#ViratKohli Archives - Samyukta Karnataka

RCBಗೆ ಹೊಸ ಬಾಸ್: ಐಪಿಎಲ್ ಇತಿಹಾಸದಲ್ಲೇ ಮಹಾ ತಿರುವು; ₹16,660 ಕೋಟಿಗೆ ಬಿಗ್ ಡೀಲ್! ಇಲ್ಲಿದೇ ಡಿಟೇಲ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಐತಿಹಾಸಿಕ ಒಪ್ಪಂದವೊಂದಕ್ಕೆ ಭಾರತೀಯ ಸ್ಪರ್ಧಾ ಆಯೋಗ (CCI) ಅಧಿಕೃತ ಗ್ರೀನ್ ಸಿಗ್ನಲ್ ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆಗೆ ಜೂನ್ 30ರ ಮಂಗಳವಾರದಂದು ಸಿಸಿಐ ಅನುಮೋದನೆ ನೀಡಿದ್ದು, ಆರ್‌ಸಿಬಿ ತಂಡವು ಅಧಿಕೃತವಾಗಿ ಹೊಸ ಮಾಲೀಕರ ಕೈವಶಕ್ಕೆ ಸೇರಿದೆ.

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಒಡೆತನದಲ್ಲಿದ್ದ RCB ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಪ್ರಭಾವಿ ಉದ್ಯಮಿಗಳ ಒಕ್ಕೂಟವು ಭಾರಿ ಮೊತ್ತಕ್ಕೆ ಖರೀದಿಸಿದೆ. ₹16,660 ಕೋಟಿ ರೂಪಾಯಿಗಳ ಈ ಸಂಪೂರ್ಣ ನಗದು ಒಪ್ಪಂದದ (All-Cash Deal) ಪ್ರಕ್ರಿಯೆಯು ಐಪಿಎಲ್‌ನ 19 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದುಬಾರಿ ವ್ಯವಹಾರ ಎಂದು ದಾಖಲಾಗಿದೆ. ಇತ್ತೀಚೆಗಷ್ಟೇ ಐಪಿಎಲ್ ಮತ್ತು ಡಬ್ಲ್ಯೂಪಿಎಲ್ ಎರಡರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದ RCB ತಂಡದ ಮೌಲ್ಯ ಈ ಒಪ್ಪಂದದಿಂದ ಗಗನಕ್ಕೇರಿದೆ.

ಹಾಗೇ ಈ ಬೃಹತ್ ಒಪ್ಪಂದದ ಅಡಿಯಲ್ಲಿ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್‌ನ ಶೇಕಡಾ 100ರಷ್ಟು ಷೇರುಗಳನ್ನು ವಿವಿಧ ಪ್ರಮುಖ ಸಂಸ್ಥೆಗಳನ್ನೊಳಗೊಂಡ ಒಕ್ಕೂಟ ಸ್ವಾಧೀನಪಡಿಸಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (ಟೈಮ್ಸ್ ಇಂಟರ್ನೆಟ್ / ಟೈಮ್ಸ್ ಕ್ರಿಕೆಟ್), ಬೋಲ್ಟ್ ವೆಂಚರ್ಸ್, ಜಾಗತಿಕ ಹೂಡಿಕೆ ಸಂಸ್ಥೆಯಾದ ಬ್ಲ್ಯಾಕ್‌ಸ್ಟೋನ್ ಸೇರಿದಂತೆ ಬಿಗ್ ಬನ್ಯನ್ ಹೋಲ್ಡಿಂಗ್ಸ್, ಐಸಿಕ್ಯೂ ಆಪರ್ಚುನಿಟೀಸ್ ಮತ್ತು ಏಷ್ಯಾ ಇನ್ವೆಸ್ಟ್‌ಮೆಂಟ್ ಟಾಪ್‌ಕೋ II ಕಂಪನಿಗಳು ಸಹ ಸೇರಿವೆ.

ಆರ್‌ಸಿಬಿಗೆ ಹೊಸ ನಾಯಕತ್ವ: ಮಾಲೀಕತ್ವ ಬದಲಾವಣೆಯ ಬೆನ್ನಲ್ಲೇ ಆರ್‌ಸಿಬಿ ತಂಡದ ಆಡಳಿತ ಮಂಡಳಿಯಲ್ಲೂ ಹೊಸ ಬದಲಾವಣೆಗಳಾಗಲಿವೆ. ಮಾಜಿ ವೃತ್ತಿಪರ ಕ್ರಿಕೆಟಿಗ ಹಾಗೂ ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕರೂ ಆಗಿರುವ ಆರ್ಯಮನ್ ವಿಕ್ರಮ್ ಬಿರ್ಲಾ RCB ಫ್ರಾಂಚೈಸಿಯ ನೂತನ ಚೇರ್ಮನ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಟೈಮ್ಸ್ ಇಂಟರ್ನೆಟ್‌ನ ಸತ್ಯನ್ ಗಜ್ವಾನಿ, ವೈಸ್ ಚೇರ್ಮನ್ (Vice Chairman) ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹೊಸ ನಾಯಕತ್ವವು ಕ್ರಿಕೆಟ್ ಪ್ರೇಮಿಗಳು ಹಾಗೂ ಆರ್‌ಸಿಬಿ (RCB) ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

The post RCBಗೆ ಹೊಸ ಬಾಸ್: ಐಪಿಎಲ್ ಇತಿಹಾಸದಲ್ಲೇ ಮಹಾ ತಿರುವು; ₹16,660 ಕೋಟಿಗೆ ಬಿಗ್ ಡೀಲ್! ಇಲ್ಲಿದೇ ಡಿಟೇಲ್ಸ್ appeared first on Samyukta Karnataka.

ಚಾಂಪಿಯನ್ RCBಗೆ ವಿರಾಟ್ ವಿಶೇಷ ನಮನ: ವೈರಲ್ ಆದ ಪೋಸ್ಟ್
‘ಈ ಸ್ಥಳವೇ ನನ್ನ ಮನೆ’ : RCB ಪ್ರಶಸ್ತಿ ಗೆಲುವಿನ ಬಳಿಕ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್ ಕೊಹ್ಲಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2026ರ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಕೆಲವೇ ದಿನಗಳ ಬಳಿಕ ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ತಂಡದ ಯಶಸ್ವಿ ಪಯಣ, ಆಟಗಾರರ ನಡುವಿನ ಬಾಂಧವ್ಯ ಹಾಗೂ ಅಭಿಮಾನಿಗಳ ಬೆಂಬಲವನ್ನು ಸ್ಮರಿಸಿಕೊಂಡಿರುವ ಕೊಹ್ಲಿಯ ಪೋಸ್ಟ್ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಇಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಕೊಹ್ಲಿ, “ನಾವು ಈ ಋತುವನ್ನು ನಂಬಿಕೆಯೊಂದಿಗೆ ಆರಂಭಿಸಿದ್ದೆವು. ಸತತ ಪ್ರಶಸ್ತಿಗಳೊಂದಿಗೆ ಅದನ್ನು ಮುಗಿಸಿದ್ದೇವೆ. ಈ ತಂಡ ಪ್ರತಿಯೊಂದು ಭಾವನೆಯನ್ನೂ ಒಟ್ಟಿಗೆ ಅನುಭವಿಸಿದೆ. ಗೆಲುವು, ಒತ್ತಡ, ಅಡೆತಡೆಗಳು ಹಾಗೂ ಅಚಲ ಬೆಂಬಲದ ನಡುವೆ ಸಾಗಿದ ಈ ಪಯಣ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ಇದು ನನ್ನ ಮನೆ” ಎಂದು ಬರೆದುಕೊಂಡಿದ್ದಾರೆ.

