರೀನಿವಾಸ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರಿಬ್ಬರು ಮೂಡುಬಿದಿರೆಯಿಂದ ಗಂಟಾಲ್ಕಟ್ಟೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ವೇಗವಾಗಿ ಢಿಕ್ಕಿ ಹೊಡೆದಿದ್ದಾರೆ.

ಅಪಘಾತದ ತೀವ್ರತೆಗೆ ತಾಯಿ ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪುತ್ರ ಸೀನ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

Donald Trump  ಕಠಿಣ ಸಂದೇಶ: ಜಾಗತಿಕ ತೈಲ ಮಾರುಕಟ್ಟೆ ತಲ್ಲಣ

The post ಭೀಕರ ಅಪಘಾತ: ಟಿಪ್ಪರ್‌ಗೆ ಬೈಕ್ ಡಿಕ್ಕಿ – ತಾಯಿ-ಮಗ ಸಾವು appeared first on Samyukta Karnataka.

ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ವಿದ್ಯಾರ್ಥಿಗಳು: ಗಂಭೀರ ಗಾಯ
ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ ಬಾಗಿಲು ತೆರೆದು ಇಬ್ಬರು ವಿದ್ಯಾರ್ಥಿನಿಯರು ಕೆಳಗೆ ಬಿದ್ದ ಘಟನೆ – ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿತು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ಸಂಭವಿಸಿದ ಭೀಕರ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವೇಗವಾಗಿ ಸಂಚರಿಸುತ್ತಿದ್ದ KSRTC ಬಸ್‌ನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಘಟನೆಯ ವಿವರಗಳ ಪ್ರಕಾರ, ಪುತ್ತೂರಿನಿಂದ ಧರ್ಮಸ್ಥಳದತ್ತ ತೆರಳುತ್ತಿದ್ದ ಬಸ್ಸಿಗೆ ಗೇರುಕಟ್ಟೆ ಪ್ರದೇಶದಲ್ಲಿ ಅಕ್ಕ-ತಂಗಿಯರಾದ ಇಬ್ಬರು ವಿದ್ಯಾರ್ಥಿನಿಯರು ಹತ್ತಿದ್ದರು. ಬಸ್ ಕಳಿಯ ಗ್ರಾಮದ ರೇಷ್ಮೆ ರಸ್ತೆ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಬಾಗಿಲು ಏಕಾಏಕಿ ತೆರೆದಿದೆ. ಈ ವೇಳೆ ಬಾಗಿಲ ಬಳಿ ನಿಂತಿದ್ದ ಅಕ್ಕ ಮೊದಲು ಕೆಳಗೆ ಬಿದ್ದಿದ್ದು, ಅವರನ್ನು ಹಿಡಿಯಲು ಯತ್ನಿಸಿದ ತಂಗಿಯೂ ನಿಯಂತ್ರಣ ತಪ್ಪಿ ಹೊರಗೆ ಎಸೆಯಲ್ಪಟ್ಟಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೃಶ್ಯವನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ.

ತಕ್ಷಣ ಸ್ಥಳೀಯರು ಧಾವಿಸಿ ಇಬ್ಬರು ವಿದ್ಯಾರ್ಥಿನಿಯರನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪ್ರಕಾರ, ಇಬ್ಬರೂ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ.

ಇಬ್ಬರು ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು. ಈ ಘಟನೆ ಕುರಿತು KSRTC ಅಧಿಕಾರಿಗಳು ವರದಿ ಕೋರಿದ್ದಾರೆ, ಬೆಳ್ತಂಗಡಿ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಬಸ್ ಡ್ರೈವ‌ರ್ ಮತ್ತು ಕಂಡಕ್ಟರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆ ಬಳಿಕ ಬಸ್ ನಿರ್ವಹಣೆ, ಬಾಗಿಲಿನ ಭದ್ರತೆ ಮತ್ತು ಚಾಲಕರ ಜವಾಬ್ದಾರಿತನ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕರಾವಳಿ ಭದ್ರತೆಗೆ ಹೊಸ ಶಕ್ತಿ: ಸ್ವದೇಶಿ ತಂತ್ರಜ್ಞಾನದ ‘Yard-1280’

The post ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ವಿದ್ಯಾರ್ಥಿಗಳು: ಗಂಭೀರ ಗಾಯ appeared first on Samyukta Karnataka.

