Samyuktha Karnataka, Author at Samyukta Karnataka

ಬಿಗ್ ಬಾಸ್ 13: ಎಲಿಮಿನೇಷನ್ ಜೊತೆ ಮಂಜ, ಗಾನವಿಗೆ ರೆಡ್ ಕಾರ್ಡ್ ಗಂಡಾಂತರ?
ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಈಗ ರೋಚಕ ಹಂತ ತಲುಪಿದೆ. ವಾರದ ಕೊನೆಯ ವಿಕೆಂಡ್ ವಾರದಲ್ಲಿ ಯಾರು ಹೊರಡಲಿದ್ದಾರೆ ಎಂಬ ಕುತೂಹಲದ ಜೊತೆಗೆ, ಮನೆಯಲ್ಲಿ ನಡೆದಿರುವ ಗಂಭೀರ ನಿಯಮ ಉಲ್ಲಂಘನೆ ಮತ್ತು ವಿವಾದಗಳು ದೊಡ್ಡ ಚರ್ಚೆಗೆ ಗ್ರಾಸವಾಗಿವೆ.

ಈ ವಾರ ಮಂಜ, ಗಾನವಿ, ಗಗನ್, ಯಶಸ್, ಧನುಷ್, ಸೋನಿಕಾ ಮತ್ತು ತಾಂಡವ್ ರಾಮ್ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ. ವೋಟಿಂಗ್ ಆಧಾರದ ಮೇಲೆ ಇವರಲ್ಲಿ ಒಬ್ಬರ ನಿರ್ಗಮನ ಖಚಿತವಿದ್ದರೂ, ಟಾಸ್ಕ್ ನಡುವೆ ನಿಯಮ ಗಾಳಿಗೆ ತೂರಿರುವ ಮಂಜ, ಗಾನವಿ ಹಾಗೂ ಗಗನ್ ವರ್ತನೆ ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಆಟದ ಭರದಲ್ಲಿ ಅವಾಚ್ಯ ಶಬ್ದಳನ್ನು ಬಳಸಿದ ಈ ಮೂವರಿಗೆ ಕೇವಲ ಎಲಿಮಿನೇಷನ್ ಸಾಲದು, ಕೂಡಲೇ ‘ರೆಡ್ ಕಾರ್ಡ್’ ನೀಡಿ ಹೊರಹಾಕಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಕೇಳಿಬರುತ್ತಿದೆ.

ಶಿಸ್ತು ಮತ್ತು ಸಭ್ಯತೆಯ ಗೆರೆ ದಾಟಿರುವ ಸ್ಪರ್ಧಿಗಳ ವಿರುದ್ಧ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಈ ವಾರದ ಹೈಲೈಟ್ ಆಗಲಿದೆ.

The post ಬಿಗ್ ಬಾಸ್ 13: ಎಲಿಮಿನೇಷನ್ ಜೊತೆ ಮಂಜ, ಗಾನವಿಗೆ ರೆಡ್ ಕಾರ್ಡ್ ಗಂಡಾಂತರ? appeared first on Samyukta Karnataka.

ಬಾಯಿಗೆ ಬ್ಯಾಂಡ್-ಏಡ್ ಧರಿಸಿ ರಸ್ತೆಗಿಳಿದ ಮಮತಾ: ದೆಹಲಿಯಲ್ಲಿ ನಾಲ್ವರು ಮಾಜಿ ಸಿಎಂಗಳು ದಿಢೀರ್ ಪೊಲೀಸ್ ವಶಕ್ಕೆ
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ವಿಪಕ್ಷಗಳ ನಾಲ್ವರು ಮಾಜಿ ಮುಖ್ಯಮಂತ್ರಿಗಳನ್ನು ಪೊಲೀಸರು ದಿಢೀರ್ ವಶಕ್ಕೆ ಪಡೆದಿದ್ದಾರೆ.

ಜಂತರ್ ಮಂತರ್ ಚಲೋಗೆ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯತ್ನಿಸಿದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಹಾಗೂ ತ್ರಿಪುರದ ಮಾಜಿ ಸಿಎಂ ಮಾಣಿಕ್ ಸರ್ಕಾರ್ ಅವರನ್ನು ಪೊಲೀಸರು ರಸ್ತೆಯಲ್ಲೇ ಅಡ್ಡಗಟ್ಟಿ ವಶಕ್ಕೆ ಪಡೆದಿದ್ದಾರೆ.

ಸೆಂಟ್ರಲ್ ದೆಹಲಿಯ ಸೌತ್ ಅವೆನ್ಯೂ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಾಗ, ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಸಂಸದರಾದ ಡೆರೆಕ್ ಒಬ್ರಿಯಾನ್ ಹಾಗೂ ಡೋಲಾ ಸೇನ್ ಜೊತೆ ಬಸ್ ನಿಲ್ದಾಣದಲ್ಲೇ ಕುಳಿತು ವಿಶಿಷ್ಟ ಪ್ರತಿಭಟನೆ ನಡೆಸಿದರು. ಬಾಯಿಗೆ ಬ್ಯಾಂಡ್-ಏಡ್ ಅಂಟಿಸಿಕೊಂಡು ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸುತ್ತಿದ್ದ ಮಮತಾ ಅವರನ್ನು ಪೊಲೀಸರು ಬಲವಂತವಾಗಿ ಬಸ್ಸಿಗೆ ಹತ್ತಿಸಿ ಕರೆದೊಯ್ದರು.

ಪೊಲೀಸ್ ವಾಹನದಿಂದಲೇ ವಿಡಿಯೋ ಬಿಡುಗಡೆ ಮಾಡಿದ ಮಮತಾ, “ಸರ್ಕಾರ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದೆ; ಜನರ ಧ್ವನಿಗಾಗಿ ಇಂಡಿಯಾ ಒಕ್ಕೂಟ ನಿರಂತರವಾಗಿ ಹೋರಾಡಲಿದೆ” ಎಂದು ಆಕ್ರೋಶ ಹೊರಹಾಕಿದರು.