ಸತತ ಎರಡನೇ ಬಾರಿ ಚಾಂಪಿಯನ್ ಆದ RCB : ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) , ಗುಜರಾತ್ ಟೈಟಾನ್ಸ್ (GT) ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದಿತ್ತು. ಈ ಮೂಲಕ RCB ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದ ಸಾಧನೆ ಮಾಡಿತು.

Started the season with belief. Ended with back to back titles. 🏆
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets pic.twitter.com/H02HdsHCX3
— Virat Kohli (@imVkohli) June 9, 2026

ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ಬಳಿಕ ಐಪಿಎಲ್ ಇತಿಹಾಸದಲ್ಲಿ ಪ್ರಶಸ್ತಿಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಫೈನಲ್‌ನಲ್ಲಿ ಕೊಹ್ಲಿಯ ಮಿಂಚಿನ ಆಟ : ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವನ್ನು RCB ಬೌಲರ್‌ಗಳು 20 ಓವರ್‌ಗಳಲ್ಲಿ 155/8ಕ್ಕೆ ನಿಯಂತ್ರಿಸಿದರು. ಗುಜರಾತ್ ಪರ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕ ದಾಖಲಿಸಿದರೂ, ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.

RCB ಪರ ರಸಿಕ್ ದಾರ್ ಸಲಾಮ್ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಜಲ್‌ವುಡ್ ತಲಾ ಎರಡು ವಿಕೆಟ್ ಪಡೆದು ಪ್ರಮುಖ ಕೊಡುಗೆ ನೀಡಿದರು. 156 ರನ್‌ಗಳ ಗುರಿ ಬೆನ್ನಟ್ಟಿದ RCBಗೆ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 62 ರನ್‌ಗಳ ಜೊತೆಯಾಟ ನಿರ್ಮಿಸಿದ ಈ ಜೋಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿತು.

ನಂತರ ಗುಜರಾತ್ ಟೈಟಾನ್ಸ್ ಕೆಲವು ವಿಕೆಟ್‌ಗಳನ್ನು ಕಬಳಿಸಿ ಪಂದ್ಯದಲ್ಲಿ ಹೋರಾಟ ತೋರಿದರೂ, ಕೊಹ್ಲಿ 42 ಎಸೆತಗಳಲ್ಲಿ 75 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು. ಅಂತಿಮವಾಗಿ RCB ಐದು ವಿಕೆಟ್‌ಗಳ ಜಯ ಸಾಧಿಸಿ ಮತ್ತೊಂದು ಐತಿಹಾಸಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮತ್ತೊಂದು ಅದ್ಭುತ ಋತು : ಐಪಿಎಲ್ 2026ರ ಅವಧಿಯಲ್ಲಿ ಕೊಹ್ಲಿ ಮತ್ತೊಮ್ಮೆ ಸ್ಥಿರ ಪ್ರದರ್ಶನ ತೋರಿದರು. 16 ಇನ್ನಿಂಗ್ಸ್‌ಗಳಲ್ಲಿ 675 ರನ್ ಗಳಿಸಿದ ಅವರು ಟೂರ್ನಿಯ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಋತುವನ್ನು ಮುಗಿಸಿದರು. 56.25ರ ಸರಾಸರಿ ಹಾಗೂ 165.84ರ ಸ್ಟ್ರೈಕ್‌ರೇಟ್‌ನೊಂದಿಗೆ ಬ್ಯಾಟ್ ಬೀಸಿದ ಕೊಹ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳನ್ನು ದಾಖಲಿಸಿ RCB ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ : ಕೊಹ್ಲಿಯ ಭಾವನಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. RCB ಅಭಿಮಾನಿಗಳು ತಂಡದ ಯಶಸ್ಸಿನ ಹಿಂದಿನ ಅವರ ಬದ್ಧತೆ, ನಾಯಕತ್ವ ಹಾಗೂ ತಂಡದ ಮೇಲಿನ ಪ್ರೀತಿಯನ್ನು ಶ್ಲಾಘಿಸುತ್ತಿದ್ದಾರೆ.

RCB ಮತ್ತು ಕೊಹ್ಲಿಯ ನಡುವಿನ ಬಾಂಧವ್ಯ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದು, “ಈ ಸ್ಥಳವೇ ನನ್ನ ಮನೆ” ಎಂಬ ಅವರ ಮಾತುಗಳು ಅಭಿಮಾನಿಗಳಲ್ಲಿ ವಿಶೇಷ ಭಾವನಾತ್ಮಕ ಸ್ಪಂದನೆ ಮೂಡಿಸಿವೆ.

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಾಬಲ್ಯ: 102 ಚಿನ್ನ ಸೇರಿ 114 ಪದಕಗಳ ಸಾಧನೆ

The post ಚಾಂಪಿಯನ್ RCBಗೆ ವಿರಾಟ್ ವಿಶೇಷ ನಮನ: ವೈರಲ್ ಆದ ಪೋಸ್ಟ್ appeared first on Samyukta Karnataka.

ಟೀಮ್ ಇಂಡಿಯಾಗೆ ಭಾರಿ ಹಿನ್ನಡೆ; ಇಬ್ಬರು ಸ್ಟಾರ್ ಆಟಗಾರರ ಫಿಟ್‌ನೆಸ್ ಟೆನ್ಷನ್! ಕೊಹ್ಲಿ ಔಟ್.. ರೋಹಿತ್ ಆಡೋದು ಡೌಟ್?
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ, ಅದರಲ್ಲೂ ವಿಶೇಷವಾಗಿ ರನ್ ಮಷೀನ್ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಈಗ ಒಂದು ಬ್ಯಾಡ್ ನ್ಯೂಸ್ ಸಿಕ್ಕಿದೆ. ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊರಬಿದ್ದಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಫೈನಲ್ ಪಂದ್ಯದ ಕೊನೆಯ ಹಂತದಲ್ಲಿ, ಗುಜರಾತ್ ಟೈಟನ್ಸ್ ವಿರುದ್ಧ ರನ್ ಗಳಿಸುವಾಗ ಕೊಹ್ಲಿ ಹ್ಯಾಮ್‌ಸ್ಟ್ರಿಂಗ್ (Hamstring) ಗಾಯಕ್ಕೆ ತುತ್ತಾಗಿದ್ದರು. ಗಾಯದ ನಡುವೆಯೂ ಅದ್ಭುತವಾಗಿ ಆಡಿದ್ದ ಕೊಹ್ಲಿ, 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದರೆ ಈಗ ಅದೇ ಗಾಯದ ಸಮಸ್ಯೆಯಿಂದಾಗಿ ಅವರು ಮುಂಬರುವ ಹೋಮ್ ಸೀರೀಸ್‌ನಿಂದ ದೂರ ಉಳಿಯಬೇಕಾಗಿ ಬಂದಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.

