Home News ಪೊಲೀಸ್ ಕಮಿಷನರ್ ದಯಾನಂದ ಅಮಾನತು ರದ್ದತಿಗೆ ಆಗ್ರಹಿಸಿ ನಿವೃತ್ತ ಎಎಸ್ಐ ಏಕಾಂಗಿ ಧರಣಿ

ಪೊಲೀಸ್ ಕಮಿಷನರ್ ದಯಾನಂದ ಅಮಾನತು ರದ್ದತಿಗೆ ಆಗ್ರಹಿಸಿ ನಿವೃತ್ತ ಎಎಸ್ಐ ಏಕಾಂಗಿ ಧರಣಿ

ಸಂ.ಕ ಸಮಾಚಾರ, ಕೋಲಾರ : ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ದಯಾನಂದ ಅವರ ಅಮಾನತು ಆದೇಶ ರದ್ದುಪಡಿಸಲು ಒತ್ತಾಯಿಸಿ ಇಲ್ಲಿನ ಗಾಂಧಿವನದಲ್ಲಿ ನಿವೃತ್ತ ಎಎಸ್ಐ ಟೈಗರ್ ವೆಂಕಟೇಶ್ ಏಕಾಂಗಿಯಾಗಿ ಅನಿರ್ಧಿಷ್ಟ ಧರಣಿ ಆರಂಭಿಸಿದ್ದಾರೆ.
ಪ್ರಾಮಾಣಿಕ ಅಧಿಕಾರಿಯಾಗಿರುವ ದಯಾನಂದ್ ಅವರು ಯಾವುದೇ ತಪ್ಪು ಮಾಡದೆ ಇದ್ದರೂ ಸಹ ಸರ್ಕಾರ ಅನಗತ್ಯವಾಗಿ ಅವರ ವಿರುದ್ಧ ಕ್ರಮ ಕೈಗೊಂಡಿರುವುದು ಸರಿಯಲ್ಲ ಕೂಡಲೇ ಅಮಾನತು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರ ಅಮಾನತು ರದ್ದು ಮಾಡುವವರೆಗೂ ತಮ್ಮ ಪ್ರತಿಭಟನೆ ಮುಂದುವರೆಸುವುದಾಗಿ ಟೈಗರ್ ವೆಂಕಟೇಶ್ ತಿಳಿಸಿದ್ದಾರೆ

Exit mobile version