Home ತಾಜಾ ಸುದ್ದಿ ರಸ್ತೆಗಳ ಅಭಿವೃದ್ದಿಯ ಪಥ ‘ಕಲ್ಯಾಣ‘ಕ್ಕೆ ನಿಜಾರ್ಥ

ರಸ್ತೆಗಳ ಅಭಿವೃದ್ದಿಯ ಪಥ ‘ಕಲ್ಯಾಣ‘ಕ್ಕೆ ನಿಜಾರ್ಥ

ಬೆಂಗಳೂರು: ರಸ್ತೆಗಳ ಅಭಿವೃದ್ದಿಯ ಕಲ್ಯಾಣ ಪಥ ಯೋಜನೆಯು ‘ಕಲ್ಯಾಣ‘ಕ್ಕೆ ನಿಜಾರ್ಥ ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಸ್ತೆಗಳು ಅಭಿವೃದ್ಧಿಯೆಡೆಗಿನ ದಾರಿಗಳಾಗಿರುತ್ತವೆ, ಪರಿವರ್ತನೆಯ ಪಥಗಳಾಗುತ್ತವೆ. ಗ್ರಾಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿಯೆಡೆಗೆ ಕೊಂಡೊಯ್ಯುವ ಸಲುವಾಗಿ ನಮ್ಮ ಸರ್ಕಾರ ರೂಪಿಸಿರುವ ಮಹತ್ವದ ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಗಳು ಹೊಸ ಮನ್ವಂತರ ಸಾಕ್ಷಿಯಾಗುವುದು ನಿಶ್ಚಿತ. ₹5,200 ಕೋಟಿ ವೆಚ್ಚದ, ಒಟ್ಟು 7,110 ಕಿ.ಮೀ ರಾಜ್ಯದ ಗ್ರಾಮೀಣ ರಸ್ತೆಗಳ ಸುಧಾರಣೆಯ ಈ ಯೋಜನೆ ದೇಶದಲ್ಲೇ ಪ್ರಥಮ ಎನ್ನಬಹುದಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ₹1000 ಕೋಟಿ ವೆಚ್ಚದ 1,150 ಕಿ.ಮೀ ರಸ್ತೆಗಳ ಅಭಿವೃದ್ದಿಯ ಕಲ್ಯಾಣ ಪಥ ಯೋಜನೆಯು ‘ಕಲ್ಯಾಣ‘ಕ್ಕೆ ನಿಜಾರ್ಥ ನೀಡಲಿದೆ. “ಅಭಿವೃದ್ಧಿಯ ಗುರಿ, ಸುಸಜ್ಜಿತ ದಾರಿ“ ಇದು ಗ್ರಾಮೀಣಾಭಿವೃದ್ಧಿ ಇಲಾಖೆಯ ಗ್ರಾಮ ಕಲ್ಯಾಣದ ಕನಸು ಎಂದಿದ್ದಾರೆ.

Exit mobile version