ಮತ್ತೊಂದೆಡೆ, ಬೆಳಗ್ಗೆಯಿಂದಲೇ ಮನೆ ಸುತ್ತುವರಿದಿದ್ದ ಪೊಲೀಸರು, ಹೊರಬರಲು ಯತ್ನಿಸಿದ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದರು. ದೇಶದ ಯುವಕರು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ, ‘ವೋಟ್ ಚೋರಿ’ ವಿರುದ್ಧ ಎಲ್ಲರೂ ಒಗ್ಗೂಡಬೇಕು ಎಂದು ಕೇಜ್ರಿವಾಲ್ ಕರೆ ನೀಡಿದರು. ಪಿಣರಾಯಿ ವಿಜಯನ್, ಸಂಸದ ಜಾನ್ ಬ್ರಿಟ್ಟಾಸ್ ಮತ್ತು ಮಾಣಿಕ್ ಸರ್ಕಾರ್ ಅವರನ್ನು ಛತ್ರಸಾಲ್ ಕ್ರೀಡಾಂಗಣದ ತಾತ್ಕಾಲಿಕ ಬಂಧನ ಕೇಂದ್ರಕ್ಕೆ ರವಾನಿಸಲಾಗಿದೆ.

ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಮತ್ತು ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗವು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು.

ಸೋಮವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದು, ಸೋಮವಾರ ದೇಶವ್ಯಾಪಿ ಬೃಹತ್ ಪ್ರತಿಭಟನೆಗೆ ಇಂಡಿಯಾ ಮೈತ್ರಿಕೂಟ ಕರೆ ನೀಡಿದೆ.

The post ಬಾಯಿಗೆ ಬ್ಯಾಂಡ್-ಏಡ್ ಧರಿಸಿ ರಸ್ತೆಗಿಳಿದ ಮಮತಾ: ದೆಹಲಿಯಲ್ಲಿ ನಾಲ್ವರು ಮಾಜಿ ಸಿಎಂಗಳು ದಿಢೀರ್ ಪೊಲೀಸ್ ವಶಕ್ಕೆ appeared first on Samyukta Karnataka.

‘ಇದು ಒಂಥರಾ ತಮಾಷೆ ಅನ್ನಿಸ್ತಿದೆ’: ಯಶಸ್ವಿ ಜೈಸ್ವಾಲ್ ಹೊಸ ಅವತಾರ ನೋಡಿ ರೊಚ್ಚಿಗೆದ್ದ ಮುಂಬೈ ದಿಗ್ಗಜ!
ಟೀಮ್ ಇಂಡಿಯಾದ ಸ್ಟಾರ್ ಟೆಸ್ಟ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ದಿಢೀರನೇ ಗ್ಲೌಸ್ ತೊಟ್ಟು ವಿಕೆಟ್ಕೀಪಿಂಗ್ ಅಭ್ಯಾಸ ಆರಂಭಿಸಿರುವುದು ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ತಮ್ಮ 24ನೇ ವಯಸ್ಸಿನಲ್ಲಿ ಜೈಸ್ವಾಲ್ ತೆಗೆದುಕೊಂಡಿರುವ ಈ ಅನಿರೀಕ್ಷಿತ ನಿರ್ಧಾರವನ್ನು ಭಾರತದ ಮಾಜಿ ಆರಂಭಿಕ ಹಾಗೂ ದೇಶಿ ಕ್ರಿಕೆಟ್ ದಿಗ್ಗಜ ವಾಸಿಂ ಜಾಫರ್ ಕಟುವಾಗಿ ಟೀಕಿಸಿದ್ದು, “ಇದು ಶುದ್ಧ ತಮಾಷೆಯಂತೆ ಕಾಣುತ್ತಿದೆ” ಎಂದು ನೇರವಾಗಿಯೇ ಕಿಡಿಕಾರಿದ್ದಾರೆ.

2026-27ರ ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಮುಂಬೈ ತಂಡದ ನಾಯಕ ಸಿದ್ದೇಶ್ ಲಾಡ್ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಜೈಸ್ವಾಲ್ ಬ್ಯಾಟಿಂಗ್ ಮತ್ತು ಲೆಗ್-ಸ್ಪಿನ್ ಜೊತೆಗೆ ಬ್ಯಾಕ್-ಅಪ್ ಕೌಶಲ್ಯವಾಗಿ ವಿಕೆಟ್ಕೀಪಿಂಗ್ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಚಂಡೀಗಢ ವಿರುದ್ಧದ ರಣಜಿ ಆರಂಭಿಕ ಪಂದ್ಯಕ್ಕೂ ಮುನ್ನ ಜೈಸ್ವಾಲ್ ಸುಮಾರು 10 ಓವರ್ ಕೀಪಿಂಗ್ ಅಭ್ಯಾಸ ನಡೆಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಾಫರ್, “ನನಗೆ ಈ ಸುದ್ದಿ ಕೇಳಿ ನಿಜಕ್ಕೂ ಆಶ್ಚರ್ಯವಾಯಿತು. ಬಾಲ್ಯದಿಂದಲೇ ಕೀಪಿಂಗ್ ಮಾಡದಿದ್ದರೆ ಈ ವಯಸ್ಸಿನಲ್ಲಿ ಆ ಕೌಶಲ್ಯ ಬೆಳೆಸಿಕೊಳ್ಳುವುದು ಸುಲಭವಲ್ಲ. ವಿಕೆಟ್ಕೀಪಿಂಗ್ ಎಂಬುದು ಅಪಾರ ದೈಹಿಕ ಶ್ರಮ ಬೇಡುವ ಕಠಿಣ ಕೆಲಸ.

