Home ಆರೋಗ್ಯ ಕೆಎಲ್ಇ ವೈದ್ಯರ ಯಶಸ್ವಿ ಶಸ್ತ್ರ ಚಿಕಿತ್ಸೆ

ಕೆಎಲ್ಇ ವೈದ್ಯರ ಯಶಸ್ವಿ ಶಸ್ತ್ರ ಚಿಕಿತ್ಸೆ

ಬೆಳಗಾವಿ; ಲೀವರ ಸಂಪೂರ್ಣವಾಗಿ ಕಾರ‍್ಯಕ್ಷಮತೆಯನ್ನು ಕಳೆದುಕೊಂಡು ಜೀವನಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲೀವರ ಕಸಿ ಶಸ್ತçಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು ಉಳಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟೊಎಂಟ್ರಾಲಾಜಿ ತಜ್ಞವೈದ್ಯರ ತಂಡವು ಯಶಸ್ವಿಯಾಗಿದ್ದು, ತಂದೆಯನ್ನು ಉಳಿಸಿಕೊಳ್ಳಲೇಬೇಕೆಂಬ ಛಲತೊಟ್ಟಿದ್ದ ಮಗ ಲಿವರ ದಾನ ಮಾಡಿ ತಂದೆ –ಮಗನ ಬಾಂಧವ್ಯವನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದ್ದಾನೆ.
ರಾಯಬಾಗ ತಾಲೂಕಿನ 56 ವರ್ಷದ ರೈತನ ಲೀವರ ಸಂಪೂರ್ಣವಾಗಿ ಕರ‍್ಯಕ್ಷಮತೆಯನ್ನು ಕಳೆದುಕೊಂಡಾಗ ಲಿವರ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸುವದು ಅನಿವರ‍್ಯವಾಗಿತ್ತು, ತಡಮಾಡಿದರೆ ಜೀವಕ್ಕೆ ಅಪಾಯವಿದ್ದ ಕಾರಣ 29 ವರ್ಷದ ಮಗ ಲಿವರ ದಾನ ಮಾಡಿದರು. ಜೀವಂತ ವ್ಯಕ್ತಿಯ ಲೀವರ ತೆಗೆದು ಲಿವರ ಹಾಳಾದ ರೋಗಿಗೆ ಕಸಿ ಮಾಡಬೇಕಾಗಿತ್ತು. ಅತ್ಯಂತ ಕ್ಲಿಷ್ಕರವಾದ ಕಸಿ ಶಸ್ತçಚಿಕಿತ್ಸೆಯನ್ನು ನೆರವೆರಿಸಿ, ರೋಗಿಗೆ ಪುನರಜನ್ಮ ನೀಡುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಉತ್ತರ ಕರ್ನಾಟಕ, ದ. ಮಹಾರಾಷ್ಟç ಹಾಗೂ ಗೋವಾ ರಾಜ್ಯಗಳಲ್ಲಿಯೇ ಪ್ರಥಮ ಬಾರಿಗೆ ಜೀವಂತ ದಾನಿಯ ಲೀವರ ಕಸಿ ಮಾಡಿರುವದು ಪ್ರಥಮ.
ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ ಆಸ್ಪಯತ್ರೆ ಮುಖ್ಯ ಗ್ಯಾಸ್ಟೊçಎಂಟ್ರಾಲಾಜಿಸ್ಟ ಹಾಗೂ ಲೀವರ ತಜ್ಞವೈದ್ಯರಾದ ಡಾ. ಸಂತೋಷ ಹಜಾರೆ ಅವರು, ಕೊನೆಯ ಹಂತದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಂದೆಯ ಜೀವವನ್ನು ಉಳಿಸಲು ಅವರ 29 ವರ್ಷದ ಮಗ ತನ್ನ ಲಿವರ್‌ನ ಸ್ವಲ್ಪ ಭಾಗವನ್ನು ದಾನ ಮಾಡಿದ್ದು, ಶಸ್ತ್ರಚಿಕಿತ್ಸೆಯ ನಂತರ ದಾನಿ ಮತ್ತು ದಾನ ಪಡೆದ ರೋಗಿಯೂ ಕೂಡ ಗುಣಮುಖರಾಗಿದ್ದು, ದಾನಿ (ಮಗ) 8ನೇ ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆ.
