ದುಬೈ: ಪಂದ್ಯಕ್ಕು ಮುನ್ನ ಭಾರತವನ್ನು ಸೋಲಿಸಲು ಸಂಕಲ್ಪಿಸಿದ್ದ ಪಾಕಿಸ್ತಾನಕ್ಕೆ ಏನೂ ಮಾಡಲಾಗದ ಪರಿಸ್ಥಿತಿ. ಲೀಗ್ ಹಂತದಲ್ಲಿ ದಕ್ಕದ ಗೆಲುವನ್ನು ಸೂಪರ್ 4ರಲ್ಲಿ ಆದರೂ ಪಡೆಯಬೇಕೆಂಬ ಆಸೆಗೆ ಬಿತ್ತು ಪಟ್ಟು 2 ಬಾರಿ ಜೀವದಾನ ಪಡೆದರೂ ಕೇವಲ 171 ರನ್‌ಗಳಿಸಲು ಪರದಾಡಿದ ಪಾಕಿಸ್ತಾನದ ಎದುರು ಭಾರತ ಗಳಿಸಿದ್ದು ಅಮೋಘ 6 ವಿಕೆಟ್‌ಗಳ ಜಯ. ಆದರೆ, ಭಾರತದ ಈ ನಾಲ್ಕು ವಿಕೆಟ್‌ಗಳನ್ನು ಪಡೆಯುವಲ್ಲೇ ಪಾಕ್ ಬೌಲರ್‌ಗಳು ಸುಸ್ತಾಗಿ ಹೋಗಿದ್ದರು.
ಹೌದು, ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ನೇರವಾಗಿ ಫೀಲ್ಡಿಂಗ್ ಆಯ್ದುಕೊಳ್ಳುವ ಮೂಲಕ ಮತ್ತೊಮ್ಮೆ ಚೇಸಿಂಗ್ ಮಾಡುವ ಮನಸ್ಸು ಮಾಡಿದರು. ಶೇಕ್ ಹ್ಯಾಂಡ್ ವಿಚಾರವನ್ನೇ ಅನ್ನೇ ಮನಸ್ಸಲ್ಲಿಟ್ಟುಕೊಂಡು ಬ್ಯಾಟ್ ಮಾಡಲು ಬಂದಿದ್ದ ಪಾಕ್ ಆರಂಭಿಕ ಜೋಡಿ ಶಹಿಬ್ಬಾದ ಫರ್ಹನ್ ಹಾಗೂ ಫಕರ್ ಜಮಾನ್‌ರ ಆರಂಭ ಉತ್ತಮವಾಗಿತ್ತಾದರೂ, 21 ರನ್‌ಗಳಿಗೆ ಈ ಜೋಡಿ ಬೇರ್ಪಟ್ಟಿತು.
ಮತ್ತೊಮ್ಮೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಫಕರ್ ಜಮಾನ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿ ಹೊರ ನಡೆಯುತ್ತಿದ್ದಂತೆ, ಪಾಕ್ ಅಭಿಮಾನಿಗಳಲ್ಲಿ ಉತ್ಸಾಹವೇ ಕಳೆದು ಹೋಯಿತು. ಫರ್ಹನ್ ಹಾಗೂ ಸಯಿಮ್ ಅಯೂಬ್ 72 ರನ್‌ಗಳ ಜೊತೆಯಾಟ, 2 ಕ್ಯಾಚ್ ಬಿಟ್ಟ ಬಳಿಕ ಅರ್ಧಶತಕ ಗಳಿಸಿದ ಫರ್ಹನ್, ಕೊನೆಯ ಎರಡು ಓವರ್‌ಗಳಲ್ಲಿ ಮಾಡಿದ ಹರಸಾಹಸ ಎಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಆರಂಭದಲ್ಲಿ ಆರ್ಭಟಿಸಿದ್ದ ಪಾಕ್ ಬ್ಯಾಟರ್ಸ್, ಮಧ್ಯಮ ಕ್ರಮಾಂಕಲ್ಲಿ ನಿಧಾನಗತಿ ರನ್‌ಗಳಿಸಿದ್ದೇ, ಪಾಕ್‌ಗೆ ಮುಳುವಾಗಿದೆ. ಸಲ್ಮಾನ್ ಅಘಾ 13 ಎಸೆತಗಳಲ್ಲಿ 17 ರನ್‌ಗಳಿಸಿ ಅಜೇಯರಾಗಿ ಉಳಿದುಕೊಂಡರೆ, ಅಶ್ರಫ್ 8 ಎಸೆತಗಳಲ್ಲಿ 20 ರನ್ ಬಾರಿಸಿದರು. ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅತ್ತಪ್ ತಂಡದ ಮೊತ್ತವನ್ನು 171ಕ್ಕೆ ಅಂತಿಮಗೊಳಿಸಿದ್ದರು.
