ಅಬುದಾಬಿ: ಪಾಕಿಸ್ತಾನ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ್ ಗೆಲುವಿಗೆ ಕೇವಲ 134 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಾಕ್ ಆರಂಭದಲ್ಲಿಯೇ ಶ್ರೀಲಂಕಾ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು. ಇನ್ನಿಂಗ್ಸ್ ಆರಂಭದ ಎರಡನೇ ಎಸೆತದಲ್ಲಿಯೇ ಶಾಹೀನ್ ಅಫ್ರಿದಿ ಕುಶಾಲ್ ಮೆಂಡೀಸ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.
ಶಾಹೀನ್ ಅಫ್ರಿದಿ ತನ್ನ 2ನೇ ಓವರ್‌ನಲ್ಲೂ ಮತ್ತೋರ್ವ ಆರಂಭಿಕ ಆಟಗಾರ ಪಥುಮ್ ನಿಸ್ಸಾಂಕ ಅವರನ್ನು 8 ರನ್‌ಗಳಿಗೆ ಔಟ್ ಮಾಡಿದರು. ಈ ಮೂಲಕ 2.2 ಓವರ್‌ಗಳಲ್ಲಿ ಶ್ರೀಲಂಕಾ 18 ರನ್‌ಗಳಿಗೆ ಆರಂಭಿಕ ಇಬ್ಬರೂ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಬಳಿಕ ಕ್ರಿಸ್‌ಗೆ ಬಂದ ಕುಶಾಲ್ ಪೆರೆರಾ (15) ಮತ್ತು ನಾಯಕ ಅಸಲಂಕಾ (20) ಬಹುಬೇಗನೆ ಪೆವಿಲಿಯನ್ ಕಡೆಗೆ ನಡೆದರು. ಕಂಮಿಂಧು ಮೆಂಡೀಸ್ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಸಿಡಿಸಿದರು.
ಕಂಮಿಂಧು ಮೆಂಡೀಸ್ 44 ಎಸೆತಗಳಲ್ಲಿ ಮೂರು ಬೌಂಡರಿ, ಎರಡು ಸಿಕ್ಸರ್ ನೆರವಿನಿಂದ 50 ರನ್‌ಗಳಿಸಿ ತಂಡವನ್ನು ಉತ್ತಮ ಸ್ಥಿತಿಗೆ ತಂದರು. ಅಂತಿಮವಾಗಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಸಿ ಹೊರನಡೆದರು.
ನಿಗದಿತ 20 ಓವರ್‌ಗಳಲ್ಲಿ ಶ್ರೀಲಂಕಾ ತಂಡ 8 ವಿಕೆಟ್‌ಗಳನ್ನು ಕಳೆದುಕೊಂಡು 133 ರನ್‌ಗಳನ್ನು ಗಳಿಸಿತು. ಶ್ರೀಲಂಕಾ ಪರ ಕಂಮಿಂಧು ಮೆಂಡೀಸ್ 55, ಅಸಲಂಕಾ 20 ರನ್ ಗಳಿಸಿದರು. 134 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 5.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿತ್ತು.