ಅತ್ಯಂತ ಸಂಕೀರ್ಣ ಮತ್ತು ತಾಂತ್ರಿಕತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ಸಹಕಾರದೊಂದಿಗೆ ಮುಖ್ಯ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಕ ಡಾ. ಸೋನಲ್ ಅಸ್ತಾನಾ, ಡಾ. ವಚನ ಹುಕ್ಕೇರಿ ಹಾಗೂ ಡಾ. ರೋಮೆಲ್ ಎಸ್ ಅವರ ನೇತೃತ್ವದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಗ್ಯಾಸ್ಟೊçಎಂಟ್ರಾಲಾಜಿ ಲೀವರ ಶಸ್ತçಚಿಕಿತ್ಸಕರಾದ ಡಾ. ಸುದರ್ಶನ್ ಚೌಗಲೆ ಮತ್ತು ಡಾ. ಕಿರಣ್ ಉರಬಿನಹಟ್ಟಿ ತಂಡವು ಯಶಸ್ವಿ ಶಸ್ತçಚಿಕಿತ್ಸೆ ನೆರವೇರಿಸಿತು.
ಕ್ಲಿಷ್ಟಕರವಾದ ಶಸ್ತçಚಿಕಿತ್ಸೆ ನೆರವೇರಿಸಲು ನುರಿತ ತಜ್ಞವೈದ್ಯರು, ಅತ್ಯಾಧುನಿಕ ಮೂಲಸೌಲಭ್ಯ. ಪ್ರತ್ಯೇಕ ಶಸ್ತçಚಿಕಿತ್ಸಾ ಕೊಠಡಿ, ತೀವ್ರನಿಗಾ ಘಟಕಗಳು, ನುರಿತ ನರ್ಸಿಂಗ ಸಿಬ್ಬಂದಿಗಳು ಅತ್ಯವಶ್ಯ. ಅವುಗಳೆಲ್ಲ ನಮ್ಮಲ್ಲಿ ಲಭ್ಯವಿದ್ದು, ಇಂಥ ಶಸ್ತçಚಿಕಿತ್ಸೆಗಳನ್ನು ನೆರವೇರಿಸಲು ಸಾಧ್ಯವಾಗಿದೆ. ಸುಮಾರು ಹತ್ತು ಗಂಟೆಗಳ ಕಾಲ ಸುಧೀರ್ಘ ಶಸ್ತçಚಿಕಿತ್ಸೆಯನ್ನು ನೆರವೇರಿಸಲಾಗಿದ್ದು, ಅರಿವಳಿಕೆ ತಜ್ಞವೈದ್ಯರಾದ ಡಾ. ಅರುಣ್ ವಿ., ಡಾ. ರಾಜೇಶ್ ಮಾನೆ, ಡಾ. ಮಂಜುನಾಥ ಪಾಟೀಲ್ ಮತ್ತು ಡಾ. ರೂಪಾ ಎಂ.ಎನ್ ಅವರ ತಂಡವು ಸಹಕರಿಸಿತು. ನರ್ಸಿಂಗ್ ಸಿಬ್ಬಂದಿಗಳಾದ ವೈಶಾಲಿ ಸೇಬಲ್ ಮತ್ತು ರುದ್ರೇಶ್ ಹಿರೇಮಠ್ ನೇತೃತ್ವದ ತಂಡವು ಯಶಸ್ವಿಯಾಗಿ ನಿರ್ವಹಿಸಿತು. ಲಿವರ್ ಟ್ರಾನ್ಸ್ಪ್ಲಾಂಟ್ ಕೋಆರ್ಡಿನೇಟರ ಡಾ. ಗೀತಾ ದೇಸಾಯಿ ಮತ್ತು ಬಸವರಾಜ್ ಮಜತಿ ಅವರು ಆಪ್ತಸಮಾಲೋಚನೆ ನಡೆಸಿದಿರು.