ಈಜಲು ಹೋಗಿದ್ದ ಬಾಲಕ ನದಿಯಲ್ಲಿ ಮುಳುಗಿ ಸಾವು
ಬೆಳ್ತಂಗಡಿ: ನಡ ಗ್ರಾಮದ ಅಂತ್ರಾಯಪಲ್ಕೆ ಎಂಬಲ್ಲಿರುವ ಅಂತ್ರಾಯ ಗುಂಡಿಗೆ ಈಜಲು ಹೋದ ನಾಲ್ಕು ಮಂದಿ ಬಾಲಕರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕುಂಟಿನಿ ನಿವಾಸಿ ಹಸನಬ್ಬ ಪುತ್ರ ಮಹಮ್ಮದ್ ಹಫೀಝ್ (14) ಮೃತಪಟ್ಟ ಬಾಲಕನಾಗಿದ್ದಾ‌ನೆ. ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

The post ಈಜಲು ಹೋಗಿದ್ದ ಬಾಲಕ ನದಿಯಲ್ಲಿ ಮುಳುಗಿ ಸಾವು appeared first on Samyukta Karnataka.

ಮಂಗಳೂರು ವಿವಿ : ಹರೇಕಳ ಹಾಜಬ್ಬ ಸೇರಿ ಮೂವರಿಗೆ ಗೌರವ ಡಾಕ್ಟರೇಟ್
44ನೇ ಘಟಿಕೋತ್ಸವ: 162 ಪಿಎಚ್‌ಡಿ, 56 ಚಿನ್ನದ ಪದಕ ಪ್ರದಾನ – ದೈವ ನರ್ತಕನಿಗೂ ಮೊದಲ ಬಾರಿಗೆ ಡಾಕ್ಟರೇಟ್ ಗೌರವ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ತನ್ನ 44ನೇ ಘಟಿಕೋತ್ಸವದ ಅಂಗವಾಗಿ ಸಮಾಜ ಸೇವೆ, ಜನಪದ ಸಂಸ್ಕೃತಿ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದ ಮೂವರು ಗಣ್ಯರನ್ನು ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ. ಈ ಕುರಿತು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾಹಿತಿ ನೀಡಿದ್ದಾರೆ.

ಗೌರವ ಡಾಕ್ಟರೇಟ್‌ಗೆ ಆಯ್ಕೆಯಾದವರಲ್ಲಿ ಹರೇಕಳ ಹಾಜಬ್ಬ, ಇತ್ತೀಚೆಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಸೇರಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಈ ಗೌರವ ಪ್ರದಾನ ಮಾಡಲಾಗುತ್ತಿದೆ.

ಇದಲ್ಲದೆ, ನಿಧನರಾದ ಗೋವಿಂದ ಭಟ್ ಅವರಿಗೆ ಏಪ್ರಿಲ್ 13ರಂದು ಅವರ ನಿವಾಸದಲ್ಲೇ ಗೌರವ ಡಾಕ್ಟರೇಟ್ ಪ್ರದಾನ ಮಾಡುವುದಾಗಿ ತಿಳಿಸಲಾಗಿದೆ. ಉಳಿದ ಇಬ್ಬರಿಗೆ ಘಟಿಕೋತ್ಸವ ಸಮಾರಂಭದಲ್ಲೇ ಈ ಗೌರವ ನೀಡಲಾಗುತ್ತದೆ. ವಿಶೇಷವಾಗಿ ದೈವ ನರ್ತಕರೊಬ್ಬರಿಗೆ ಇದೇ ಮೊದಲ ಬಾರಿಗೆ ಈ ಗೌರವ ನೀಡುತ್ತಿರುವುದು ಗಮನಾರ್ಹ ಸಂಗತಿ.

