Home News ಮರು ಜಾತಿ ಗಣತಿಗೆ ಸ್ವಾಗತ

ಮರು ಜಾತಿ ಗಣತಿಗೆ ಸ್ವಾಗತ

ದಾವಣಗೆರೆ: ಮರು ಜಾತಿ ಗಣತಿ ಮಾಡುವುದಕ್ಕೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರು ಜಾತಿ ಗಣತಿ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹವಾಗಿದೆ ಎಂದು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವಿಚಾರ, ಮರು ಜಾತಿ ಗಣತಿ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಮಾತನಾಡಿದ್ದಾರೆ. ಹಳೆ ಜಾತಿ ಗಣತಿ ಎಂದು ಹೇಳುತ್ತಿದ್ದಾರೆ. ಮರು ಜಾತಿ ಗಣತಿ ಮಾಡುತ್ತಿದ್ದಾರೆ.
ಸ್ವಾಗತಿಸುವುದಾಗಿ ತಿಳಿಸಿದರು. ಜಾತಿ ಗಣತಿ ವ್ಯವಸ್ಥಿತವಾಗಿಲ್ಲ ಎಂಬ ವಿಚಾರದ ಬಗ್ಗೆ ನಾನು ಹಿಂದಿನಿಂದಲೂ ಹೇಳುತ್ತಿದ್ದೇನೆ. ಹಳೆಯ ವರದಿಯಲ್ಲಿ ೬೦ ಸಾವಿರ ಲಿಂಗಾಯತರು ಇದ್ದಾರೆ ಎಂಬ ವರದಿ ತಪ್ಪಾಗಿತ್ತು. ಮರು ಸಮೀಕ್ಷೆ ಮಾಡಲು ನಾನೇ ಮೊದಲಿಗ. ನಮ್ಮ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿಸಿದ್ದೇನೆ. ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ. ಒಳಮೀಸಲಾತಿ ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದ್ದಾರೋ, ಅದೇ ರೀತಿ ಜಾತಿ ಗಣತಿ ನಡೆಯಬೇಕೆಂದರು.

Exit mobile version