ಭಾರತ ತಂಡದಲ್ಲಿ ಈಗಾಗಲೇ ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಸ್ಪೆಷಲಿಸ್ಟ್ಗಳಿದ್ದಾರೆ. ಹೀಗಿರುವಾಗ ಜೈಸ್ವಾಲ್ ಕೀಪಿಂಗ್ ಮಾಡಿದರೂ ಅವರಿಗೆ ಅವಕಾಶ ಎಲ್ಲಿ ಸಿಗುತ್ತದೆ? ವೈಟ್ಬಾಲ್ ತಂಡದಲ್ಲಿ ಸ್ಥಾನ ಪಡೆಯಲು ಅವರು ತೀರಾ ಹತಾಶರಾಗಿರುವಂತೆ ಕಾಣುತ್ತಿದೆ” ಎಂದು ಚಾಟಿ ಬೀಸಿದ್ದಾರೆ.

ಮುಂಬರುವ ನ್ಯೂಜಿಲೆಂಡ್ ಪ್ರವಾಸ ಹಾಗೂ ಟೆಸ್ಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಜೈಸ್ವಾಲ್ ತಮ್ಮ ಮೂಲ ಸಾಮರ್ಥ್ಯವಾದ ಬ್ಯಾಟಿಂಗ್ ಮೇಲಷ್ಟೇ ಪೂರ್ಣ ಗಮನಹರಿಸಬೇಕು ಎಂದು ಜಾಫರ್ ಕಿವಿಮಾತು ಹೇಳಿದ್ದಾರೆ. ಅನಗತ್ಯ ಪ್ರಯೋಗಗಳಿಗೆ ಕೈಹಾಕಿ ತಮ್ಮ ನೈಜ ಫಾರ್ಮ್ ಹಾಳುಮಾಡಿಕೊಳ್ಳದಂತೆ ಎಚ್ಚರಿಸಿದ್ದಾರೆ.

The post ‘ಇದು ಒಂಥರಾ ತಮಾಷೆ ಅನ್ನಿಸ್ತಿದೆ’: ಯಶಸ್ವಿ ಜೈಸ್ವಾಲ್ ಹೊಸ ಅವತಾರ ನೋಡಿ ರೊಚ್ಚಿಗೆದ್ದ ಮುಂಬೈ ದಿಗ್ಗಜ! appeared first on Samyukta Karnataka.

ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್ ಬೆನ್ನಲ್ಲೇ ಬಿಸಿಸಿಐಗೆ ಶಮಿ ಖಡಕ್ ಗುದ್ದು!
ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಗೆ 36 ವರ್ಷದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಬರೋಬ್ಬರಿ 4 ವರ್ಷಗಳ ಬಳಿಕ ಭಾರತ ತಂಡಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಅದೇ ವಯಸ್ಸಿನ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಸಂಪೂರ್ಣವಾಗಿ ಕಡೆಗಣಿಸಿರುವುದು ಇದೀಗ ಕ್ರಿಕೆಟ್ ಅಂಗಳದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ತಮ್ಮನ್ನು ಸತತವಾಗಿ ನಿರ್ಲಕ್ಷಿಸುತ್ತಿರುವ ಆಯ್ಕೆಗಾರರ ವಿರುದ್ಧ ಶಮಿ ನೇರವಾಗಿಯೇ ಗುಡುಗಿದ್ದಾರೆ.

ಭುವಿ ಆಯ್ಕೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಶಮಿ, “ಭುವನೇಶ್ವರ್ ಕುಮಾರ್‌ಗೆ ದೇಶವನ್ನು ಪ್ರತಿನಿಧಿಸಲು ಮತ್ತೊಂದು ಅವಕಾಶ ಸಿಕ್ಕಿದೆ, ಅವರಿಗೆ ಒಳ್ಳೆಯದಾಗಲಿ. ಆದರೆ ಅವರ ಕಮ್‌ಬ್ಯಾಕ್ ಬಗ್ಗೆ ನನಗೆ ಯಾವುದೇ ಆಶ್ಚರ್ಯವಿಲ್ಲ. ಕಳೆದ 2 ರಿಂದ 3 ವರ್ಷಗಳಿಂದ ನನ್ನ ವಿಷಯದಲ್ಲಿ ಇದೇ ಅನ್ಯಾಯ ನಡೆಯುತ್ತಿದೆ.

ಬಂಗಾಳ ಪರ ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ವಿಕೆಟ್ ಉರುಳಿಸುತ್ತಿದ್ದೇನೆ, ನನ್ನ ಫಿಟ್‌ನೆಸ್ ಸಾಬೀತುಪಡಿಸಿದ್ದೇನೆ. ಇಷ್ಟಾದರೂ ನನಗೆ ಭಾರತ ಜೆರ್ಸಿ ಧರಿಸಲು ಅವಕಾಶ ಸಿಗದಿದ್ದರೆ ಅದು ನನಗಾಗುವ ನಷ್ಟವೇನೂ ಅಲ್ಲ” ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಭಾರತದ ಪರ ಈ ಇಬ್ಬರು ದಿಗ್ಗಜರ ಅಂತರರಾಷ್ಟ್ರೀಯ ಅಂಕಿ-ಅಂಶಗಳನ್ನು ಗಮನಿಸಿದರೆ ನಂಬರ್ ಗೇಮ್‌ನಲ್ಲಿ ಶಮಿ ಬಲವೇ ಮೇಲ್ಗೈಯಲ್ಲಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಶಮಿ ಆಡಿರುವ 64 ಪಂದ್ಯಗಳಲ್ಲಿ 229 ವಿಕೆಟ್ (6 ಬಾರಿ 5 ವಿಕೆಟ್ ಗೊಂಚಲು) ಪಡೆದಿದ್ದರೆ, ಭುವಿ 21 ಟೆಸ್ಟ್‌ಗಳಿಂದ 63 ವಿಕೆಟ್ ಕಬಳಿಸಿದ್ದಾರೆ. ಏಕದಿನ ಮಾದರಿಯಲ್ಲೂ ಶಮಿ 108 ಪಂದ್ಯಗಳಿಂದ 24.05ರ ಸರಾಸರಿಯಲ್ಲಿ 206 ವಿಕೆಟ್ ಉರುಳಿಸಿ ಭಾರತದ ಪ್ರಮುಖ ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದಾರೆ.