ಘಟಿಕೋತ್ಸವವು ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಈ ಬಾರಿ ಘಟಿಕೋತ್ಸವದಲ್ಲಿ 162 ಪಿಎಚ್‌ಡಿ ಪದವಿಗಳು, 56 ಚಿನ್ನದ ಪದಕಗಳು ಹಾಗೂ 57 ನಗದು ಬಹುಮಾನಗಳನ್ನು ಪ್ರದಾನ ಮಾಡಲಾಗುತ್ತದೆ. ಒಟ್ಟು 147 ರ್ಯಾಂಕ್‌ಗಳು ಘೋಷಿಸಲ್ಪಟ್ಟಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ದಾಖಲಿಸಿದ್ದಾರೆ.

ಒಟ್ಟು 22,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 19,568 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇ.88.74 ಆಗಿದೆ. ಸ್ನಾತಕ ವಿಭಾಗದಲ್ಲಿ ಶೇ.87.87 ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಶೇ.93.86 ಫಲಿತಾಂಶ ದಾಖಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಗಮನ ಸೆಳೆಯುತ್ತಿದೆ.

ನೇಪಾಳ: Gen Z ಕಣ್ಮಣಿ ಬಾಲೇಂದ್ರ ಶಾ ಪ್ರಧಾನಿಯಾಗಿ ಪದಗ್ರಹಣ

The post ಮಂಗಳೂರು ವಿವಿ : ಹರೇಕಳ ಹಾಜಬ್ಬ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ appeared first on Samyukta Karnataka.

ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ
ಉಳ್ಳಾಲ (ದಕ್ಷಿಣ ಕನ್ನಡ): ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಉಳ್ಳಾಲ ಸಮೀಪದ ತೊಕ್ಕೊಟ್ಟು ಫ್ಲೈಓವರ್ ಬಳಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಮೃತನನ್ನು ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್ (46) ಯಾನೆ “ಟ್ಯಾಬ್ಲೆಟ್ ಆರೀಫ್” ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಆರೀಫ್, ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಬುಲೆಟ್ ಬೈಕ್‌ನಲ್ಲಿ ಮಂಗಳೂರಿನತ್ತ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ತಂಡ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸ್ಥಳದಲ್ಲೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.

ಹಳೆಯ ವೈಷಮ್ಯವೇ ಕಾರಣ? : ಈ ಕೊಲೆಗೆ ಹಳೆಯ ವೈಷಮ್ಯವೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 2022ರ ಮೇ ತಿಂಗಳಲ್ಲಿ ಕೂಡ ಆರೀಫ್ ಮೇಲೆ ಇದೇ ರೀತಿಯಲ್ಲಿ ದಾಳಿ ನಡೆದಿದ್ದು, ಬಜಾಲ್ ಮೂಲದ ಟೊಪ್ಪಿ ನೌಫಾಲ್ ತಂಡ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿತ್ತು. ಆ ಪ್ರಕರಣದ ಮುಂದುವರಿದ ಪರಿಣಾಮವೇ ಈ ಹತ್ಯೆ ಆಗಿರಬಹುದು ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿವಾಹಿತನಾಗಿದ್ದ ಆರೀಫ್ ಮೂಲತಃ ಕುದ್ರೋಳಿ ನಿವಾಸಿಯಾಗಿದ್ದು, ಕಳೆದ ಏಳು ವರ್ಷಗಳಿಂದ ಕುಟುಂಬ ಸಮೇತ ಮುಳ್ಳುಗುಡ್ಡೆ ಪ್ರದೇಶದಲ್ಲಿ ವಾಸವಾಗಿದ್ದರು. ಅವರ ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.

ಪೊಲೀಸ್ ತನಿಖೆ ಚುರುಕು : ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎನ್ ಹಾಗೂ ಸೋಕೋ (SOCO) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

The post ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ appeared first on Samyukta Karnataka.

ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ – ಓರ್ವ ಸಾವು, 9 ಮಂದಿಗೆ ಗಂಭೀರ ಗಾಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟಿಟಿ ವಾಹನ ಪಲ್ಟಿಯಾದ ಪರಿಣಾಮ ಓರ್ವ ವೃದ್ಧ ಸಾವನ್ನಪ್ಪಿ, ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಮಾರ್ಚ್ 21ರಂದು ಬೆಳಗ್ಗೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೇಲನಹಳ್ಳಿ ನಿವಾಸಿಗಳು ಒಂದೇ ಕುಟುಂಬದ ಸದಸ್ಯರು ಸೇರಿ 13 ಮಂದಿ ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು.

