Home ನಮ್ಮ ಜಿಲ್ಲೆ ಉತ್ತರ ಕನ್ನಡ ವಕ್ಷ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಾನವ ಸರಪಳಿ

ವಕ್ಷ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಾನವ ಸರಪಳಿ

ದಾಂಡೇಲಿ: ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ಕ್ರಮವನ್ನು ವಿರೋಧಿಸಿ ದಾಂಡೇಲಿಯ ಹಳಿಯಾಳ ರಸ್ತೆಯಲ್ಲಿ ಇಂದು ಮಧ್ಯಾಹ್ನ ಅಂಜುಮನ್ ಫಲಾವುಲ್ ಮುಸ್ಲಿಮಿನ್ ವತಿಯಿಂದ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಅಂಜುಮನ್ ಫಲಾವುಲ್ ಮುಸ್ಲಿ ಮಿನ್ ಅಧ್ಯಕ್ಷರಾದ ರಿಯಾಜ ಬಾಬು ಸಯ್ಯದ್ ಮಾತನಾಡಿ ಕೇಂದ್ರ ಸರ್ಕಾರ ಮಾಡಲು ಉದ್ದೇಶಿಸಿರುವ ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧವಿದ್ದು, ಆಲ್ ಇಂಡಿಯಾ ಮುಸ್ಲಿಂ ಪರ್ಸ್ ನಲ್ ಲಾ ಬೋರ್ಡ್ ಹಾಗೂ ಕರ್ನಾಟಕ ಉಲ್ಮಾ ಜಮಾತ ಮಾಗ೯ದರ್ಶನದಲ್ಲಿ ಮಾನವ ಸರಪಳಿಯನ್ನು ಶಾಂತಿಯುತವಾಗಿ ಮಾಡಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದೆವೆ ಎಂದರು. ಪ್ರತಿಭಟನೆಯಲ್ಲಿ ಮುಖಂಡರಾದ ಅಬ್ದುಲ್ ಕರೀಂ ಅಜ್ರೇಕರ, ಸತ್ತಾರ ಅಜ್ರೆ ಕರ, ಈಕ್ಬಾಲ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

Exit mobile version