ಮುಂಬೈ: ೧೮ನೇ ಇಂಡಿಯನ್ ಪ್ರೀಮಿಯರ್ ಲೀಗ್ನ ವೀಕ್ಷಣೆಯಲ್ಲಿ ದಾಖಲೆ ಸೃಷ್ಟಿಯಾಗಿದೆ. ಓಟಿಟಿ ಹಾಗೂ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಐಪಿಎಲ್ ಒಂದು ಶತಕೋಟಿ ವೀಕ್ಷಕರನ್ನು ತಲುಪಿದೆ. ಅಲ್ಲದೇ ೮೪೦ ಶತಕೋಟಿ ನಿಮಿಷಗಳಿಗಿಂತಲೂ ಹೆಚ್ಚಿನ ವೀಕ್ಷಣೆ ಸಮಯವನ್ನು ದಾಖಲಿಸಿದೆ ಎಂದು ತಿಳಿದು ಬಂದಿದೆ.
ಜಿಯೋಹಾಟ್ಸ್ಟಾರ್, ೨೩.೧ ಶತಕೋಟಿಗೂ ಹೆಚ್ಚು ಮಂದಿ ವೀಕ್ಷಣೆಗಳು ಕಂಡು ಬಂದಿದ್ದು, ೩೮೪.೬ ಶತಕೋಟಿ ನಿಮಿಷಗಳ ವೀಕ್ಷಣೆಗೆ ಒಳಗಾಗಿದೆ. ಇದು ಡಿಜಿಟಲ್ ವೀಕ್ಷಣೆಯಲ್ಲಿ ವರ್ಷದಿಂದ ವರ್ಷಕ್ಕೆ ೨೯% ಏರಿಕೆಯನ್ನು ತೋರಿಸಿದೆ. ಲೀನಿಯರ್ ಟೆಲಿವಿಷನ್ನಲ್ಲಿ, ಲೀಗ್ ನೇರ ಪ್ರಸಾರ ವೀಕ್ಷಕರ ಸಂಖ್ಯೆಗೆ ಹೊಸ ಮಾನದಂಡವನ್ನು ಸ್ಥಾಪಿಸಿದ್ದು, ಸ್ಟಾರ್ ಸ್ಪೋರ್ಟ್ಸ್ ೪೫೬ ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯವನ್ನು ಹೊಂದಿದೆ ಎಂದು ವರದಿಗಳಾಗಿವೆ.
ಈ ಎರಡೂ ಪ್ರಸಾರ ವೇದಿಕೆಗಳಲ್ಲಿ ಒಟ್ಟು ೩೧.೭ ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಸಮಯವನ್ನು ಸಂಗ್ರಹಿಸಿದೆ. ಇದು ಖಿ೨೦ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯವಾಗಿದೆ. ಇನ್ನು ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯವನ್ನು ೧೬೯ ಮಿಲಿಯನ್ ವೀಕ್ಷಕರು ಮತ್ತು ೧೫ ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆಗೆ ಒಳಪಟ್ಟಿದೆ. ಜಿಯೋಹಾಟ್ಸ್ಟಾರ್ನಲ್ಲಿ, ಈ ಫೈನಲ್ ಪಂದ್ಯ ೮೯೨ ಮಿಲಿಯನ್ ವೀಡಿಯೊ ವೀಕ್ಷಣೆಯಷ್ಟು ವೀಕ್ಷಣೆಯಾಗಿದೆ ಎಂದು ಪ್ರಸಾರ ವಾಹಿನಿಗಳು ತಿಳಿಸಿವೆ.