ಚಾರ್ಮಾಡಿ ಘಾಟ್‌ನ ಒಂಬತ್ತನೇ ತಿರುವಿನಲ್ಲಿ ವಾಹನದ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಮೇಲನಹಳ್ಳಿ ನಿವಾಸಿ ಶೇಖರಪ್ಪ (59) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಮಕ್ಕಳು ಸೇರಿದಂತೆ ಹಲವರ ಸ್ಥಿತಿ ಚಿಂತಾಜನಕವಾಗಿರುವ ಮಾಹಿತಿ ಲಭ್ಯವಾಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ಕಿಶೋರ್ ಪಿ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಚಾರ್ಮಾಡಿ ಘಾಟ್‌ನಂತಹ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ವೇಗ ನಿಯಂತ್ರಣ ಮತ್ತು ವಾಹನದ ತಾಂತ್ರಿಕ ಸ್ಥಿತಿಯ ಮಹತ್ವವನ್ನು ಈ ಘಟನೆ ಮತ್ತೊಮ್ಮೆ ಎತ್ತಿಹಿಡಿದಿದೆ.

RCB ಪಂದ್ಯ: ಕ್ರೀಡಾಂಗಣ ಪ್ರವೇಶ ನಿಯಮಗಳಲ್ಲಿ ಬದಲಾವಣೆ

The post ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ – ಓರ್ವ ಸಾವು, 9 ಮಂದಿಗೆ ಗಂಭೀರ ಗಾಯ appeared first on Samyukta Karnataka.

MBBL ತಿದ್ದುಪಡಿ: ಡಿಪ್ಲೋಮಾ ಇಂಜಿನಿಯರ್‌ಗಳಿಗೆ ಮತ್ತೆ ಅವಕಾಶ
ರಾಜ್ಯದ ಡಿಪ್ಲೋಮಾ ಇಂಜಿನಿಯರಗಳ ಬೇಡಿಕೆಗೆ ಕೊನೆಗೂ ಮನ್ನಣೆ

ಬೆಂಗಳೂರು/ ಮಂಗಳೂರು: ರಾಜ್ಯ ಸರ್ಕಾರವು ಕಟ್ಟಡ ನಿರ್ಮಾಣ ನಿಯಮಾವಳಿಗಳಲ್ಲಿ ಮಹತ್ವದ ತಿದ್ದುಪಡಿ ಮಾಡಿದ್ದು, ಡಿಪ್ಲೋಮಾ ಇನ್ ಸಿವಿಲ್ ಎಂಜಿನಿಯರ್‌ಗಳಿಗೆ ಇದ್ದ ನಿರ್ಬಂಧಗಳನ್ನು ಸಡಿಲಿಸಿ, ಅನುಭವ ಹೊಂದಿದವರಿಗೆ ಸಂಪೂರ್ಣ ಹಕ್ಕುಗಳನ್ನು ಮರುಸ್ಥಾಪಿಸಿದೆ.

ಈ ಮೊದಲು 2017ರ ನೋಟಿಫಿಕೇಷನ್ ಆಧಾರದ ಮೇಲೆ ಜಾರಿಗೆ ಬಂದ Model Building Bye-Laws (MBBL) ಪ್ರಕಾರ, ಡಿಪ್ಲೋಮಾ ಇಂಜಿನಿಯರ್‌ಗಳನ್ನು ‘ಸೂಪರ್‌ವೈಸರ್’ ಎಂದು ಪರಿಗಣಿಸಿ, ಕೇವಲ 100 ಚದರ ಮೀಟರ್ ಪ್ರದೇಶ ಮತ್ತು 7.5 ಮೀಟರ್ ಎತ್ತರದ ಕಟ್ಟಡಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.