ಭುವಿ 121 ಏಕದಿನಗಳಿಂದ 141 ವಿಕೆಟ್ ಪಡೆದಿದ್ದಾರೆ. ಕೇವಲ ಟಿ20 ಮಾದರಿಯಲ್ಲಿ ಮಾತ್ರ ಭುವಿ 87 ಪಂದ್ಯಗಳಿಂದ 90 ವಿಕೆಟ್ ಕಬಳಿಸಿ ಮುನ್ನಡೆಯಲ್ಲಿದ್ದರೆ, ಶಮಿ ಕೇವಲ 25 ಟಿ20 ಪಂದ್ಯಗಳನ್ನು ಆಡಿ 27 ವಿಕೆಟ್ ಪಡೆದಿದ್ದಾರೆ.

2023ರ ಏಕದಿನ ವಿಶ್ವಕಪ್ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಂಕಿ ಬೌಲಿಂಗ್ ಪ್ರದರ್ಶಿಸಿದ್ದ ಶಮಿ, ಮಾರ್ಚ್ 2025ರ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಬುಮ್ರಾ ಜೊತೆಗೆ ಶಮಿ, ಸಿರಾಜ್ ಮುಂಬರುವ ವಿಶ್ವಕಪ್‌ಗೆ ಅತ್ಯಗತ್ಯ ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರದಿಂದ ಆರಂಭವಾಗುವ ರಣಜಿ ಪಂದ್ಯದ ಮೇಲೆ ಮಾತ್ರ ನನ್ನ ಗಮನವಿದೆ ಎಂದು ಶಮಿ ಸಾರಿದ್ದಾರೆ.

The post ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್ ಬೆನ್ನಲ್ಲೇ ಬಿಸಿಸಿಐಗೆ ಶಮಿ ಖಡಕ್ ಗುದ್ದು! appeared first on Samyukta Karnataka.

ಬಿಗ್‌ ಬಾಸ್‌ ಕನ್ನಡ ಸೀಸನ್‌ 13: ಧನುಷ್‌ ಹೊಸ ಕ್ಯಾಪ್ಟನ್‌, ಮಂಜನ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು!
Bengalore: ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ ಕಾವೇರಿದ್ದು, ತೀವ್ರ ಪೈಪೋಟಿಯ ಬಳಿಕ ಧನುಷ್‌ ಮಂಜುನಾಥ್‌ ಮನೆಯ ಮೂರನೇ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ, ಕಾಲು ಪೆಟ್ಟಾಗಿದ್ದರೂ ಕುಂಟುತ್ತಲೇ ಧನುಷ್‌ ಟಾಸ್ಕ್‌ ಆಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಫೈನಲ್‌ನಲ್ಲಿ ಸೋನಿಕಾ ಅವರನ್ನು ಮಣಿಸಿ ವಿಜಯಶಾಲಿಯಾದರು. ಈ ಬಾರಿ ಜಗದೀಶ್‌ (ಜಗ್ಗಮಮ್ಮಿ) ಕ್ಯಾಪ್ಟನ್ಸಿ ಟಾಸ್ಕ್‌ನ ಉಸ್ತುವಾರಿಯಾಗಿ ಜವಾಬ್ದಾರಿ ನಿರ್ವಹಿಸಿದರು.

7 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದ ಈ ಟಾಸ್ಕ್‌ನಲ್ಲಿ ರೋಚಕ ಸುತ್ತುಗಳು ನಡೆದವು. ಧನುಷ್‌, ಯಶಸ್‌ ಕೃಷ್ಣ ಹಾಗೂ ಕಾವ್ಯ ಅವರನ್ನು ಹೊರಹಾಕಿದರೆ, ಗಾನವಿ ,ಆಸಿಯಾ ಅವರನ್ನು ಹಾಗೂ ತಾಂಡವ್‌ ರಾಮ್‌ ಅವರು ಗಾನವಿ ಅವರನ್ನು ಟಾಸ್ಕ್‌ನಿಂದ ಆಚೆಗಿಟ್ಟರು. ಅಂತಿಮವಾಗಿ ಸೋನಿಕಾ ಮತ್ತು ಧನುಷ್‌ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಧನುಷ್‌ ಜಯ ಸಾಧಿಸಿದರು.

ಇದೇ ವೇಳೆ, ‘ರಾಕ್ಷಸರು ಮತ್ತು ಗಂಧರ್ವರು’ ಟಾಸ್ಕ್‌ನಲ್ಲಿ ಮಾಡ್ರನ್‌ ಮಹಾಕವಿ ಮಂಜ ಆಡಿದ ಕೀಳು ಮಟ್ಟದ ಮಾತುಗಳು ಹಾಗೂ ಟಾಸ್ಕ್‌ನ ವಸ್ತುಗಳನ್ನು ಹಾಳುಗೆಡವಿದ ವರ್ತನೆ ಭಾರಿ ವಿವಾದ ಸೃಷ್ಟಿಸಿತು. ಮಂಜನ ಈ ಅಸಭ್ಯ ನಡೆಗೆ ಬೆಸ್ತು ಬಿದ್ದ ಮನೆಯ ಸ್ಪರ್ಧಿಗಳು ರೊಚ್ಚಿಗೆದ್ದರು. ಇದರ ಪರಿಣಾಮವಾಗಿ 5ನೇ ವಾರದ ಕಳಪೆ ಪಟ್ಟ ಪಡೆದ ಮಂಜ, ಈ ಹಿಂದೆ ಗಾನವಿ ಜೊತೆ ಜೈಲು ಸೇರಿದಂತೆ ಈಗ ಎರಡನೇ ಬಾರಿಗೆ ಜೈಲುಪಾಲಾಗಿದ್ದಾರೆ.