ಉತ್ತರ ಕರ್ನಾಟಕದಲ್ಲಿ ಲಿವರ್ ಕಾಯಿಲೆ ಸಾಮಾನ್ಯವಾಗಿದ್ದು, ಅದರಿಂದ ಬಳಲುತ್ತಿರುವ ಅನೇಕ ರೋಗಿಗಳು ಮಹಾನಗರದ ಕಾರ್ಪೊರೇಟ್ ಆಸ್ಪತ್ರಗಳಲ್ಲಿ ಕಸಿ ಶಸ್ತçಚಿಕಿತ್ಸೆ ಮಾಡಿಸಿಕೊಳ್ಳಲು ಅಷ್ಟೊಂದು ಆರ್ಥಿಕವಾಗಿ ಸಬಲರಾಗಿಲ್ಲ. ಆದ್ದರಿಂದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ವೆಚ್ಚದಾಯಕ ಕಸಿಶಸ್ತçಚಿಕಿತ್ಸೆಗಳನ್ನೂ ಕೂಡ ಕಡಿಮೆ ದರದಲ್ಲಿ ನೆರವೆರಿಸಲಾಗುತ್ತಿದೆ. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳ ಸಹಯೋಗದೊಂದಿಗೆ ಈ ಭಾಗದ ಜನರಿಗೆ ಅತ್ಯಂತ ಯಶಸ್ವಿ ಲಿವರ್ ಕಸಿ ನೆರವೇರಿಸಲಾಗುತ್ತಿದೆ.
ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಈ ಭಾಗದಲ್ಲಿ ಪ್ರಮುಖ ಬಹು ಅಂಗಾಂಗ ಕಸಿ ನೆರವೆರಿಸುವದರ ಜೊತೆಗೆ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬೋಧನಾ ಸೌಲಭ್ಯ ಹೊಂದಿರುವ ರಾಜ್ಯದ ಏಕೈಕ ಆಸ್ಪತ್ರೆ ಇದಾಗಿದೆ. ಕರ್ನಾಟಕ ಅಲ್ಲದೇ, ಗೋವಾ ಮಹಾರಾಷ್ಟ್ರ ಹಾಗೂ ವಿವಿಧ ರಾಜ್ಯಗಳ ನಗರಗಳಿಂದಲೂ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು,ನುರಿತ ನರ್ಸಿಂಗ ಸಿಬ್ಬಂದಿ, ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವದರಿಂದ ಇತ್ತಕಡೆ ರೋಗಿಗಳು ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಕೆಎಲಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 101 ಕ್ಕೂ ಹೆಚ್ಚು ಕಿಡ್ನಿ( ಮೂತ್ರಪಿಂಡ), 22 ಲೀವರ ಹಾಗೂ 14 ಹೃದಯ ಕಸಿ ಶಸ್ತçಚಿಕಿತಸೆಯನ್ನು ನೆರವೇರಿಸಲಾಗಿದೆ. ಅಲ್ಲದೇ ಅಸ್ಥಿಮಜ್ಜೆ ( ಬೋನ್ ಮ್ಯಾರೋ ಟ್ರಾನ್ಸಪ್ಲಾö್ಯಂಟ ) ಕಸಿ ಕೂಡ ನೆರವೇರಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅಂಗಾAಗ ಕಸಿ ಶಸ್ತçಚಿಕಿತ್ಸೆಯನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ನೆರವೇರಿಸಿರುವ ಕೀರ್ತಿಗೆ ಭಾಜನವಾಗಿದೆ. ದೀರ್ಘಕಾಲ ನಡೆಯುವ ಕಸಿ ಶಸ್ತçಚಿಕಿತ್ಸೆಗಳು ಸಾಮಾನ್ಯವಾಗಿ ಅತ್ಯಧಿಕ ವೆಚ್ಚ ತಗಲುತ್ತದೆ. ಬೆಂಗಳೂರಿನಂತ ನಗರಗಳಿಗೆ ಹೋಲಿಸಿದರೆ ನಮ್ಮಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಅಂಗಾಂಗಳ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿದೆ.