ಹೊಸ ತಿದ್ದುಪಡಿ ಏನು ಹೇಳುತ್ತದೆ?: ಇದೀಗ ಸರ್ಕಾರ ಈ ನಿಯಮಕ್ಕೆ ತಿದ್ದುಪಡಿ ಮಾಡಿ, 10 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ ಡಿಪ್ಲೋಮಾ ಇಂಜಿನಿಯರ್‌ಗಳಿಗೆ ಪೂರ್ವದಲ್ಲಿ ಇದ್ದಂತೆ ಎಲ್ಲಾ ರೀತಿಯ ಕಟ್ಟಡ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶ ನೀಡಿದೆ.

ಸಾರ್ವಜನಿಕರು, ವೃತ್ತಿಪರರಿಗೆ ಉಂಟಾದ ತೊಂದರೆ: ಈ ನಿಯಮವನ್ನು ಮಂಗಳೂರು ಮಹಾನಗರ ಪಾಲಿಕೆ (Mangaluru City Corporation) ಸೇರಿದಂತೆ ಹಲವಾರು ಸ್ಥಳೀಯ ಸಂಸ್ಥೆಗಳ ಬೈಲಾದಲ್ಲಿಯೂ ಅಳವಡಿಸಲಾಗಿದ್ದರಿಂದ, 20–35 ವರ್ಷಗಳ ಅನುಭವ ಹೊಂದಿದ್ದ ಇಂಜಿನಿಯರ್‌ಗಳು ಕೆಲಸದ ಅವಕಾಶ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸಿದ್ದರು. ಇದರಿಂದ ಸಾರ್ವಜನಿಕರಿಗೂ ಕಟ್ಟಡ ಅನುಮತಿ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗಿತ್ತು.

ಹೋರಾಟಕ್ಕೆ ಸಿಕ್ಕ ಜಯ: ರಾಜ್ಯದ ವಿವಿಧ ಜಿಲ್ಲೆಗಳ ಡಿಪ್ಲೋಮಾ ಇಂಜಿನಿಯರ್‌ಗಳ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಸ್ಪೀಕರ್ ಯು.ಟಿ ಖಾದರ್ ಪ್ರಮುಖ ಪಾತ್ರವಹಿಸಿದ್ದರು.

ಅಧಿವೇಶನದಲ್ಲಿಯೂ ವಿಷಯ ಪ್ರಸ್ತಾಪ: ಶಾಸಕ ಕಾಮತ್ ಅಧಿವೇಶನದಲ್ಲಿಯೂ ಪ್ರಸ್ತಾಪಿಸಿ ಸಚಿವ ಭೈರತಿ ಸುರೇಶ್ ಗಮನಕ್ಕೆ ತಂದಿದ್ದರು, ಹಾಗೂ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ (Deepa Cholan) ಮಟ್ಟದಲ್ಲಿ ನಿರಂತರ ಚರ್ಚೆಗಳು ನಡೆದಿದ್ದವು.

ಸರ್ಕಾರದ ಅಂತಿಮ ನಿರ್ಧಾರ: ಈ ಎಲ್ಲಾ ಪ್ರಯತ್ನಗಳ ಫಲವಾಗಿ, ರಾಜ್ಯ ಸರ್ಕಾರವು 2017ರ ನಿಯಮಕ್ಕೆ ತಿದ್ದುಪಡಿ ಮಾಡಿ ಅನುಭವಸಂಪನ್ನ ಡಿಪ್ಲೋಮಾ ಇಂಜಿನಿಯರ್‌ಗಳಿಗೆ ಮತ್ತೆ ಪೂರ್ಣ ಹಕ್ಕುಗಳನ್ನು ನೀಡಿದೆ.

ಈ ತಿದ್ದುಪಡಿ ಮೂಲಕ ಸಾವಿರಾರು ಡಿಪ್ಲೋಮಾ ಇಂಜಿನಿಯರ್‌ಗಳಿಗೆ ಉದ್ಯೋಗ ಭದ್ರತೆ ಲಭಿಸುವುದರ ಜೊತೆಗೆ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಕಾರ್ಯಚಟುವಟಿಕೆಗಳು ಸುಗಮಗೊಳ್ಳುವ ನಿರೀಕ್ಷೆಯಿದೆ.

