Home ಅಪರಾಧ ಹಣಕಾಸಿನ ವಿಚಾರಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ

ಹಣಕಾಸಿನ ವಿಚಾರಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ

ಬಾಗಲಕೋಟೆ: ಕಾರು ಮಾರಾಟದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಮನಸ್ತಾಪ ಕೊಲೆಯಲ್ಲಿ‌ ಅಂತ್ಯವಾದ ಘಟನೆ ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಜರುಗಿದೆ‌‌.
ಮಾಲತೇಶ್ ದಾಸಪ್ಪನವರ(೩೨) ಕೊಲೆಯಾದ ದುರ್ದೈವಿ ‌.ಚಿನ್ನಪ್ಪ ಬೆಣ್ಣೂರು ಎಂಬಾತ ಆರೋಪಿ, ರವಿವಾರ ಸಂಜೆ ಬೆನಕಟ್ಟಿ ಗ್ರಾಮದ ಜಮೀನುವೊಂದರಲ್ಲಿ ಇಬ್ಬರೂ ಪಾರ್ಟಿ ಮಾಡಿದ್ದು, ಕುಡಿದ ಮತ್ತಿನಲ್ಲಿ ಜಗಳ ಶುರುವಾಗಿದೆ.‌ಚಿನ್ನಪ್ಪ ಗುದ್ದಲಿಯಿಂದ ಹೊಡೆದು ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version