ಮಂಜನ ಈ ವರ್ತನೆಗೆ ಮನೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. “ಸೋಲನ್ನು ಹೇಗೆ ಸ್ವೀಕರಿಸಬೇಕೋ ಹಾಗೆ ಸ್ವೀಕರಿಸಬೇಕು, ಬಳಸುವ ಪದಗಳಿಗೆ ಮಿತಿ ಇರಬೇಕು” ಎಂದು ಯಶಸ್‌ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು. “ಟಾಸ್ಕ್‌ ಪ್ರಾಪರ್ಟೀಸ್‌ ಮುರಿಯುವುದು ಹಾಗೂ ನಿಯಮ ಉಲ್ಲಂಘಿಸುವುದು ತಪ್ಪು” ಎಂದು ಪ್ರಶಾಂತ್‌ ಅಸಮಾಧಾನ ವ್ಯಕ್ತಪಡಿಸಿದರೆ, “ಇದು ಯಾವ ಕೀಳುಮಟ್ಟಕ್ಕೆ ಹೋಗುತ್ತಿದೆ” ಎಂದು ಸೌಂದರ್ಯ ತೀವ್ರವಾಗಿ ಕಿಡಿಕಾರಿದರು.

The post ಬಿಗ್‌ ಬಾಸ್‌ ಕನ್ನಡ ಸೀಸನ್‌ 13: ಧನುಷ್‌ ಹೊಸ ಕ್ಯಾಪ್ಟನ್‌, ಮಂಜನ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು! appeared first on Samyukta Karnataka.

249 ರನ್ ಬಾರಿಸಿದ್ರೂ ಭಾರತಕ್ಕೆ ಆಘಾತಕಾರಿ ಸೋಲು: ಯಾರ ಮೇಲೂ ಗೂಬೆ ಕೂರಿಸಲ್ಲ ಎಂದ ಗಂಭೀರ್ ಅಸಲಿ ರಹಸ್ಯವೇನು?!
ಟಿ20 ಕ್ರಿಕೆಟ್‌ನಲ್ಲಿ ಬರೋಬ್ಬರಿ 249 ರನ್‌ಗಳ ಪರ್ವತದಂತಹ ಮೊತ್ತ ಕಲೆಹಾಕಿದರೂ ಪಂದ್ಯ ಕೈಚೆಲ್ಲಿದರೆ ಯಾವ ತಂಡಕ್ಕಾದರೂ ಆಘಾತವಾಗುವುದು ಸಹಜ. ರಾಂಚಿಯಲ್ಲಿ ನಡೆದ ಎರಡನೇ ಟಿ20 ಕದನದಲ್ಲಿ ಒಟ್ಟು 502 ರನ್‌ಗಳು ಹರಿದುಬಂದ ಐತಿಹಾಸಿಕ ರನ್‌ ಹೊಳೆಯ ನಡುವೆ, ಭಾರತ ತಂಡ ವೆಸ್ಟ್ ಇಂಡೀಸ್ ಎದುರು ಎಡವಿ ಮುಖಭಂಗ ಅನುಭವಿಸಿದೆ.

ಈ ಹೀನಾಯ ಸೋಲಿನ ಹೊಣೆಯನ್ನು ಯಾರ ಮೇಲೆ ಹೊರಿಸಬೇಕು ಎಂಬ ಮಾಧ್ಯಮಗಳ ನೇರ ಪ್ರಶ್ನೆಗೆ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ತಮ್ಮ ವಿಶಿಷ್ಟ ಶೈಲಿಯಲ್ಲೇ ಉತ್ತರಿಸಿ ಶಾಕ್ ನೀಡಿದ್ದಾರೆ.

ಸಂಜು ಸ್ಯಾಮ್ಸನ್ ಅವರ ಸ್ಪೋಟಕ 82 ರನ್ ಹಾಗೂ ಶ್ರೇಯಸ್, ತಿಲಕ್ ಬ್ಯಾಟಿಂಗ್ ಬಲದಿಂದ ಭಾರತ 249/5 ರನ್ ಪೇರಿಸಿತ್ತು. ಆದರೆ ಶಾಯ್ ಹೋಪ್ (ಅಜೇಯ 102) ಹಾಗೂ ರುದರ್‌ಫೋರ್ಡ್ (84) ಬಿರುಗಾಳಿಗೆ ಭಾರತದ ಬೌಲಿಂಗ್ ಸಂಪೂರ್ಣ ಧೂಳಿಪಟವಾಯಿತು.

ವಿಂಡೀಸ್ ಕೇವಲ 18.3 ಓವರ್‌ಗಳಲ್ಲೇ ಈ ಬೃಹತ್ ಗುರಿ ಮುಟ್ಟಿತು. ಮಯಾಂಕ್ ಯಾದವ್ ಸುಲಭ ಕ್ಯಾಚ್ ಕೈಚೆಲ್ಲಿದ್ದರ ಬಗ್ಗೆ ಕೇಳಿದಾಗ, “ನಾನು ಯಾರ ಮೇಲೂ ಅಥವಾ ಯಾವುದರ ಮೇಲೂ ಗೂಬೆ ಕೂರಿಸುವುದಿಲ್ಲ. ಯಾರೂ ಬೇಕಂತಲೇ ಕ್ಯಾಚ್ ಬಿಡುವುದಿಲ್ಲ, ಹಾಗಾಗಿ ಆಟಗಾರರನ್ನು ದೂಷಿಸುವುದು ತಪ್ಪು. ಒಟ್ಟಾರೆಯಾಗಿ 250 ರನ್ ಡಿಫೆಂಡ್ ಮಾಡಲು ನಾವು ವಿಫಲರಾಗಿದ್ದೇವೆ ಅಷ್ಟೇ” ಎಂದು ಗಂಭೀರ್ ತಮ್ಮ ಆಟಗಾರರ ಬೆಂಬಲಕ್ಕೆ ನಿಂತರು.

