Home ತಾಜಾ ಸುದ್ದಿ ಅಯೋಧ್ಯೆ ಹಾಗೆ ಕಾಶಿಯಲ್ಲಿಯೂ ಮುಸ್ಲಿಮರ ಸಹಕಾರ: ಈಶ್ವರಪ್ಪ ವಿಶ್ವಾಸ

ಅಯೋಧ್ಯೆ ಹಾಗೆ ಕಾಶಿಯಲ್ಲಿಯೂ ಮುಸ್ಲಿಮರ ಸಹಕಾರ: ಈಶ್ವರಪ್ಪ ವಿಶ್ವಾಸ

ಈಶ್ವರಪ್ಪ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಹಕರಿಸಿದ ಮುಸ್ಲಿಮರು, ಕಾಶಿಯಲ್ಲಿಯೂ ಸಹಕಾರ ನೀಡುತ್ತಾರೆ. ಆದರೆ, ಸಂವಿಧಾನ ಮೀರಿ, ನ್ಯಾಯಾಲಯದ ತೀರ್ಪು ಮೀರಿ ಗಲಾಟೆ ನಡೆಸುವವರಿಗೆ ಬುದ್ಧಿ ಹೇಳಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈ ದೇಶ ಶಾಂತಿಯಿಂದ ಇರಬಾರದು ಎನ್ನುವರು, ನ್ಯಾಯಾಲಯ ನಂಬದೇ ಇರುವವರು ಮಾತ್ರ ಪೂಜೆಗೆ ಅಡ್ಡಿ ಪಡಿಸಬಹುದು. ಮುಸಲ್ಮಾನ ಹಿರಿಯರು ಈ ಬಗ್ಗೆ ಜಾಗೃತರಾಗಿರಬೇಕು ಎಂದರು. ಅಯೋಧ್ಯೆ, ಕಾಶಿ, ಮಥುರಾ ಮೂರು ಹಿಂದೂಗಳ ಪವಿತ್ರ ಕ್ಷೇತ್ರಗಳು. ಮುಸಲ್ಮಾನರು ಹೊಸದಾಗಿ ಕಟ್ಟಿದ ಮಸೀದಿಗಳಿಗೆ ಹಿಂದೂಗಳು ತೊಂದರೆ ಕೊಡಲ್ಲ. ಆದರೆ, ಹಳೆ ದೇವಸ್ಥಾನ ಒಡೆದು ಮಸೀದಿ ಕಟ್ಟಿದರೆ, ಹಿಂದೂಗಳು ಯಾವುದೇ ಕಾರಣಕ್ಕೂ ಬಿಡಲ್ಲ ಎಂದರು.

Exit mobile version