Home ಕ್ರೀಡೆ BWF: ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಯುಷ್ ಶೆಟ್ಟಿ

BWF: ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಯುಷ್ ಶೆಟ್ಟಿ

ಯುಎಸ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಕಾರ್ಕಳ ಮೂಲದ ಆಯೂಷ್‌ ಶೆಟ್ಟಿ ಚಾಂಪಿಯನ್‌ ಆಗಿ ಹೊಮ್ಮಿದ್ದಾರೆ.

ನವದೆಹಲಿ: ಯುಎಸ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಆಯುಷ್ ಶೆಟ್ಟಿ ಪಾತ್ರರಾಗಿದ್ದಾರೆ.
20 ವರ್ಷದ ಉದಯೋನ್ಮುಖ ಶಟ್ಲರ್ ಆಯುಷ್ ಶೆಟ್ಟಿ ಯುಎಸ್ ಓಪನ್ ಸೂಪರ್ 300 ರ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸುವ ಮೂಲಕ ತಮ್ಮ ಮೊದಲ ಬಿಡಬ್ಲ್ಯೂಎಫ್ ವಿಶ್ವ ಪ್ರವಾಸ ಪ್ರಶಸ್ತಿಯನ್ನು ಗೆದ್ದರು, ಈ ಋತುವಿನ ಭಾರತದ ಪ್ರಶಸ್ತಿ ಬರವನ್ನು ಕೊನೆಗೊಳಿಸಿದರು. 2023 ರ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಯುಷ್ ಕಂಚಿನ ಪದಕ ಗೆದ್ದಿದ್ದರು. ಫೈನಲ್‌ನಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ವಿರುದ್ಧ 21-18, 21-13 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಆಯುಷ್, ಇತಿಹಾಸ ನಿರ್ಮಿಸಿದ್ದಾರೆ. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಯುಷ್, ಕೆನಡಾದ ಶಟ್ಲರ್‌ ಅನ್ನು ಮಣಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಆಯುಷ್, ವಿಶ್ವದ 6ನೇ ಶ್ರೇಯಾಂಕಿತ ಚೌ ಟಿಯೆನ್ ಚೆನ್ ಅವರನ್ನು ಸೋಲಿಸುವ ಮೂಲಕ ಭರವಸೆ ಮೂಡಿಸಿದ್ದರು. ಈ ಪ್ರಶಸ್ತಿಯೊಂದಿಗೆ ಆಯುಷ್ ಶೆಟ್ಟಿ, ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ನಲ್ಲಿ ಚೊಚ್ಚಲ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ನಡುವೆ, ಮಹಿಳಾ ಸಿಂಗಲ್ಸ್‌ನಲ್ಲಿ, ತನ್ವಿ ಶರ್ಮಾ ಅಗ್ರ ಶ್ರೇಯಾಂಕಿತ ಬೀವೆನ್ ಜಾಂಗ್ ವಿರುದ್ಧ 11-21, 21-16, 10-21 ಅಂತರದಲ್ಲಿ ಪರಾಭವಗೊಂಡು, ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಹೊಂದಿದರು.

Exit mobile version