ಇನ್ನು ಜೂನ್ 13 ರಿಂದ ಆರಂಭವಾಗಲಿರುವ ಈ ಮೂರು ಪಂದ್ಯಗಳ ಏಕದಿನ ಸರಣಿಗೆ ಮತ್ತೊಂದು ಆತಂಕವೂ ಎದುರಾಗಿದೆ. ಮಾಜಿ ನಾಯಕ ಹಾಗೂ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆಯಾದರೂ, ಅವರ ಆಟವೂ ಕೂಡ ಫಿಟ್‌ನೆಸ್ ಮೇಲೆ ಅವಲಂಬಿತವಾಗಿದೆ. ಹಾಗಾಗಿ ರೋಹಿತ್ ಶರ್ಮಾ ಈ ಸರಣಿಯಲ್ಲಿ ಆಡುವುದು ಇನ್ನು ಅನುಮಾನವಾಗಿಯೇ ಉಳಿದಿದೆ. ನ್ಯೂ ಚಂಡೀಗಢದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದ ಮುಕ್ತಾಯದ ನಂತರ ಈ ಒಡಿಐ ಸರಣಿ ಆರಂಭವಾಗಲಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದರು. ಆರ್ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದ ಕೊಹ್ಲಿ, 16 ಇನ್ನಿಂಗ್ಸ್‌ಗಳಲ್ಲಿ 56.25 ರ ಸರಾಸರಿಯಲ್ಲಿ ಒಂದು ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 675 ರನ್ ಚಚ್ಚಿದ್ದರು. ಸದ್ಯ 37 ವರ್ಷದ ಈ ದಿಗ್ಗಜ ಆಟಗಾರ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದು, ಕೇವಲ ಏಕದಿನ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದ್ದಾರೆ. ಒಡಿಐ ಇತಿಹಾಸದಲ್ಲೇ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವ ಕೊಹ್ಲಿ, 299 ಇನ್ನಿಂಗ್ಸ್‌ಗಳಲ್ಲಿ 58.71 ರ ಸರಾಸರಿಯಲ್ಲಿ ಬರೋಬ್ಬರಿ 14,797 ರನ್ ಬಾರಿಸಿದ್ದಾರೆ. ಇದರಲ್ಲಿ ವಿಶ್ವದಾಖಲೆಯ 54 ಶತಕಗಳು ಹಾಗೂ 77 ಅರ್ಧಶತಕಗಳು ಸೇರಿವೆ.

ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಕೊಹ್ಲಿ ಕೇವಲ ಏಕದಿನ ಮಾದರಿಯನ್ನಷ್ಟೇ ಆಡುತ್ತಿದ್ದು, ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿಯೂ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ 240 ರನ್ ಗಳಿಸಿ ಭಾರತದ ಟಾಪ್ ಸ್ಕೋರರ್ ಎನಿಸಿಕೊಂಡಿದ್ದರು. ಇಂತಹ ಭೀಕರ ಫಾರ್ಮ್‌ನಲ್ಲಿರುವ ಕಿಂಗ್ ಕೊಹ್ಲಿ ಗಾಯದ ಕಾರಣದಿಂದ ಅಫ್ಘಾನಿಸ್ತಾನ ಸರಣಿಯಿಂದ ಹೊರಬಿದ್ದಿರುವುದು ಟೀಮ್ ಇಂಡಿಯಾಗೆ ಖಂಡಿತಾ ದೊಡ್ಡ ಹಿನ್ನಡೆಯಾಗಿದೆ. ಕೊಹ್ಲಿ ಆದಷ್ಟು ಬೇಗ ಗುಣಮುಖರಾಗಿ ಮೈದಾನಕ್ಕೆ ಮರಳಲಿ ಎಂಬುದೇ ಸದ್ಯ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

The post ಟೀಮ್ ಇಂಡಿಯಾಗೆ ಭಾರಿ ಹಿನ್ನಡೆ; ಇಬ್ಬರು ಸ್ಟಾರ್ ಆಟಗಾರರ ಫಿಟ್‌ನೆಸ್ ಟೆನ್ಷನ್! ಕೊಹ್ಲಿ ಔಟ್.. ರೋಹಿತ್ ಆಡೋದು ಡೌಟ್? appeared first on Samyukta Karnataka.

ಅಫ್ಘಾನಿಸ್ತಾನ ಸರಣಿಯಿಂದ ವಿರಾಟ್ ಹೊರಗುಳಿಯುವ ಸಾಧ್ಯತೆ!
IPLನಲ್ಲಿ ಮಿಂಚಿದ ಕೊಹ್ಲಿಗೆ ಗಾಯದ ಪರಿಣಾಮ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆ

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗುವ ಸಾಧ್ಯತೆ ಕಂಡುಬಂದಿದೆ. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸ್ನಾಯು ಸೆಳೆತ (ಹ್ಯಾಮ್‌ಸ್ಟ್ರಿಂಗ್) ಸಮಸ್ಯೆಯಿಂದ ಬಳಲುತ್ತಿದ್ದು, ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಜೂನ್ 13ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇತ್ತು. ಆದರೆ ಐಪಿಎಲ್ 2026 ಫೈನಲ್ ಪಂದ್ಯದಲ್ಲಿ ಗಾಯದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅವರ ಫಿಟ್ನೆಸ್ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೊಹ್ಲಿ, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 42 ಎಸೆತಗಳಲ್ಲಿ ಅಜೇಯ 75 ರನ್ ಸಿಡಿಸಿ ತಂಡವನ್ನು ಐದು ವಿಕೆಟ್‌ಗಳ ಭರ್ಜರಿ ಗೆಲುವಿನತ್ತ ಮುನ್ನಡೆಸಿದ್ದರು. ಆದರೆ ಪಂದ್ಯ ಅಂತಿಮ ಹಂತದಲ್ಲಿ ಓಡುವಾಗ ಅವರಿಗೆ ತೊಂದರೆ ಕಾಣಿಸಿಕೊಂಡಿತ್ತು. ಫಿಸಿಯೋ ಕೂಡ ಮೈದಾನಕ್ಕಿಳಿದು ಚಿಕಿತ್ಸೆ ನೀಡಿದ್ದರು.

IPLನಲ್ಲಿ ಅದ್ಭುತ ಫಾರ್ಮ್: ಐಪಿಎಲ್ 2026ರಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಲ್ಲಿ 675 ರನ್ ಗಳಿಸಿದ್ದ ಅವರು 56.25ರ ಸರಾಸರಿ ಮತ್ತು 165.85ರ ಸ್ಟ್ರೈಕ್‌ರೇಟ್ ದಾಖಲಿಸಿದ್ದರು. ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಅವರ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಭರ್ಜರಿ ದಾಖಲೆ : ಟೆಸ್ಟ್ ಹಾಗೂ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕೊಹ್ಲಿ ಇದೀಗ ಏಕದಿನ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. 2025ರಲ್ಲಿ ಅವರು 13 ಏಕದಿನ ಪಂದ್ಯಗಳಲ್ಲಿ 651 ರನ್ ಗಳಿಸಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಇದರಲ್ಲಿ ಮೂರು ಶತಕ ಹಾಗೂ ನಾಲ್ಕು ಅರ್ಧಶತಕಗಳು ಸೇರಿದ್ದವು.