ಇದೇ ವೇಳೆ ವಿಂಡೀಸ್ ಆಲ್‌ರೌಂಡರ್ ರೋಸ್ಟನ್ ಚೇಸ್ ಅವರ 3/24 ಬೌಲಿಂಗ್ ಸ್ಪೆಲ್ ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಗಂಭೀರ್ ಮುಕ್ತಕಂಠದಿಂದ ಶ್ಲಾಘಿಸಿದರು. ಎದುರಾಳಿಗಳು ಅತ್ಯದ್ಭುತವಾಗಿ ಆಡಿ ಗೆಲುವಿಗೆ ಅರ್ಹರಾಗಿದ್ದಾರೆ ಎಂದು ಒಪ್ಪಿಕೊಂಡ ಕೋಚ್, ಇಂತಹ ಕಠಿಣ ಸನ್ನಿವೇಶಗಳಲ್ಲಿ ಬೌಲಿಂಗ್ ಸುಧಾರಣೆಗೆ ಇನ್ನು ಸಾಕಷ್ಟು ಕೆಲಸ ಮಾಡಬೇಕಿದೆ ಎಂದು ಒಪ್ಪಿಕೊಂಡರು.

The post 249 ರನ್ ಬಾರಿಸಿದ್ರೂ ಭಾರತಕ್ಕೆ ಆಘಾತಕಾರಿ ಸೋಲು: ಯಾರ ಮೇಲೂ ಗೂಬೆ ಕೂರಿಸಲ್ಲ ಎಂದ ಗಂಭೀರ್ ಅಸಲಿ ರಹಸ್ಯವೇನು?! appeared first on Samyukta Karnataka.

250 ರನ್ ಡಿಫೆಂಡ್ ಮಾಡಲಾಗದೆ ಮುಗ್ಗರಿಸಿದ ಬೌಲರ್ಸ್: ಬೌಲಿಂಗ್ ಕೋಚ್‌ಗೆ ನೇರ ಪ್ರಶ್ನೆ ಹಾಕಿದ ಗವಾಸ್ಕರ್!
ರಾಂಚಿಯಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯದಲ್ಲಿ ರನ್‌ಗಳ ಮಹಾಪೂರವೇ ಹರಿದುಬಂತು. ಸಂಜು ಸ್ಯಾಮ್ಸನ್ ಅವರ ಅಬ್ಬರದ 82 ರನ್‌ಗಳ ನೆರವಿನಿಂದ ಟೀಮ್ ಇಂಡಿಯಾ 249/5 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೂ, ವಿಂಡೀಸ್ ಈ ಗುರಿಯನ್ನು ಕೇವಲ 18.3 ಓವರ್‌ಗಳಲ್ಲೇ ಬೆನ್ನಟ್ಟಿ ಇತಿಹಾಸ ನಿರ್ಮಿಸಿತು.

ಬರೋಬ್ಬರಿ 501 ರನ್‌ಗಳು ದಾಖಲಾದ ಈ ಪಂದ್ಯದಲ್ಲಿ ಭಾರತದ ಹೀನಾಯ ಬೌಲಿಂಗ್ ಪ್ರದರ್ಶನವನ್ನು ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಂದ್ಯದ ಬಳಿಕ ನೇರವಾಗಿ ಬೌಲಿಂಗ್ ಕೋಚ್‌ ಕಡೆಗೆ ಬೆರಳು ತೋರಿಸಿದ ಗವಾಸ್ಕರ್, “ಭಾರತೀಯ ಬ್ಯಾಟರ್‌ಗಳು ನಿರೀಕ್ಷೆಗಿಂತ ಹೆಚ್ಚು ರನ್ ಗಳಿಸಿಕೊಟ್ಟಿದ್ದರು, ಆದ್ದರಿಂದ ಅವರ ಮೇಲೆ ತಪ್ಪು ಹೊರಿಸಲು ಸಾಧ್ಯವೇ ಇಲ್ಲ.

ಆದರೆ ಇಬ್ಬನಿ ನೆಪ ಹೇಳಿಕೊಂಡು ಬೌಲರ್‌ಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು. ಅಸಲಿಗೆ ನಮ್ಮ ಬೌಲಿಂಗ್ ಕೋಚ್ ಈ ಬೌಲರ್‌ಗಳಿಂದ ಏನನ್ನು ನಿರೀಕ್ಷಿಸಿದ್ದರು ಮತ್ತು ಆ ಯೋಜನೆಯನ್ನು ಇವರು ಮೈದಾನದಲ್ಲಿ ಕಾರ್ಯಗತಗೊಳಿಸಿದರೇ ಎಂದು ಕೇಳುವುದು ಬಹಳ ಮುಖ್ಯ” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಇದೇ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ವೇಗಿ ವರುಣ್ ಆರೋನ್ ನಾಯಕತ್ವದ ತಂತ್ರಗಾರಿಕೆಯನ್ನು ಟೀಕಿಸಿದರು. ಆರಂಭದಲ್ಲೇ ವಿಂಡೀಸ್‌ನ ಎರಡು ವಿಕೆಟ್ ಉರುಳಿದಾಗ ವೇಗಿಗಳ ದಾಳಿ ಮುಂದುವರಿಸುವ ಬದಲು ನಾಲ್ಕನೇ ಓವರ್‌ನಲ್ಲೇ ಅಕ್ಷರ್ ಪಟೇಲ್‌ಗೆ ಚೆಂಡು ನೀಡಿದ್ದು ದೊಡ್ಡ ಪ್ರಮಾದ ಎಂದು ಆರೋಪಿಸಿದರು.