ತೈಲ ಬಿಕ್ಕಟ್ಟು: ಭಾರತದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಏರಿಕೆ

The post MBBL ತಿದ್ದುಪಡಿ: ಡಿಪ್ಲೋಮಾ ಇಂಜಿನಿಯರ್‌ಗಳಿಗೆ ಮತ್ತೆ ಅವಕಾಶ appeared first on Samyukta Karnataka.

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 7 ಮರಿಗಳ ತಾಯಿಯಾದ ಭಾರತೀಯ ತೋಳ ʻಗೀತʼ
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಅಪರೂಪದ ಹಾಗೂ ಸಂತಸದ ಘಟನೆ ನಡೆದಿದೆ. ಭಾರತೀಯ ತೋಳ ‘ಗೀತಾ’ ಒಟ್ಟು ಏಳು ಮರಿಗಳಿಗೆ (ನಾಲ್ಕು ಗಂಡು, ಮೂರು ಹೆಣ್ಣು) ಜನ್ಮ ನೀಡಿದೆ. ಕಳೆದ ಮೂರು ವರ್ಷಗಳಿಂದ ಉದ್ಯಾನವನದಲ್ಲಿ ಭಾರತೀಯ ತೋಳಗಳನ್ನು ಸಾಕಲಾಗುತ್ತಿದ್ದು, ಇದು ಮೊದಲ ಯಶಸ್ವಿ ಸಂತಾನೋತ್ಪತ್ತಿಯಾಗಿದ್ದು ಮಹತ್ವದ ಮೈಲಿಗಲ್ಲಾಗಿದೆ.

ಉದ್ಯಾನವನದ ಅಧಿಕಾರಿಗಳ ಪ್ರಕಾರ, ತಾಯಿ ತೋಳ ಹಾಗೂ ಎಲ್ಲಾ ಏಳು ಮರಿಗಳು ಆರೋಗ್ಯವಾಗಿದ್ದು, ಪಶುವೈದ್ಯರು ಮತ್ತು ಪ್ರಾಣಿ ಪಾಲಕರು ಅವುಗಳನ್ನು ನಿತ್ಯವೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಾಣಿಗಳ ಸಂರಕ್ಷಣೆ ಹಾಗೂ ಸೆರೆಹಿಡಿದ ಪರಿಸರದಲ್ಲಿ ಸಂತಾನೋತ್ಪತ್ತಿ ಕಾರ್ಯಕ್ರಮಕ್ಕೆ ಇದು ದೊಡ್ಡ ಸಾಧನೆ ಎಂದು ಪರಿಗಣಿಸಲಾಗಿದೆ.

ಇದಲ್ಲದೆ, ಮರಿಗಳು ಈಗ ಆರೋಗ್ಯವಾಗಿದ್ದು ಚುರುಕಾಗಿ ಓಡಾಡುತ್ತಿವೆ. ಪ್ರವಾಸಿಗರ ಆಕರ್ಷಣೆಯಾಗಿರುವ ಈ ಮುದ್ದು ತೋಳ ಮರಿಗಳನ್ನು ಇದೀಗ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿದೆ. ಇದರಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ.

The post ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 7 ಮರಿಗಳ ತಾಯಿಯಾದ ಭಾರತೀಯ ತೋಳ ʻಗೀತʼ appeared first on Samyukta Karnataka.

ಮಂಗಳೂರು ದೈವಸೇವೆ ವಿವಾದ: ಆರೋಪಗಳಿಗೆ ದೈವನರ್ತಕರ ಸ್ಪಷ್ಟನೆ
ದೈವ ನರ್ತನ ವಿವಾದಕ್ಕೆ ಹೊಸ ತಿರುವು: “ನಾನು ಹಿಂದೂ” ಎಂದ ನರ್ತಕ ಸುಶಾಂತ್

