Home ತಾಜಾ ಸುದ್ದಿ ಬೆಳಗಾವಿ ಮೇಯರ್‌ಗೆ ಮತ್ತೇ ರಿಲೀಫ್..!

ಬೆಳಗಾವಿ ಮೇಯರ್‌ಗೆ ಮತ್ತೇ ರಿಲೀಫ್..!

ಬೆಂಗಳೂರು: ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ ಮಂಗೇಶ್ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಅವರಿಗೆ ಹೈಕೋರ್ಟ್ ಮತ್ತೇ ರಿಲೀಫ್ ನೀಡಿದೆ.
ಸಾಮಾಜಿಕ ಹೋರಾಟಗಾರ ಸುಜೀತ್ ಮುಳಗುಂದ ಅವರು ಇವರಿಬ್ಬರ ಸದಸ್ಯತ್ವ ರದ್ದತಿ ಬಗ್ಗೆ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಬೆಳಗಾವಿ ತಿನಿಸು ಕಟ್ಟೆ ಪ್ರಕರಣ ಸಂಬಂಧ ಅವರು ದೂರು ನೀಡಿದ್ದರು.
ಹೈಕೋರ್ಟ್‌ನಲ್ಲಿಂದು ನಡೆದ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಸಮಯ ಕೇಳಿದರು. ಈ ಹಿನ್ನೆಲೆಯಲ್ಲಿ ಅವರಿಬ್ಬರ ಸದಸ್ಯತ್ವಕ್ಕೆ ನೀಡಿದ ತಡೆಯಾಜ್ಞೆಯನ್ನು ಕೋರ್ಟ್ ಬರುವ ದಿ. ‌28ಕ್ಕೆ ಮುಂದೂಡಿತು.
ಇಲ್ಲಿ ಮೇಯರ್ ಪರವಾಗಿ ಹೈಕೋರ್ಟ್ ನ್ಯಾಯವಾದಿ ಶಾಂತನಗೌಡರ‌ ಮತ್ತು ಬೆಳಗಾವಿಯ ಹಿರಿಯ‌ ನ್ಯಾಯವಾದಿ ರವಿರಾಜ ಪಾಟೀಲರು ವಾದ ಮಂಡಿಸಿದರು. ಈ ಹಿಂದೆ ಹೈಕೋರ್ಟ್ ದಿ.‌ 7ರವರೆಗೆ ಮಾತ್ರ ತಡೆಯಾಜ್ಞೆ ನೀಡಿತ್ತು. ಇದಕ್ಕೂ ಮೊದಲು ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶವನ್ನು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ನ್ಯಾಯಾಲಯ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಇವರು ಹೈಕೋರ್ಟ್‌ ಮೆಟ್ಟಿಲು ತುಳಿದಿದ್ದರು.

Exit mobile version