Home ತಾಜಾ ಸುದ್ದಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುತ್ತಿದ್ದರು-ಕೆ.ಎಸ್​​ ಈಶ್ವರಪ್ಪ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುತ್ತಿದ್ದರು-ಕೆ.ಎಸ್​​ ಈಶ್ವರಪ್ಪ

ಶಿವಮೊಗ್ಗ: ಅರಣ್ಯ ಸಚಿವ ಉಮೇಶ್​ ಕತ್ತಿ ಅವರ ನಿಧನಕ್ಕೆ ಮಾಜಿ ಸಚಿವ ಕೆ.ಎಸ್​​ ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಚಿವ ಉಮೇಶ್ ಕತ್ತಿ ಅವರು ಇನ್ನಿಲ್ಲ ಎಂಬುವ ಸುದ್ದಿ ಕೇಳಿ ತುಂಬಾ ಆಘಾತವಾಯ್ತು. ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಅಂತಾ ಆಗಾಗ ಹೇಳುತ್ತಿದ್ದರು. ಉತ್ತರ ಕರ್ನಾಟಕ ಇನ್ನು ಅಭಿವೃದ್ಧಿ ಆಗಿಲ್ಲ ಹಾಗಾಗಿ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುತ್ತಿದ್ದರು. ಆ ಭಾಗದ ಜ‌ನ ಮೂಲಭೂತ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂಬ ನೋವು ತೋಡಿಕೊಂಡಿದ್ದರು. ಬಹಳ ಸಜ್ಜನ, ಸರಳ ವ್ಯಕ್ತಿತ್ವದ ವ್ಯಕ್ತಿ. ಅಂತಹ ವ್ಯಕ್ತಿ ಕಳೆದುಕೊಂಡಿರುವುದು ಎಲ್ಲರಿಗೂ ನೋವು ತರಿಸಿದೆ.ಉಮೇಶ್ ಕತ್ತಿ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಭಗವಂತನಲ್ಲಿ‌ ಪ್ರಾರ್ಥನೆ ಮಾಡುತ್ತೇನೆ ಎಂದರು.

Exit mobile version