ಮಂಗಳೂರು: ಕರಾವಳಿ ಭಾಗದ ದೈವ ನರ್ತನ ಸೇವೆಗೆ ಸಂಬಂಧಿಸಿದ ವಿವಾದಕ್ಕೆ ಹೊಸ ತಿರುವು ಸಿಕ್ಕಿದ್ದು, ಆರೋಪಗಳಿಗೆ ಪ್ರತಿಯಾಗಿ ದೈವನರ್ತಕರು ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರಿನ ಬೋಳೂರಿನ ಜಾರಂದಾಯ ದೈವಸ್ಥಾನದಲ್ಲಿ ನಡೆದ ದೈವ ನರ್ತನ ಸೇವೆ ಕುರಿತು ಡಾ. ರತಿ ಅವರು ಮಾಡಿದ್ದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ದೈವನರ್ತಕ ಸೂರಜ್ ಚಿಪ್ಪಾರು, “ನರ್ತನ ಸೇವೆ ಸಲ್ಲಿಸಿದ ಸುಶಾಂತ್ ಬಂಗೇರ ಪಂಬದ ಸಮುದಾಯಕ್ಕೆ ಸೇರಿದ ಹಿಂದೂ ವ್ಯಕ್ತಿಯಾಗಿದ್ದು, ಈ ಬಗ್ಗೆ ಜಾತಿ ಪ್ರಮಾಣಪತ್ರ ಸೇರಿದಂತೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿದರು.

ವಿವಾದದ ಹಿನ್ನೆಲೆ: ಡಾ. ರತಿ ಅವರು, ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ ಸೇರಿದಂತೆ ನಿರ್ದಿಷ್ಟ ಸಮುದಾಯದವರೇ ಮಾಡಬೇಕು. ಆದರೆ ಇಲ್ಲಿ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ಸೇವೆ ಮಾಡಿಸಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪದಿಂದ ಕರಾವಳಿ ಭಾಗದಲ್ಲಿ ಚರ್ಚೆ ಜೋರಾಗಿತ್ತು.

ದೈವನರ್ತಕರ ಸ್ಪಷ್ಟನೆ: ಸೂರಜ್ ಚಿಪ್ಪಾರು ಅವರು ಈ ಕುರಿತು ಮಾತನಾಡಿ ಸುಶಾಂತ್ ಬಂಗೇರ ಹಿಂದೂ ಧರ್ಮಕ್ಕೆ ಸೇರಿದವನು, ಪಂಬದ ಸಮುದಾಯದವರಾಗಿರುವುದು ದಾಖಲೆಗಳಿಂದ ದೃಢವಾಗಿದೆ. ಯಾವುದೇ ಸಂಪ್ರದಾಯ ಉಲ್ಲಂಘನೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಕುಟುಂಬ ಹಿನ್ನೆಲೆ ವಿವರಣೆ: ಈ ವೇಳೆ ಗಣೇಶ್ ಪಂಬದ ಅವರು, “ಕ್ರಿಶ್ಚಿಯನ್ ಮಹಿಳೆಯೊಂದಿಗೆ ಮದುವೆಯಾಗಿದ್ದರೂ, ಅವರು ಹಿಂದೂ ಸಂಪ್ರದಾಯವನ್ನು ಸ್ವೀಕರಿಸಿ ಪಂಬದ ಜಾತಿಯ ಆಚರಣೆಗಳನ್ನು ಪಾಲಿಸಿಕೊಂಡಿದ್ದಾರೆ. ಆ ಬಳಿಕ ಜನಿಸಿದ ಸುಶಾಂತ್ ಪಂಬದ ಕಾನೂನುಬದ್ಧವಾಗಿ ಎಲ್ಲಾ ದಾಖಲೆಗಳನ್ನು ಹೊಂದಿದ್ದಾರೆ” ಎಂದು ಸ್ಪಷ್ಟಪಡಿಸಿದರು.

ದೈವ ಸೇವೆಯ ಬಗ್ಗೆ ಪ್ರತಿಕ್ರಿಯೆ: “ಜಾರಂದಾಯ ದೈವಸ್ಥಾನದಲ್ಲಿ ನಡೆದ ದೈವ ನರ್ತನ ಸೇವೆ ಶ್ರದ್ಧಾಭಕ್ತಿಯಿಂದ ಯಾವುದೇ ಲೋಪದೋಷವಿಲ್ಲದೆ ನಡೆದಿದೆ. ದೈವೀ ಅಪ್ಪಣೆಯಂತೆ ಎಲ್ಲಾ ವಿಧಿ ವಿಧಾನಗಳು ನೆರವೇರಿವೆ” ಎಂದು ಗಣೇಶ್ ಪಂಬದ ತಿಳಿಸಿದ್ದಾರೆ. ಅವರು ಕಳೆದ 31 ವರ್ಷಗಳಿಂದ ವಿವಿಧ ಸೀಮೆಗಳಲ್ಲಿ ದೈವ ನರ್ತನ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು.

