Home ಕಾರ್ಟೂನ್ ನಿಮಗೇ ಲುಕ್ಸಾನು ಗ್ಯಾರಂಟಿ..

ನಿಮಗೇ ಲುಕ್ಸಾನು ಗ್ಯಾರಂಟಿ..

ಊರಲ್ಲಿ ಸೇರಿ ಉಸಾಪರಿ ಮಾಡುತ್ತಿದ್ದ ಉರೂಣಗಿ ಉಮ್ರ್ಯಾ ಪಿಯುಸಿ ರಿಸಲ್ಟ್ ಬಂದಾಗಿನಿಂದ ನಾಪತ್ತೆ ಆಗಿದ್ದ. ಓದು.. ಓದು ಎಂದು ಅವರ ಮನೆಯಲ್ಲಿ ಹೇಳಿದರೂ ಉಮ್ರ್ಯಾ ಮಾತು ಕೇಳುತ್ತಿರಲಿಲ್ಲ. ನಾಳೆ ಪರೀಕ್ಷೆ ಇದೆ ಅಂದರೆ ಸಿನೆಮಾಕ್ಕೆ ಹೋಗಿಬಂದು ಗೆಳೆಯರ ಜತೆ ಓದುತ್ತಿದ್ದೆ ಎಂದು ಹೇಳುತ್ತಿದ್ದ. ಸಿನೆಮಾ ಟಾಕೀಸಿನಿಂದ ಮುಂದೆ ಹಿರೋಯಿನ್ ಪೋಸ್ಟರ್ ನೋಡಿಕೊಂಡು ನಿಂತಿದ್ದ ಲೊಂಡೆನುಮನನ್ನು ತದುಕಿ ಅವಳು ನನ್ನ ಹೀರೋಯಿನ್ ನೀನ್ಯಾಕೆ ನೋಡುತ್ತಿದ್ದಿಯ ಎಂದು ದನಕ್ಕೆ ಬಡಿದ ಹಾಗೆ ಬಡಿದಿದ್ದ. ಮರುದಿನ ರಿಸಲ್ಟೂ ಬಂದಿತ್ತು. ಆತ ಊರು ಬಿಟ್ಟು ಓಡಿ ಹೋಗಿದ್ದ. ತಲೆಕೆಟ್ಟ ಅವರ ಅಪ್ಪ ಪತ್ರಿಕೆಗಳಲ್ಲಿ ಈ ರೀತಿ ಜಾಹಿರಾತು ನೀಡಿದ್ದ…
ಪ್ರಿಯರೇ…ಈ ಫೋಟೋದಲ್ಲಿರುವ ಕರಿಮಸುಡಿ ಸುರಸುಂದರಾಂಗ ನನ್ನ ಮಗ ಮನೆಬಿಟ್ಟು ಓಡಿ ಹೋಗಿದ್ದಾನೆ. ಎಲ್ಲರ ಹಾಗೆ ನಾವು ಅಲ್ಲಿಲ್ಲಿ ಎಲ್ಲಿಯೂ ಹುಡುಕಿಲ್ಲ. ಯಾರಿಗೂ ಫೋನ್ ಮಾಡಿ ಹಿಂಗಿಂಗೆ ನಮ್ಮ ಮಗ ಹೋಗಿದ್ದಾನೆ ಎಂದೂ ಹೇಳಿಲ್ಲ. ಕೆಲವರು ಸಿನೆಮಾ ಟಾಕೀಸಿನಲ್ಲಿದ್ದ ಅಂದರೆ ಹಲವರು ಇನ್ನೆಲ್ಲೋ ಇದ್ದ ಎಂದು ಹೇಳುತ್ತಿದ್ದಾರೆ. ಆದರೆ ನಾವು ಹೂಂ ಅಂದಿಲ್ಲ ಊಹೂಂ ಅಂದಿಲ್ಲ ಈಗ ಅಕಸ್ಮಾತ್ ನಿಮಗೆ ಕಾಣಿಸಿದ ಅಂದರೆ ಆತನನ್ನು ಕರೆದುಕೊಂಡು ಬರಬೇಡಿ. ಹಾಗೊಂದು ವೇಳೆ ಬಂದರೆ ನಿಮಗೇ ಲುಕ್ಸಾನು. ಯಾಕೆಂದರೆ ಕರೆದುಕೊಂಡು ಬಂದು ಮನೆಗೆ ಬಿಟ್ಟರೆ ನೀವೇ ನಮಗೆ ಲಕ್ಷ ರೂಪಾಯಿ ಕೊಟ್ಟು ಹೋಗಬೇಕು. ಇಷ್ಟರ ಮೇಲೆ ನಿಮ್ಮಿಷ್ಟ.

  • ತಮ್ಮವ
Exit mobile version