2026ರಲ್ಲೂ ಅವರು ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 240 ರನ್ ಗಳಿಸಿದ್ದರು. ಹೀಗಾಗಿ 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತಕ್ಕೆ ಅವರ ಅನುಭವ ಅತ್ಯಂತ ಮಹತ್ವದ್ದಾಗಿದೆ.

BCCI ಅಧಿಕೃತ ಘೋಷಣೆ ನಿರೀಕ್ಷೆ: ಕೊಹ್ಲಿ ಗಾಯದ ತೀವ್ರತೆ ಎಷ್ಟಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈದ್ಯಕೀಯ ಪರೀಕ್ಷೆಗಳ ವರದಿ ಬಳಿಕವೇ ಅವರು ಎಷ್ಟು ದಿನ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂಬುದು ತಿಳಿಯಲಿದೆ. ಬಿಸಿಸಿಐ ಇನ್ನೂ ಯಾವುದೇ ಬದಲಿ ಆಟಗಾರನ ಹೆಸರನ್ನು ಘೋಷಿಸಿಲ್ಲ.

ಇದೇ ವೇಳೆ, ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ಪ್ರವಾಸಕ್ಕೂ ಅವರ ಲಭ್ಯತೆ ಕುರಿತು ಪ್ರಶ್ನೆಗಳು ಮೂಡಿವೆ. ಆಯ್ಕೆ ಸಮಿತಿಯು ವೈದ್ಯಕೀಯ ವರದಿ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನ ಸರಣಿಗೆ ಭಾರತ ತಂಡ: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಶುಭಮನ್ ಗಿಲ್ ನಾಯಕತ್ವ ವಹಿಸಿದ್ದು, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಆಯ್ಕೆ ಫಿಟ್ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿದೆ. ವಿರಾಟ್ ಕೊಹ್ಲಿ ಕೂಡ ಮೂಲ ತಂಡದಲ್ಲಿ ಸ್ಥಾನ ಪಡೆದಿದ್ದರು.

ಕೊಹ್ಲಿ ಗಾಯದ ಕಾರಣ ಸರಣಿಯಿಂದ ಹೊರಗುಳಿದರೆ, ಭಾರತದ ಮಧ್ಯಮ ಕ್ರಮಾಂಕದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದ್ದು, ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆಯೂ ಇದೆ.

ಬಾಂಬ್ ಸ್ಫೋಟ ಪ್ರಕರಣ: ಮಾಜಿ ಶಾಸಕನ ನಿವಾಸದ ಮೇಲೆ NIA ದಾಳಿ

The post ಅಫ್ಘಾನಿಸ್ತಾನ ಸರಣಿಯಿಂದ ವಿರಾಟ್ ಹೊರಗುಳಿಯುವ ಸಾಧ್ಯತೆ! appeared first on Samyukta Karnataka.

‘ವೈಫಲ್ಯಗಳೇ ಯಶಸ್ಸಿಗೆ ಮೆಟ್ಟಿಲು’: ಶತಕದ ಸಾಧನೆಯ ಬಳಿಕ ಮನದ ಮಾತು ಹಂಚಿಕೊಂಡ ಕಿಂಗ್ ಕೊಹ್ಲಿ
ರಾಯಪುರ: IPL 2026 RCB vs KKR ಪಂದ್ಯ ಅಭಿಮಾನಿಗಳಿಗೆ ಬಂಪರ್‌ ಸುದ್ದಿ ನೀಡಿದೆ. ಸತತ ಎರಡು ಪಂದ್ಯಗಳ ವೈಫಲ್ಯ ಅನುಭವಿಸಿದ ನಂತರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಅಬ್ಬರದ ಶತಕ ಸಿಡಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರಸ್ತಂಭ ವಿರಾಟ್ ಕೊಹ್ಲಿ, ಪಂದ್ಯದ ನಂತರ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಜೀವನದಲ್ಲಿ ಯಶಸ್ಸಿನಷ್ಟೇ ವೈಫಲ್ಯಗಳು ಕೂಡ ಮುಖ್ಯ,” ಎಂದು ಹೇಳುವ ಮೂಲಕ ತಮ್ಮ ಲಯಕ್ಕೆ ಮರಳಿದ ಹಾದಿಯನ್ನು ವಿವರಿಸಿದ್ದಾರೆ.

ಕಳೆದ ಪಂದ್ಯಗಳಲ್ಲಿ ಲಖನೌ ಮತ್ತು ಮುಂಬೈ ವಿರುದ್ಧ ಸತತವಾಗಿ ಶೂನ್ಯಕ್ಕೆ ಔಟ್ ಆಗಿದ್ದ ಕೊಹ್ಲಿ, ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಕುರಿತು ಮಾತನಾಡಿದ ಕಿಂಗ್, “ನಾನು ಸದಾ ಆಟವನ್ನು ಸರಳವಾಗಿ ಇಟ್ಟುಕೊಳ್ಳಲು ಬಯಸುತ್ತೇನೆ. ಕಳೆದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡುವ ಆತ್ಮವಿಶ್ವಾಸವಿದ್ದರೂ, ಸತತ ವೈಫಲ್ಯಗಳು ಸಹಜವಾಗಿಯೇ ಒತ್ತಡಕ್ಕೆ ಕಾರಣವಾಗಿದ್ದವು. ತಂಡಕ್ಕಾಗಿ ಕೊಡುಗೆ ನೀಡಲು ಸಾಧ್ಯವಾಗದಿದ್ದಾಗ ಆತಂಕವಾಗುವುದು ಸಹಜ. ಆದ್ರೆ ಅಂತಹ ಕಠಿಣ ಸಮಯವೇ ಒಬ್ಬ ಆಟಗಾರನಾಗಿ ಮತ್ತೆ ʻಪುಟಿದೇಳಲು ಪ್ರೇರಣೆʼ ನೀಡುತ್ತದೆ,” ಎಂದು ಹೇಳಿಕೊಂಡರು.

ದಾಖಲೆಯ 9ನೇ ಶತಕದ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, “ಶತಕ ಗಳಿಸುವುದು ಸಂತೋಷ ನೀಡಿದರೂ, ತಂಡಕ್ಕೆ ಸಿಕ್ಕ ಎರಡು ಅಂಕಗಳು ನನಗೆ ಹೆಚ್ಚು ಮುಖ್ಯವೆನಿಸಿವೆ. ಸಂಭ್ರಮಾಚರಣೆಗಿಂತ ತಂಡದ ಜಯದಲ್ಲಿ ನನ್ನ ಪಾತ್ರವಿರುವುದು ತೃಪ್ತಿ ತಂದಿದೆ. ಅತ್ಯುನ್ನತ ಮಟ್ಟದ ಕ್ರಿಕೆಟ್‌ನಲ್ಲಿ ಸವಾಲುಗಳು ಎದುರಾದಾಗ ಅವುಗಳನ್ನು ಎದುರಿಸಲು ನಾನು ಸದಾ ಸಿದ್ಧನಿರುತ್ತೇನೆ,” ಎಂದರು.

ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಭದ್ರ ಸ್ಥಾನ ಪಡೆದಿದ್ದು, ಕೊಹ್ಲಿ ಈ ಸಮಯೋಚಿತ ಪ್ರದರ್ಶನವು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ವೈಫಲ್ಯಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಸಾಧನೆ ಮಾಡಿದ ಕೊಹ್ಲಿ ಗುಣ ಇಂದಿನ ಯುವ ಆಟಗಾರರಿಗೆ ಮಾದರಿಯಾಗಿದೆ.

The post ‘ವೈಫಲ್ಯಗಳೇ ಯಶಸ್ಸಿಗೆ ಮೆಟ್ಟಿಲು’: ಶತಕದ ಸಾಧನೆಯ ಬಳಿಕ ಮನದ ಮಾತು ಹಂಚಿಕೊಂಡ ಕಿಂಗ್ ಕೊಹ್ಲಿ appeared first on Samyukta Karnataka.

ಕಿಂಗ್ ಕೊಹ್ಲಿ ಸಾಧನೆಗೆ ಮತ್ತೊಂದು ಕಿರೀಟ; ಭಾರತದಲ್ಲಿ ಈ ರೆಕಾರ್ಡ್ ಮಾಡಿದ ಮೊದಲ ಆಟಗಾರ ವಿರಾಟ್!
ಐಪಿಎಲ್ 2026ರಲ್ಲಿ ವಿರಾಟ್ ಕೊಹ್ಲಿ ಅಬ್ಬರ ಜೋರಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊಸ ಇತಿಹಾಸವೊಂದನ್ನು ಬರೆದಿದ್ದಾರೆ. ಭಾರತದ ನೆಲದಲ್ಲಿ 8,000 ಐಪಿಎಲ್ ರನ್ ಪೂರೈಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಕೊಹ್ಲಿ ತಲುಪಿದ್ದಾರೆ.

ಪಂದ್ಯದ ಆರಂಭದಲ್ಲಿ ಕೊಹ್ಲಿ ಅಕ್ಷರಶಃ ಅಬ್ಬರಿಸಿದರು. ಕಗಿಸೊ ರಬಾಡ ಅವರ ಒಂದೇ ಓವರ್‌ನಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಈ ಸಾಧನೆಯೊಂದಿಗೆ ಆರ್‌ಸಿಬಿ ಪರ ಒಂದೇ ಓವರ್‌ನಲ್ಲಿ ಐದು ಬೌಂಡರಿಗಳನ್ನು ಬಾರಿಸಿದ ಕ್ರಿಸ್ ಗೇಲ್ ಮತ್ತು ಶೇನ್ ವಾಟ್ಸನ್ ಅವರ ವಿಶೇಷ ಪಟ್ಟಿಗೆ ಇದೀಗ ವಿರಾಟ್ ಕೊಹ್ಲಿ ಕೂಡ ಸೇರ್ಪಡೆಯಾಗಿದ್ದಾರೆ. ಕೇವಲ 13 ಎಸೆತಗಳಲ್ಲಿ 28 ರನ್ ಸಿಡಿಸಿ ಕೊಹ್ಲಿ ಔಟಾದರಾದರೂ, ಅವರ ಆಟ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು.

ಆದರೆ, ಈ ಪಂದ್ಯ ಆರ್‌ಸಿಬಿ ಪಾಲಿಗೆ ಅಷ್ಟೇನೂ ಸಿಹಿಯಾಗಿರಲಿಲ್ಲ. ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತವಕದಲ್ಲಿದ್ದ ಆರ್‌ಸಿಬಿ ತಂಡವು, ಗುಜರಾತ್ ಟೈಟನ್ಸ್‌ನ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕ ಅಬ್ಬರದ ಹೊರತಾಗಿಯೂ, ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ಗಳು ಉರುಳಿದ ಪರಿಣಾಮ ಆರ್‌ಸಿಬಿ ಕೇವಲ 155 ರನ್‌ಗಳಿಗೆ ಆಲೌಟ್ ಆಯಿತು. ದೇವದತ್ ಪಡಿಕ್ಕಲ್ 40 ರನ್ ಗಳಿಸಿ ತಂಡಕ್ಕೆ ಆಧಾರವಾದರೆ, ರಶೀದ್ ಖಾನ್ ಅವರ ಮಾರಕ ಬೌಲಿಂಗ್ ಎದುರು ಆರ್‌ಸಿಬಿ ಬ್ಯಾಟರ್‌ಗಳು ಪರದಾಡಿದರು.

ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ತಂಡಕ್ಕೆ ಆರಂಭದಲ್ಲಿ ಭುವನೇಶ್ವರ್ ಕುಮಾರ್ ಕೆಲವು ಆಘಾತ ನೀಡಿದರು. ಆದರೆ, ಶುಭಮನ್ ಗಿಲ್ ಅವರ 43 ರನ್ ಮತ್ತು ಜೋಸ್ ಬಟ್ಲರ್ ಅವರ 39 ರನ್‌ಗಳ ನೆರವಿನಿಂದ ಗುಜರಾತ್ ಸುಸ್ಥಿತಿಗೆ ಬಂದಿತು. ಅಂತಿಮವಾಗಿ ರಾಹುಲ್ ತೆವಾಟಿಯ ಅವರ ಅಜೇಯ 27 ರನ್‌ಗಳ ಕೊಡುಗೆಯೊಂದಿಗೆ, ಗುಜರಾತ್ ಟೈಟನ್ಸ್ ತಂಡವು 25 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ಒಟ್ಟಿನಲ್ಲಿ, ವಿರಾಟ್ ಕೊಹ್ಲಿ ವೈಯಕ್ತಿಕವಾಗಿ ದಾಖಲೆಯ ದಿನವನ್ನಾಗಿ ಬದಲಾಯಿಸಿಕೊಂಡರೂ, ತಂಡದ ಮಟ್ಟಿಗೆ ಈ ಪಂದ್ಯ ನಿರಾಸೆಯನ್ನು ತಂದಿದೆ.

The post ಕಿಂಗ್ ಕೊಹ್ಲಿ ಸಾಧನೆಗೆ ಮತ್ತೊಂದು ಕಿರೀಟ; ಭಾರತದಲ್ಲಿ ಈ ರೆಕಾರ್ಡ್ ಮಾಡಿದ ಮೊದಲ ಆಟಗಾರ ವಿರಾಟ್! appeared first on Samyukta Karnataka.