ಶಾಯ್ ಹೋಪ್ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ, ರುದರ್‌ಫೋರ್ಡ್ (84) ಜೊತೆಗೂಡಿ ದಾಖಲೆಯ ಚೇಸ್ ಪೂರ್ಣಗೊಳಿಸಿದ್ದು ಭಾರತೀಯ ಬೌಲಿಂಗ್ ವಿಭಾಗದ ಲೋಪಗಳನ್ನು ಸಂಪೂರ್ಣವಾಗಿ ಬಯಲುಮಾಡಿದೆ.

The post 250 ರನ್ ಡಿಫೆಂಡ್ ಮಾಡಲಾಗದೆ ಮುಗ್ಗರಿಸಿದ ಬೌಲರ್ಸ್: ಬೌಲಿಂಗ್ ಕೋಚ್‌ಗೆ ನೇರ ಪ್ರಶ್ನೆ ಹಾಕಿದ ಗವಾಸ್ಕರ್! appeared first on Samyukta Karnataka.

ಆಸೀಸ್ ವೇಗಕ್ಕೆ ಕ್ರೀಸ್‌ನಲ್ಲೇ ನಡುಗಿದ್ರಾ ಸ್ಟಾರ್ ಬ್ಯಾಟರ್ಸ್: ತವರಿನಲ್ಲೇ ಭಾರತ ‘ಎ’ ತಂಡಕ್ಕೆ ಮುಖಭಂಗವಾಗಿದ್ದು ಎಲ್ಲಿ?!
ಪ್ರಮುಖ ಬ್ಯಾಟರ್‌ಗಳ ಸತತ ವೈಫಲ್ಯದಿಂದಾಗಿ ಪ್ರವಾಸಿ ಆಸ್ಟ್ರೇಲಿಯಾ ‘ಎ’ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ‘ಎ’ ತಂಡ 69 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ‘ಎ’ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ‘ಎ’ ತಂಡ ಸ್ಯಾಮ್ ಕೊನ್ಸ್ಟಾಸ್ (67 ರನ್) ಹಾಗೂ ಜೋಶ್ ಫಿಲಿಪ್ (58 ರನ್) ಅವರ ಆಕರ್ಷಕ ಅರ್ಧಶತಕಗಳ ಬಲದಿಂದ 49.5 ಓವರ್‌ಗಳಲ್ಲಿ 275 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಷದ್ ಖಾನ್ 3 ವಿಕೆಟ್ ಕಬಳಿಸಿ ಎದುರಾಳಿ ಬೃಹತ್ ಮೊತ್ತ ಗಳಿಸುವುದನ್ನು ನಿಯಂತ್ರಿಸಿದರು.

276 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ‘ಎ’ ಆರಂಭದಲ್ಲೇ ಆಘಾತ ಅನುಭವಿಸಿತು. ದೇವದತ್ ಪಡಿಕಲ್ (1), ನಾಯಕ ಋತುರಾಜ್ ಗಾಯಕ್ವಾಡ್ (12) ಹಾಗೂ ಸಾಯಿ ಸುದರ್ಶನ್ (13) ಜವಾಬ್ದಾರಿಯುತ ಆಟ ಪ್ರದರ್ಶಿಸದೆ ಪೆವಿಲಿಯನ್ ಸೇರಿದರು.

ಇದರಿಂದ ಭಾರತ 30 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟೀದಾರ್ (67 ರನ್, 82 ಎಸೆತ) ಏಕಾಂಗಿ ಹೋರಾಟ ನಡೆಸಿದರೂ ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಆಸೀಸ್ ವೇಗಿ ಸ್ಪೆನ್ಸರ್ ಜಾನ್ಸನ್ (3/35) ಮಾರಕ ದಾಳಿಗೆ ಕುಸಿದ ಭಾರತ ‘ಎ’ 45.2 ಓವರ್‌ಗಳಲ್ಲಿ 206 ರನ್‌ಗಳಿಗೆ ಸರ್ವಪತನ ಕಂಡಿತು.

The post ಆಸೀಸ್ ವೇಗಕ್ಕೆ ಕ್ರೀಸ್‌ನಲ್ಲೇ ನಡುಗಿದ್ರಾ ಸ್ಟಾರ್ ಬ್ಯಾಟರ್ಸ್: ತವರಿನಲ್ಲೇ ಭಾರತ ‘ಎ’ ತಂಡಕ್ಕೆ ಮುಖಭಂಗವಾಗಿದ್ದು ಎಲ್ಲಿ?! appeared first on Samyukta Karnataka.

PGCET ಅಭ್ಯರ್ಥಿಗಳ ಹೋರಾಟಕ್ಕೆ ಕೊನೆಗೂ ಜಯ: ವಿದ್ಯಾರ್ಥಿಗಳಿಗೆ ಸಿಕ್ಕ ಆ ಬಿಗ್ ರಿಲೀಫ್ ಏನು? ಇಲ್ಲಿದೆ ಮಾಹಿತಿ
PGCET : ಎಂಬಿಎ, ಎಂಸಿಎ, ಎಂಇ ಮತ್ತು ಎಂ.ಟೆಕ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಯುತ್ತಿದ್ದ ಪಿಜಿಸಿಇಟಿ (PGCET) ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸಿಹಿಸುದ್ದಿ ನೀಡಿದೆ. ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಎಲ್ಲ ನಾಲ್ಕು ಚಾಯ್ಸ್‌ಗಳನ್ನು ದಾಖಲಿಸಲು ಮುಕ್ತ ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯ ನಿರಂತರ ಪ್ರತಿಭಟನೆಗೆ ಕೊನೆಗೂ ಮಣಿದಿದೆ.