ಸುಶಾಂತ್ ಬಂಗೇರ ಆಕ್ರೋಶ: ದೈವನರ್ತಕ ಸುಶಾಂತ್ ಬಂಗೇರ, “ನನ್ನನ್ನು ಕ್ರೈಸ್ತ ಧರ್ಮಕ್ಕೆ ಸೇರಿದವನು ಎಂದು ತಪ್ಪಾಗಿ ಆರೋಪಿಸಿ ಅವಮಾನ ಮಾಡಲಾಗಿದೆ. ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಈ ರೀತಿಯ ಆರೋಪಗಳು ನನ್ನ ಭವಿಷ್ಯಕ್ಕೆ ಧಕ್ಕೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಉತ್ಸವಗಳಲ್ಲಿ DJ ನಿಷೇಧಿಸಲು ಸಂತೋಷ್ ಲಾಡ್ ಆಗ್ರಹ

The post ಮಂಗಳೂರು ದೈವಸೇವೆ ವಿವಾದ: ಆರೋಪಗಳಿಗೆ ದೈವನರ್ತಕರ ಸ್ಪಷ್ಟನೆ appeared first on Samyukta Karnataka.

ಲೈಂಗಿಕ ಕಿರುಕುಳ: ಮೂಡುಬಿದಿರೆ ಇನ್ಸ್‌ಪೆಕ್ಟರ್ ಅಮಾನತು
ಮೂಡುಬಿದಿರೆ: ಮಹಿಳೆಯ ಜತೆ ಅಸಭ್ಯವಾಗಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಂಗಳವಾರ ಸಂಜೆ ಸೇವೆಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ವರದಿ ಹಾಗೂ ದೂರವಾಣಿ ಸಂಭಾಷಣೆಯಲ್ಲಿ ಅಸಭ್ಯವಾಗಿ ಸಂಭಾಷಣೆ ನಡೆಸಿರುವುದು ಮತ್ತು ಸಮವಸ್ತ್ರ ಧರಿಸಿ ನೃತ್ಯ ಮಾಡುವ ದೃಶ್ಯವು ಮಾಧ್ಯಮಗಳಲ್ಲಿ ಸೋಮವಾರದಿಂದ ಪ್ರಸಾರವಾಗಿತ್ತು.

ಈ ಬಗ್ಗೆ ಎಸಿಪಿ ಶ್ರೀಕಾಂತ್ ಅವರು ಮಂಗಳವಾರ ಪಣಂಬೂರು ಎಸಿಪಿ ಕಚೇರಿಯಲ್ಲಿ ಸಂದೇಶ್ ಅವರನ್ನು ವಿಚಾರಣೆ ನಡೆಸಿ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದರು. ವರದಿಯನ್ನು ಪರಿಶೀಲಿಸಿದ ಕಮೀಷನರ್ ಅವರು ಮಹಿಳೆಯ ಜತೆ ದೂರವಾಣಿ ಮೂಲಕ ಅಸಭ್ಯ ಸಂಭಾಷಣೆ ನಡೆಸುವ ಮೂಲಕ ಇಲಾಖೆಯ ಘನತೆಗೆ ಚ್ಯುತಿಯಾಗಿರುವುದನ್ನು ಪರಿಗಣಿಸಿ ಅಮಾನತುಗೊಳಿಸಿದ್ದಾರೆ.

The post ಲೈಂಗಿಕ ಕಿರುಕುಳ: ಮೂಡುಬಿದಿರೆ ಇನ್ಸ್‌ಪೆಕ್ಟರ್ ಅಮಾನತು appeared first on Samyukta Karnataka.