ಜೇಸನ್ ಹೋಲ್ಡರ್ ಪಡೆದ ಕ್ಯಾಚ್ ವಿವಾದ; ಸ್ಪಷ್ಟವಾಗಿ ನೆಲಕ್ಕೆ ತಾಗಿದ ಬಾಲ್! ಆದರೂ ಔಟ್ ಕೊಟ್ಟಿದ್ದೇಕೆ?
ಐಪಿಎಲ್ 2026ರ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಮೈದಾನದಲ್ಲಿನ ಅದ್ಭುತ ಆಟಕ್ಕಿಂತ ಹೆಚ್ಚಾಗಿ ಒಂದು ವಿವಾದಾತ್ಮಕ ಕ್ಯಾಚ್‌ನಿಂದಾಗಿ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಂದ್ಯದ 8ನೇ ಓವರ್‌ನಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರು 19 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ನಡೆದ ಘಟನೆಯು ಆರ್‌ಸಿಬಿ ತಂಡದ ಪಾಲಿಗೆ ದೊಡ್ಡ ಆಘಾತವನ್ನು ನೀಡಿತು. ಅರ್ಷದ್ ಖಾನ್ ಅವರ ಬೌಲಿಂಗ್‌ನಲ್ಲಿ ಪಾಟಿದಾರ್ ಆಡಿದ ಶಾಟ್ ಅನ್ನು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜೇಸನ್ ಹೋಲ್ಡರ್ ಕ್ಯಾಚ್ ಹಿಡಿದರು. ಆದರೆ ಹೋಲ್ಡರ್ ಚೆಂಡನ್ನು ಹಿಡಿದು ನೆಲಕ್ಕೆ ಜಾರಿದಾಗ, ಚೆಂಡು ಹುಲ್ಲಿನ ಮೇಲೆ ಸ್ಪರ್ಶಿಸಿದೆಯೇ ಎಂಬ ಗಂಭೀರ ಅನುಮಾನ ಮೂಡಿತು.

ಈ ನಿರ್ಧಾರವನ್ನು ಕಂಡು ಆರ್‌ಸಿಬಿ ಡಗ್-ಔಟ್ ಸಂಪೂರ್ಣವಾಗಿ ಕೆರಳಿತು. ವಿರಾಟ್ ಕೊಹ್ಲಿ ಅವರು ಅಂಪೈರ್‌ಗಳ ಬಳಿ ಹೋಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆ, ಮುಖ್ಯ ತರಬೇತುದಾರ ಆಂಡಿ ಫ್ಲವರ್ ಕೂಡ ತಮ್ಮ ಅತೃಪ್ತಿಯನ್ನು ತೋರಿದರು. ಆಟಗಾರರ ದೃಷ್ಟಿಯಲ್ಲಿ ಚೆಂಡು ನೆಲವನ್ನು ತಗುಲಿದ್ದರೂ ಅಂಪೈರ್ ತಪ್ಪು ನಿರ್ಧಾರ ನೀಡಿದರು ಎಂಬುದು ಅವರ ವಾದವಾಗಿತ್ತು. ಆದರೆ ಮೂರನೇ ಅಂಪೈರ್ ದೃಶ್ಯಾವಳಿಗಳನ್ನು ಪರಿಶೀಲಿಸಿ ಪಾಟಿದಾರ್ ಅವರನ್ನು ಔಟ್ ಎಂದು ಘೋಷಿಸಿದರು.

ಈ ನಿರ್ಧಾರದ ವಿರುದ್ಧ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಎಂಸಿಸಿ ಕಾನೂನು 33.3 ಅನ್ನು ಉಲ್ಲೇಖಿಸಿ ಟೀಕಿಸಿದ್ದಾರೆ. ಫೀಲ್ಡರ್ ಚೆಂಡಿನ ಮೇಲೆ ಮತ್ತು ತನ್ನ ದೇಹದ ಚಲನೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದಾಗ ಮಾತ್ರ ಕ್ಯಾಚ್ ಪೂರ್ಣಗೊಳ್ಳುತ್ತದೆ ಎಂಬುದು ನಿಯಮ. ಹೋಲ್ಡರ್ ಜಾರಿಕೊಂಡು ಬಿದ್ದಾಗ ಅವರ ಮೇಲೆ ಸಂಪೂರ್ಣ ನಿಯಂತ್ರಣವಿರಲಿಲ್ಲ ಎಂದು ಚೋಪ್ರಾ ವಾದಿಸಿದ್ದಾರೆ. ಟೆಲಿವಿಷನ್ ರಿಪ್ಲೇಗಳಲ್ಲಿ ಚೆಂಡು ನೆಲವನ್ನು ಸ್ಪರ್ಶಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಅಂಪೈರ್ ಔಟ್ ನೀಡಿದ್ದು ಅಚ್ಚರಿಯ ವಿಷಯ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಈ ಅಂಪೈರಿಂಗ್ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಷ್ಟೊಂದು ತಂತ್ರಜ್ಞಾನ ಲಭ್ಯವಿರುವ ಕಾಲದಲ್ಲಿ ಇಂತಹ ತಪ್ಪು ನಿರ್ಧಾರಗಳು ಬರುವುದು ಸರಿಯಲ್ಲ ಮತ್ತು ಇದು ಆರ್‌ಸಿಬಿ ತಂಡದ ಲಯವನ್ನು ಸಂಪೂರ್ಣವಾಗಿ ಹಾಳುಮಾಡಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ವಿವಾದಾತ್ಮಕ ನಿರ್ಧಾರವು ಪಂದ್ಯದ ಗತಿಯನ್ನೇ ಬದಲಿಸಿ ಆರ್‌ಸಿಬಿ ಸೋಲಿಗೆ ಪರೋಕ್ಷ ಕಾರಣವಾಯಿತು ಎಂದರೆ ತಪ್ಪಾಗಲಾರದು. ತಂತ್ರಜ್ಞಾನದ ಯುಗದಲ್ಲಿ “ಕ್ಲೀನ್ ಕ್ಯಾಚ್” ವ್ಯಾಖ್ಯಾನದ ಬಗ್ಗೆ ಈ ಘಟನೆಯು ಮತ್ತೊಮ್ಮೆ ಕ್ರೀಡಾಭಿಮಾನಿಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

The post ಜೇಸನ್ ಹೋಲ್ಡರ್ ಪಡೆದ ಕ್ಯಾಚ್ ವಿವಾದ; ಸ್ಪಷ್ಟವಾಗಿ ನೆಲಕ್ಕೆ ತಾಗಿದ ಬಾಲ್! ಆದರೂ ಔಟ್ ಕೊಟ್ಟಿದ್ದೇಕೆ? appeared first on Samyukta Karnataka.

RCB ಇವತ್ತಿನ ಮ್ಯಾಚ್‌ ಗೆದ್ರೆ ಸಾಕು ಬರೋಬ್ಬರಿ 4 ಲಾಭ; ಪಾಯಿಂಟ್ಸ್ ಟೇಬಲ್‌ ಟಾಪರ್ ಜೊತೆಗೆ ಡಬಲ್ ಧಮಾಕಾ!
ಐಪಿಎಲ್ 2026 ರ ಇಂದು ನಡೆಯಲಿರುವ ಪಂದ್ಯದಲ್ಲಿ ಗುಜುರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಪಂದ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ಶುರುವಾಗಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಕದನ ನಡೆಯಲಿದ್ದು, ಶುಭಮನ್ ಗಿಲ್ ಪಡೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ರಜತ್ ಪಾಟೀದಾರ್ ನೇತೃತ್ವದ RCB ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ.