ಮೆದಳು ನಿಷ್ಕ್ರೀಯಗೊಂಡ ವ್ಯಕ್ತಿಯು ಮಾಡಿದ ದಾನದಿಂದ 22 ಯಶಸ್ವಿ ಲಿವರ್ ಕಸಿ ನೆರವೆರಿಸಿದ್ದು, ರೋಗಿಗಳು ತೋರಿದ ಪ್ರಿತಿ ವಿಶ್ವಾಸಕ್ಕೆ ಅವರಿಗೆ ಧನ್ಯವಾದಗಳು. ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಜೀವಂತ ವ್ಯಕ್ತಿಯು ಮಾಡಿದ ದಾನದಿಂದ ಲಿವರ ಕಸಿ ಮಾಡಲಾಗಿದ್ದು, ಕೇವಲ ನಮ್ಮ ಆಸ್ಪತ್ರೆಯೊಂದರಲ್ಲಿಯೇ 35ಕ್ಕೂ ಹೆಚ್ಚು ರೋಗಿಗಳು ಯಕೃತ್ತು ಕಸಿಗಾಗಿ ಕಾಯುತ್ತಿದ್ದಾರೆ. ಆದ್ದರಿಂದ ರೋಗಿಗಳ ಬೇಡಿಕೆಯನ್ನು ಪೂರೈಸಲು ಅಂಗಾಂಗ ದಾನಗಳು ಹೆಚ್ಚಾಗಬೇಕು. ಲಿವರ ವೈಫಲ್ಯಕ್ಕೊಳಗಾದ ರೋಗಿಗಳ ಕುಟುಂಬ ಸದಸ್ಯರು ಸ್ವಯಂಪ್ರೇರಣೆಯಿಂದ ಅಂಗಾಂಗ ದಾನ ಮಾಡಿ, ತಮ್ಮ ಪ್ರೀತಿಪಾತ್ರರ ಜೀವವನ್ನು ಉಳಿಸಬೇಕು. ಯಶಸ್ವಿ ಕಸಿ ಶಸ್ತçಚಿಕಿತ್ಸೆ ನಡೆಸಿದ ಡಾ. ಸಂತೋಷ್ ಹಜಾರೆ ಮತ್ತು ಡಾ. ಸುದರ್ಶನ್ ಚೌಗಲೆ ಅವರ ನೇತೃತ್ವದ ತಂಡವನ್ನು ಅವರು ಅಭಿನಂದಿಸಿದರು
ಪತ್ರಿಕಾಗೋಷ್ಠಿಯಲ್ಲಿ ಗ್ಯಾಸ್ಟೊçಎಂಟ್ರಾಲಾಜಿ ಶಸ್ತçಚಿಕಿತ್ಸಕರಾದ ಡಾ. ಸುದರ್ಶನ ಚೌಗಲಾ, ಲೀವರ ಕಸಿಶಸ್ತçಚಿಕಿತ್ಸಕರಾದ ಡಾ. ಸೋನಲ್ ಆಸ್ಥಾನಾ, ಡಾ. ವಚನ ಹುಕ್ಕೇರಿ ಕ್ಲಿನಿಕಲ್ ಸರ್ವಿಸ್ ನಿರ್ದೇಶಕರಾದ ಡಾ. ಮಾಧವ್ ಪ್ರಭು, ಅರವಳಿಕೆ ತಜ್ಞವೈದ್ಯರಾದ ಡಾ. ರಾಜೇಶ ಮಾನೆ ಆಡಳಿತಾಧಿಕಾರಿ ಡಾ. ಬಸವರಾಜ್ ಬಿಜರಗಿ ಅವರು ಉಪಸ್ಥಿತರಿದ್ದರು.

Exit mobile version