ಚಿಕ್ಕಮಗಳೂರು: ಮಾತ್ರೆ ಖರೀದಿಸಿ ಸೇವಿಸುವ ಮೊದಲೇ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಚಿಕ್ಕಮಗಳೂರು ನಗರದ ದೀಪ ನರ್ಸಿಂಗ್ ಹೋಂ ಬಳಿ ಈ ಘಟನೆ ಜೂನ್ 26ರಂದು ನಡೆದಿದೆ. ವಿಶ್ವನಾಥ್ (65) ಮೃತ ದುರ್ದೈವಿ, ಮಾತ್ರೆ ತೆಗೆದುಕೊಂಡು ನೀರು ಕೇಳಿದ್ದು ಕುಡಿಯುವ ಮೊದಲೇ ಹೃದಯಾಘಾತವಾಗಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.