RCB ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿದೆ. ಕಳೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಜಲ್ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ್ದ ಡೆಲ್ಲಿ ಕೇವಲ 75 ರನ್ಗಳಿಗೆ ಆಲೌಟ್ ಆಗಿತ್ತು. ಆ ಪಂದ್ಯವನ್ನು 9 ವಿಕೆಟ್ಗಳಿಂದ ಗೆದ್ದಿದ್ದ RCB, 8 ಪಂದ್ಯಗಳಿಂದ 6 ಜಯ ಸಾಧಿಸಿ 2ನೇ ಸ್ಥಾನದಲ್ಲಿದೆ. ಇಂದು ಗೆದ್ದರೆ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ನಂಬರ್ 1ನೇ ಸ್ಥಾನಕ್ಕೇರಲಿದೆ. ಇಂದಿನ ಪಂದ್ಯದಲ್ಲಿ RCB ಟಾಸ್ ಗೆದ್ದರೆ ಪಂದ್ಯ ಗೆಲ್ಲುವ ನಿರೀಕ್ಷೆಯಿದೆ.

ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆಯುವ ಅಂಚಿನಲ್ಲಿದ್ದಾರೆ. ಅಮೋಘ ಫಾರ್ಮ್‌ನಲ್ಲಿರುವ ಕೊಹ್ಲಿ, ಈ ಪಂದ್ಯದಲ್ಲಿ ಶತಕ ಗಳಿಸಿದರೆ 14,000 ಟಿ20 ರನ್‌ಗಳನ್ನು ಪೂರೈಸಿ ಕ್ರಿಸ್ ಗೇಲ್ ದಾಖಲೆ ಮುರಿಯಲಿದ್ದಾರೆ. ಅಲ್ಲದೆ, ಟಿ20ಯಲ್ಲಿ 10 ಶತಕ ಗಳಿಸಿದ ಮೊದಲ ಭಾರತೀಯ ಮತ್ತು 450 ಸಿಕ್ಸರ್‌ಗಳನ್ನು ಪೂರೈಸುವ ಅವಕಾಶವಿದೆ. ಅಷ್ಟೇ ಅಲ್ಲ, ಕೊಹ್ಲಿ ಶತಕ ಬಾರಿಸಿದರೆ, ಗುಜರಾತ್ ವಿರುದ್ಧ 500 ರನ್​ಗಳನ್ನು ಸಹ ಪೂರೈಸಲಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್‌ನಲ್ಲಿ 10 ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ. ಈ ಇನ್ನಿಂಗ್ಸ್‌ನಲ್ಲಿ ಅವರು ಒಂದೇ ಒಂದು ಸಿಕ್ಸ್ ಬಾರಿಸಿದರೆ, ಈ ಸ್ವರೂಪದಲ್ಲಿ ಒಟ್ಟು 450 ಸಿಕ್ಸರ್​ಗಳನ್ನು ಪೂರೈಸಲಿದ್ದಾರೆ.

The post RCB ಇವತ್ತಿನ ಮ್ಯಾಚ್‌ ಗೆದ್ರೆ ಸಾಕು ಬರೋಬ್ಬರಿ 4 ಲಾಭ; ಪಾಯಿಂಟ್ಸ್ ಟೇಬಲ್‌ ಟಾಪರ್ ಜೊತೆಗೆ ಡಬಲ್ ಧಮಾಕಾ! appeared first on Samyukta Karnataka.

RCBಗೆ ಭರ್ಜರಿ ಗೆಲುವು; ಕೊಹ್ಲಿಗಾಗಿ ಅತ್ತು ಕರೆದ ಪುಟ್ಟ ಅಭಿಮಾನಿ! ಬ್ಯಾಟ್ ಎಸೆದು ಕಣ್ಣೀರಿಟ್ಟಿದ್ದೇಕೆ?
ಕ್ರಿಕೆಟ್ ಲೋಕದ ದಿಗ್ಗಜ ವಿರಾಟ್ ಕೊಹ್ಲಿ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಅದೇ ಪ್ರೀತಿ ಕೆಲವೊಮ್ಮೆ ನಿರಾಸೆಯ ಕಣ್ಣೀರಾಗಿ ಬದಲಾಗುತ್ತದೆ ಎಂಬುದಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತಮ್ಮ ನೆಚ್ಚಿನ ಆಟಗಾರನ ಆಟೋಗ್ರಾಫ್ ಪಡೆಯಲು ಅದೆಷ್ಟೋ ಕನಸು ಹೊತ್ತು ಬಂದಿದ್ದ ಪುಟ್ಟ ಅಭಿಮಾನಿಯೊಬ್ಬ ಕೊನೆಗೆ ನಿರಾಸೆಯಿಂದ ಕಣ್ಣೀರಿಡುತ್ತಾ ಮರಳಿದ ದೃಶ್ಯ ಈಗ ಎಲ್ಲರ ಮನ ಕಲಕುತ್ತಿದೆ.

ಆ ಮಗು ವಿರಾಟ್ ಕೊಹ್ಲಿಯ ಗಮನ ಸೆಳೆಯಲು ಹಲವು ಬಾರಿ ಪ್ರಯತ್ನಿಸಿತು, ಆದರೆ ಭದ್ರತಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಮಗುವನ್ನು ತಡೆದರು. ಕೊಹ್ಲಿಯ ಗಮನಕ್ಕೆ ಇದು ಬಾರದ ಕಾರಣ, ಅವರು ಅಲ್ಲಿಂದ ಮುಂದಕ್ಕೆ ಸಾಗಿದರು. ಇದರಿಂದ ತೀವ್ರ ಬೇಸರಗೊಂಡ ಆ ಪುಟ್ಟ ಬಾಲಕ, ತನ್ನ ಕೈಯಲ್ಲಿದ್ದ ಬ್ಯಾಟನ್ನು ನೆಲಕ್ಕೆ ಎಸೆದು ಜೋರಾಗಿ ಅಳುತ್ತಾ ಅಲ್ಲಿಂದ ಹೊರನಡೆದಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ದೆಹಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಕ್ಷರಶಃ ಅಬ್ಬರಿಸಿದೆ. ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡವನ್ನು ಕೇವಲ 75 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶಸ್ವಿಯಾದರು. ಜೋಶ್ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ದೆಹಲಿಯ ಅಗ್ರ ಕ್ರಮಾಂಕ ತತ್ತರಿಸಿ ಹೋಯಿತು. ಒಂದು ಹಂತದಲ್ಲಿ ದೆಹಲಿ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಸಾಹಿಲ್ ಪರಖ್, ಸಮೀರ್ ರಿಜ್ವಿ ಮತ್ತು ನಾಯಕ ಅಕ್ಷರ್ ಪಟೇಲ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಆಘಾತ ನೀಡಿದರು.

