Home ತಾಜಾ ಸುದ್ದಿ ಸಿಎಂ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ

ಸಿಎಂ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹುಬ್ಬಳ್ಳಿಯ ಲಿಂಗಾಯತ ಪಂಚಮಸಾಲಿ ವಕೀಲರ ಸಂಘವು ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸ ಮಾತನಾಡಿದ ಅವರು, ಕೂಡಲ ಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತ್ರತ್ವದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟವನ್ನು ಬೆಳಗಾವಿಯ ಸುವರ್ಣ ಸೌಧದೆದರು ಹಮ್ಮಿಕೊಂಡಿದ್ದ ಸಮಯದಲ್ಲಿ ಪೊಲೀಸರು ಏಕಾ ಏಕಿ ಲಿಂಗಾಯತ ಪಂಚಮಸಾಲಿ ಹೋರಾಟಗಾರರ ಮೇಲೆ ಕಾನೂನು ಬಾಹೀರವಾಗಿ ಲಾಠಿ ಪ್ರಹಾರ ಮಾಡಿದ್ದರು. ಇದನ್ನು ಪ್ರಶ್ನಿಸಿ ಸಮುದಾಯದ ಮುಖಂಡರು ಮತ್ತು ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣವನ್ನು ತನಿಖೆ ಮಾಡಿದ ನ್ಯಾಯಾಧೀಶರು, ಈ ಸಂಬಂಧ ಸಮೀತಿಯೊಂದನ್ನು ರಚಿಸಿ ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ನ್ಯಾಯಾಲಯ ನೀಡಿದ್ದ ಗಡುವು ಜು.೪ಕ್ಕೆ ಮುಕ್ತಾಯವಾದರೂ ಸರ್ಕಾರದಿಂದ ನ್ಯಾಲಾಯಲಕ್ಕೆ ವರದಿ ಸಲ್ಲಿಕೆಯಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹುಬ್ಬಳ್ಳಿಯ ಲಿಂಗಾಯತ ಪಂಚಮಸಾಲಿ ವಕೀಲರ ಸಂಘವು ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಿದೆ ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಉದ್ದೇಶ ಪೂರ್ವಕವಾಗಿ ನ್ಯಾಯಾಂಗ ತನಿಖಾ ಆಯೋಗವನ್ನು ರಚನೆ ಮಾಡದೇ ಮತ್ತು ನ್ಯಾಯಾಂಗ ತನಿಖೆಯನ್ನು ಮಾಡಿ ವರದಿಯನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಮುಂಬರುವ ದಿನಗಳಲ್ಲಿ ಹೋರಾಟ ಇನ್ನೂ ಚುರುಕುಗೊಳ್ಳಲಿದೆ. ಕೂಡಲಸಂಗಮ ಶ್ರೀಗಳು ಯಾವುದೇ ವ್ಯಕ್ತಿಯ ಪರವಾಗಿಲ್ಲ. ಸಮಾಜದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರ ಪರವಾಗಿ ಮಾತನಾಡಿದ್ದಾರೆ. ಅವರಿಗೆ ಯಾರ ಮೇಲೂ ವೈಯಕ್ತಿಕ ಕಾಳಜಿ ಇಲ್ಲ ಎಂದರು.
ಕೇಂದ್ರ ಸರ್ಕಾರದ ಯೋಜನೆಯಡಿ ಸಂಸದ ಕುಮಾರಸ್ವಾಮಿ ೪೫೦೦ ಇ-ಬಸ್‌ಗಳನ್ನು ಬೆಂಗಳೂರಿಗೆ ಕೊಡಿಸಿದ್ದಾರೆ. ಅದನ್ನು ಸ್ವಾಗತಿಸಿ, ಉತ್ತರ ಕರ್ನಾಟಕಕ್ಕೂ ಹೊಸ ಬಸ್ ಯೋಜನೆಗಳನ್ನೂ ವಿಸ್ತರಿಸುವಂತೆ ಪತ್ರ ಮುಖೇಣ ಮನವಿ ಮಾಡಿದ್ದೇನೆ. ಅವರೂ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರನ್ನು ಎಐಸಿಸಿ ಅಹಿಂದ ಘಟಕದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿರುವುದು ರಾಜಕೀಯ ಪ್ರೇರಿತ. ಅವರನ್ನು ರಾಜ್ಯದಿಂದ ದೆಹಲಿಗೆ ಕಳಿಸಲು ಕಾಂಗ್ರೆಸ್‌ನ ದೆಹಲಿಯ ನಾಯಕರು ಪ್ಲಾನ್ ಮಾಡಿರಬಹುದು. ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿ ವರಿಷ್ಠರಿಗೆ ಬಿಟ್ಟಿದ್ದು. ಸಮರ್ಥ ಅಭ್ಯರ್ಥಿಯನ್ನು ನೇಮಕ ಮಾಡುತ್ತಾರೆ ಎಂಬುದಾಗಿ ಭರವಸೆ ಇದೆ ಎಂದರು. ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ಕಾರ್ಯದರ್ಶಿ ಜಿ.ಸಿ.ಕೆಲಗೇರಿ, ವಕೀಲರಾದ ನಾಗನಗೌಡ, ಗುರು ಕೆಲಗೇರಿ, ಬಾಪುಗೌಡ ಸಾಬಳದ, ಶ್ರೀಕಾಂತ ಗುಳೇದ ಹಾಗೂ
ಎಸ್.ಎಸ್.ಕೊಟಗಿ ಇದ್ದರು.

Exit mobile version