Home ಸುದ್ದಿ ವಿದೇಶ ಪ್ರಧಾನಿ ಹುದ್ದೆಗೆ ಲಿಜ್‌ ಟ್ರಸ್‌ ರಾಜೀನಾಮೆ

ಪ್ರಧಾನಿ ಹುದ್ದೆಗೆ ಲಿಜ್‌ ಟ್ರಸ್‌ ರಾಜೀನಾಮೆ

0
leez

ಪ್ರಧಾನಿ ಹುದ್ದೆಗೇರಿದ ಕೇವಲ 45 ದಿನಗಳಲ್ಲೇ ಬ್ರಿಟನ್‌ ಪ್ರಧಾನಿ ಲಿಜ್‌ ಟ್ರಸ್‌ ತಮ್ಮ ಹುದ್ದೆಗೆ ಇಂದು ದಿಢೀರ್​ ರಾಜೀನಾಮೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ನಾನು ಆರ್ಥಿಕ ಬಿಕ್ಕಟ್ಟು ತಲೆದೋರಿದ್ದಾಗ ಪ್ರಧಾನಿಯಾದೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲಳಾದೆ. ಇದರಿಂದಾಗಿ ನಮ್ಮ ಸಂಸದರ ಬೆಂಬಲವನ್ನು ಕಳೆದುಕೊಂಡಿರುವೆ ಎಂದು ಅವರು ಹೇಳಿದ್ದಾರೆ.
ಇನ್ನು ಲಿಜ್‌ ಟ್ರಸ್‌ ರಾಜೀನಾಮೆ ನೀಡಿರುವ ಬೆನ್ನಲ್ಲೇ ಭಾರತ ಮೂಲದ ರಿಷಿ ಸುನಕ್ ಹುದ್ದೆ ಅಲಂಕರಿಸುತ್ತಾರಾ ಎಂಬ ಚರ್ಚೆ ಶುರುವಾಗಿದೆ.

Exit mobile version