ಪಾಕ್ ಆರಂಭದಿಂದಲೇ ಸೋಲಿನ ದರ್ಶನ: 171 ರನ್‌ಗಳನ್ನು ಪಾಕ್ ಉಳಿಸಿಕೊಳ್ಳಲಿದೆ ಎಂದು ಪಾಕ್ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಭಾರತದ ಆರಂಭಿಕ ಜೋಡಿ ಅಭಿಶೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಶತಕದ ಜೊತೆಯಾಟವಾಡಿದ ಬಳಿಕ ಪಾಕ್‌ಗೆ ಈ ಪಂದ್ಯದಲ್ಲೂ ಗೆಲುವಿಲ್ಲ ಎಂಬುದು ಪಾಕ್ ಅಭಿಮಾನಿಗಳಿಗೆ ಅರಿವಾಯಿತು.
47 ರನ್ ಗಳಿಸಿ ಗಿಲ್ ಮೊದಲಿಗರಾಗಿ ವಿಕೆಟ್ ಒಪ್ಪಿಸಿದರೆ, ನಾಯಕ ಸೂರ್ಯ ಶೂನ್ಯ ಸುತ್ತಿದರು. 74 ರನ್ ಗಳಿಸಿ ಅಭಿಷೇಕ್ ತಂಡದ ಗೆಲುವನ್ನು ಸುಲಭಗೊಳಿಸಿದರು. 4ನೇ ವಿಕೆಟ್‌ಗೆ ಜೊತೆಯಾದ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಟ್ಸನ್ ಅತ್ಯುತ್ತಮ ಆಟವಾಡಿ 18.5 ಓವರ್‌ಗಳಲ್ಲಿ 6 ವಿಕೆಟ್‌ಗಳ ಜಯ ತಂದಿಟ್ಟರು.
ಪಾಕ್ ಆಟಗಾರರ ಕಿರಿಕ್: ಸೋಲಿನ ಹತಾಶೆಯಲ್ಲಿದ್ದ ಪಾಕ್ ಆಟಗಾರ ಹ್ಯಾರಿಸ್ ರೌಫ್, ಶುಭಮನ್ ಗಿಲ್ ಜೊತೆ ಮಾತುಕತೆ ನಡೆಸುತ್ತಿದ್ದ ಅಭಿಶೇಕ್ ಶರ್ಮಾ ಅವರನ್ನು ಕೆಣಕಿದರು. ಇದಕ್ಕೆ ಅಭಿಶೇಕ್ ಕೂಡ ಎದೆಗುಂದಲಿಲ್ಲ. ಆದರೆ, ಅಂಪೈರ್ ಮಧ್ಯ’ ಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದರು. ಇದೇ ಪಂದ್ಯದಲ್ಲಿ ಪಾಕ್‌ನ ಪ್ರಮುಖ ವೇಗಿ ಶಾಹೀನ್ ಅಫ್ರಿದಿ ಕೂಡ ಶುಭಮನ್ ಗಿಲ್ ಅವರನ್ನು ಕೆಣಕುವ ಯತ್ನ ಮಾಡಿದರು. ಇಬ್ಬರ ನಡುವೆ ಕೆಲಕಾಲ ಬಿಸಿ ವಾತಾವರಣವೇ ಮೂಡಿತ್ತು.
ನೋ ಶೇಕ್ ಹ್ಯಾಂಡ್: ನಿನ್ನೆಯ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಟಾಸ್ ವೇಳೆಯಲ್ಲೇ ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಮತ್ತೊಮ್ಮೆ ಕೈಕುಲುಕಲು ನಿರಾಕರಿಸಿದರು. ಅಲ್ಲದೇ, ಯಾವ ಆಟಗಾರ ಕೂಡ ಎದುರಾಳಿ ತಂಡದ ಆಟಗಾರನೊಂದಿಗೆ ಹಸ್ತಲಾಘವ ಮಾಡಲು ಇಚ್ಚಿಸಲಿಲ್ಲ. ಆದರೆ, ಪಾಕಿಸ್ತಾನ ತೆಪ್ಪಗಾಯಿತು.
ಸಂಕ್ಷಿಪ್ತ ಸ್ಕೋರ್; ಪಾಕ್ 20 ಓವರ್‌ಗಳಲ್ಲಿ 171/5: ಶಹೀಬ್ಬಾದಾ ಫರ್ಹನ್ 58 (45), ಫಕರ್ ಜಮಾನ್ 15 (09), ಸಾಯುಂ ಅಯೂಬ್ 21 (17), ಹುಸೇನ್ ಟಾಲತ್ 10 (11), ಎಂ. ನವಾಜ್ 21 (19), ಸಲ್ಮಾನ್ ಅಘಾ 17 (13), ಫಹೀಮ್ ಅಶ್ರಫ್ 20 (08)
ಭಾರತ 18.5 ಓವರ್‌ನಲ್ಲಿ 174/4: ಅಭಿಶೇಕ್ ಶರ್ಮಾ 74 (39), ಶುಭಮನ್ ಗಿಲ್ 47 (28), ಸೂರ್ಯಕುಮಾರ್ 00 (03), ತಿಲಕ್ ವರ್ಮಾ 30 (19), ಸಂಜು ಸ್ಯಾಟ್ಸನ್ 13 (17), ಹಾರ್ದಿಕ್ ಪಾಂಡ್ಯ 07 (07)