ಇದನ್ನು ಓದಿ: http://IPL 2026: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬೆಂಗಳೂರಿಗೆ ರಾಯಲ್‌ ಗೆಲುವು

ಈ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಜೇಕಬ್ ಬೆಥೆಲ್ ಬಿರುಸಿನ ಆರಂಭ ನೀಡಿದರು. ದೇವದತ್ ಪಡಿಕ್ಕಲ್ ಅಜೇಯ 34 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಟಿ. ನಟರಾಜನ್ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿ ಪಂದ್ಯವನ್ನು ಮುಗಿಸಿದರು. ಈ 9 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಆರ್‌ಸಿಬಿ ಈಗ 2026ರ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

ಸದ್ಯ ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ವಿರಾಟ್ ಕೊಹ್ಲಿ 8 ಇನ್ನಿಂಗ್ಸ್‌ಗಳಿಂದ 351 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಗೆಲುವಿನ ನಗೆ ಬೀರಿದ ಆರ್‌ಸಿಬಿ ತಂಡದ ಮುಂದಿನ ಪಂದ್ಯ ಮೇ 30 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿದೆ. ಆದರೂ, ತಂಡದ ಗೆಲುವಿಗಿಂತ ಆ ಪುಟ್ಟ ಅಭಿಮಾನಿಯ ಕಣ್ಣೀರು ಮತ್ತು ನಿರಾಸೆ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಉಳಿದುಹೋಗಿದೆ.

The post RCBಗೆ ಭರ್ಜರಿ ಗೆಲುವು; ಕೊಹ್ಲಿಗಾಗಿ ಅತ್ತು ಕರೆದ ಪುಟ್ಟ ಅಭಿಮಾನಿ! ಬ್ಯಾಟ್ ಎಸೆದು ಕಣ್ಣೀರಿಟ್ಟಿದ್ದೇಕೆ? appeared first on Samyukta Karnataka.

ತವರು ನೆಲದಲ್ಲಿ ವಿರಾಟ್ ವಿಶ್ವದಾಖಲೆ ಫಿಕ್ಸ್; 72 ರನ್ ಗಳಿಸಿದರೆ ಇತಿಹಾಸವೇ ಬದಲಾಗುತ್ತೆ! ಕಿಂಗ್ ಕೊಹ್ಲಿ ಅಬ್ಬರಕ್ಕೆ ದೆಹಲಿ ನಡುಗುತ್ತಾ?
ಐಪಿಎಲ್ ಇತಿಹಾಸದಲ್ಲಿ ‘ದಾಖಲೆ’ ಮತ್ತು ‘ವಿರಾಟ್ ಕೊಹ್ಲಿ’ ಎಂಬ ಪದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದೀಗ 2026ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಮತ್ತೊಂದು ಅಪ್ರತಿಮ ಮೈಲಿಗಲ್ಲಿನ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿರುವ 39ನೇ ಪಂದ್ಯ ಕೇವಲ ಎರಡು ತಂಡಗಳ ನಡುವಿನ ಹಣಾಹಣಿಯಷ್ಟೇ ಅಲ್ಲ, ಅದು ಕಿಂಗ್ ಕೊಹ್ಲಿಯ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಲಿರುವ ಕ್ಷಣವೂ ಹೌದು.

ಆರ್​​ಸಿಬಿ ತಂಡದ ಪಾಲಿಗೆ ಈ ಪಂದ್ಯ ಅತ್ಯಂತ ನಿರ್ಣಾಯಕ. ತಂಡದ ಪ್ರಮುಖ ಆಟಗಾರ ಫಿಲ್ ಸಾಲ್ಟ್ ಅಲಭ್ಯತೆಯಿಂದಾಗಿ ಬ್ಯಾಟಿಂಗ್ ವಿಭಾಗದಲ್ಲಿ ದೊಡ್ಡ ಶೂನ್ಯ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ತಂಡದ ಜೀವಾಳವಾಗಿರುವ ವಿರಾಟ್ ಕೊಹ್ಲಿ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಕೇವಲ ತಂಡದ ಗೆಲುವಿಗಾಗಿ ಮಾತ್ರವಲ್ಲದೆ, ವೈಯಕ್ತಿಕ ದಾಖಲೆಗಾಗಿಯೂ ಈ ಪಂದ್ಯ ಕೊಹ್ಲಿಗೆ ಮಹತ್ವದ್ದಾಗಿದೆ.

ವಿರಾಟ್ ಈ ಪಂದ್ಯದಲ್ಲಿ ಕೇವಲ 72 ರನ್ ಗಳಿಸಿದರೆ ಸಾಕು, ಐಪಿಎಲ್ ಇತಿಹಾಸದಲ್ಲಿ ಬರೋಬ್ಬರಿ 11 ಆವೃತ್ತಿಗಳಲ್ಲಿ 400ಕ್ಕೂ ಅಧಿಕ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈವರೆಗೆ ಸುರೇಶ್ ರೈನಾ, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಅವರಂತಹ ದಿಗ್ಗಜರು 9 ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದರೆ, ವಿರಾಟ್ ಈಗಾಗಲೇ 10 ಸೀಸನ್‌ಗಳಲ್ಲಿ 400ರ ಗಡಿ ದಾಟಿ ಅಗ್ರಸ್ಥಾನದಲ್ಲಿದ್ದಾರೆ. ಈಗ ತಮ್ಮದೇ ದಾಖಲೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಅವರು ಸಜ್ಜಾಗಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಕೊಹ್ಲಿಯ ತವರು ನೆಲ. ತನ್ನ ತವರು ಮೈದಾನದಲ್ಲೇ ಡೆಲ್ಲಿ ಬೌಲರ್‌ಗಳ ವಿರುದ್ಧ ಅಬ್ಬರಿಸಿ, ಈ 11ನೇ ಆವೃತ್ತಿಯ 400 ರನ್ ಗಡಿ ತಲುಪುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿಯೂ ಮುಂಚೂಣಿ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ ಕೊಹ್ಲಿ. ಆರ್​​ಸಿಬಿ ಅಭಿಮಾನಿಗಳ ಕಣ್ಣುಗಳು ಈಗ ಕಿಂಗ್ ಕೊಹ್ಲಿಯ ಬ್ಯಾಟ್ ಮೇಲಿದ್ದು, ಆ 72 ರನ್‌ಗಳ ಸುನಾಮಿ ದೆಹಲಿಯಲ್ಲಿ ಎದ್ದೇ ಏಳುತ್ತದೆ ಎಂಬ ಭರವಸೆ ಎಲ್ಲರಲ್ಲಿದೆ. ದಾಖಲೆಗಳ ಸರದಾರ ಮತ್ತೊಂದು ಶಿಖರ ಏರುತ್ತಾರಾ, ಕಾದು ನೋಡಬೇಕಿದೆ.

The post ತವರು ನೆಲದಲ್ಲಿ ವಿರಾಟ್ ವಿಶ್ವದಾಖಲೆ ಫಿಕ್ಸ್; 72 ರನ್ ಗಳಿಸಿದರೆ ಇತಿಹಾಸವೇ ಬದಲಾಗುತ್ತೆ! ಕಿಂಗ್ ಕೊಹ್ಲಿ ಅಬ್ಬರಕ್ಕೆ ದೆಹಲಿ ನಡುಗುತ್ತಾ? appeared first on Samyukta Karnataka.