ಈ ಕುರಿತು ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಅಕ್ಟೋಬರ್ 13ರ ಬೆಳಗ್ಗೆ 10 ಗಂಟೆಯೊಳಗೆ ತಮ್ಮ ಚಾಯ್ಸ್ ದಾಖಲಿಸಬಹುದು ಎಂದು ತಿಳಿಸಿದ್ದಾರೆ.

ಈಗಾಗಲೇ ಕಾಲೇಜು ಪ್ರವೇಶ ಪಡೆದವರು ಹಾಗೂ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡವರಿಗೂ ಚಾಯ್ಸ್-2 ಆಯ್ಕೆ ಮಾಡಿ ಉತ್ತಮ ಕಾಲೇಜಿಗೆ ಅಪ್‌ಗ್ರೇಡ್ ಆಗಲು ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಅಕ್ಟೋಬರ್ 13ರ ಮಧ್ಯಾಹ್ನ 2ರಿಂದ ಅಕ್ಟೋಬರ್ 15ರ ಬೆಳಗ್ಗೆ 10 ಗಂಟೆಯವರೆಗೆ ಆಪ್ಷನ್‌ಗಳನ್ನು ಮರುಹೊಂದಿಸಲು (Re-arrange) ಅವಕಾಶ ನೀಡಲಾಗಿದೆ.

ಪಿಜಿಸಿಇಟಿಗೆ ಇನ್ನೂ ಎರಡು ಸುತ್ತಿನ ಕೌನ್ಸೆಲಿಂಗ್ ನಡೆಸಲು ಅನುಮತಿ ಕೋರಿ ಹಾಗೂ ಪ್ರವೇಶ ವೇಳಾಪಟ್ಟಿ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ನ್ಯಾಯಾಲಯದ ಅಂತಿಮ ತೀರ್ಮಾನ ಬರುವವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸಿಕ್ಕ ಸೀಟು ಅಂತಿಮಗೊಳಿಸಲು ಚಾಯ್ಸ್-1, ಅಪ್‌ಗ್ರೇಡ್‌ಗೆ ಚಾಯ್ಸ್-2, ಸೀಟು ತಿರಸ್ಕರಿಸಿ ಮುಂದಿನ ಸುತ್ತಿಗೆ ಹೋಗಲು ಚಾಯ್ಸ್-3 ಹಾಗೂ ಕೌನ್ಸೆಲಿಂಗ್‌ನಿಂದ ಸಂಪೂರ್ಣ ಹೊರಬರಲು ಚಾಯ್ಸ್-4 ದಾಖಲಿಸಬಹುದಾಗಿದೆ.

The post PGCET ಅಭ್ಯರ್ಥಿಗಳ ಹೋರಾಟಕ್ಕೆ ಕೊನೆಗೂ ಜಯ: ವಿದ್ಯಾರ್ಥಿಗಳಿಗೆ  ಸಿಕ್ಕ ಆ ಬಿಗ್ ರಿಲೀಫ್ ಏನು? ಇಲ್ಲಿದೆ ಮಾಹಿತಿ appeared first on Samyukta Karnataka.

ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ: ಸೂರ್ಯವಂಶಿಗಿಲ್ಲ ಚಾನ್ಸ್, ತವರಿನಲ್ಲಿ ಇಶಾನ್ ಕಿಶನ್ ಮೇಲೆ ಕಣ್ಣು!
India vs West : ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಎರಡನೇ ಮುಖಾಮುಖಿ ರಾಂಚಿಯ ಜೆಎಸ್‌ಸಿಎ (JSCA) ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಮೊದಲು ಬೌಲಿಂಗ್ ಮಾಡಲು ತೀರ್ಮಾನಿಸಿದ್ದು, ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿದ್ದಾರೆ. ರಾಂಚಿಯ ಚಳಿಗಾಲದ ಮೈದಾನದಲ್ಲಿ ಇಬ್ಬನಿ (ಡ್ಯೂ) ಬೌಲರ್‌ಗಳಿಗೆ ಸವಾಲಾಗುವ ನಿರೀಕ್ಷೆಯಿದೆ.

15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಈ ಪಂದ್ಯದಲ್ಲೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಕ್ಕಿಲ್ಲ. ಬದಲಾಗಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರನ್ನೇ ಆರಂಭಿಕರನ್ನಾಗಿ ಕಣಕ್ಕಿಳಿಸಲಾಗಿದೆ.

ಇನ್ನೊಂದೆಡೆ, ಜಾರ್ಖಂಡ್‌ನ ತವರು ಮೈದಾನದಲ್ಲಿ ಆಡುತ್ತಿರುವ ಸ್ಥಳೀಯ ಬ್ಯಾಟರ್ ಇಶಾನ್ ಕಿಶನ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಲಕ್ನೋದಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ ಶತಕದ ಬಲದಿಂದ ಟೀಮ್ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಸದ್ಯ 1-0 ಮುನ್ನಡೆ ಹೊಂದಿರುವ ಭಾರತ, ಈ ಪಂದ್ಯವನ್ನು ಗೆದ್ದು ಮುನ್ನಡೆಯನ್ನು 2-0ಗೆ ವಿಸ್ತರಿಸಿಕೊಳ್ಳುವ ತವಕದಲ್ಲಿದೆ.

The post ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ: ಸೂರ್ಯವಂಶಿಗಿಲ್ಲ ಚಾನ್ಸ್, ತವರಿನಲ್ಲಿ ಇಶಾನ್ ಕಿಶನ್ ಮೇಲೆ ಕಣ್ಣು! appeared first on Samyukta Karnataka.