ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡವು ತನ್ನ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿಯನ್ನು ಗೆದ್ದು ಇಡೀ ರಾಷ್ಟ್ರವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಭಾನುವಾರ ನವಿ ಮುಂಬೈನ ಡಾ. ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕೆಯನ್ನು 52 ರನ್‌ಗಳ ಅಂತರದಿಂದ ಮಣಿಸಿ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಶೀರ್ಷಿಕೆಯನ್ನು ಮುಡಿಗೇರಿಸಿಕೊಂಡಿತು.
ಪಂದ್ಯಾವಧಿಯಲ್ಲಿ ಮೈದಾನದಲ್ಲೇ ಹಾಜರಿದ್ದ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಎಂ. ಅಂಬಾನಿ ಹಾಗೂ ಆಕಾಶ್ ಅಂಬಾನಿ ಅವರು ಪಂದ್ಯಾವಳಿ ಬಳಿಕ ಭಾರತೀಯ ತಂಡವನ್ನು ಅಭಿನಂದಿಸಿದರು.
‘ಮಧ್ಯರಾತ್ರಿಯ ವೇಳೆಯಲ್ಲಿ ನಮ್ಮ ಹುಡುಗಿಯರು ಚೊಚ್ಚಲ ಐಸಿಸಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ನಿಮ್ಮ ಧೈರ್ಯ, ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಆಡಿದ ರೀತಿ ಇಡೀ ರಾಷ್ಟ್ರವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ನಾವೆಲ್ಲರೂ ನಿಮ್ಮ ಬಗ್ಗೆ ಅತ್ಯಂತ ಹೆಮ್ಮೆಪಡುತ್ತೇವೆ. ನಾನು ಧನ್ಯವಾದ ಹೇಳಿ, “ಜೈ ಹಿಂದ್” ಎಂದು ಹೇಳಲು ಬಯಸುತ್ತೇನೆ,’ ಎಂದು ನೀತಾ ಅಂಬಾನಿ ಹೇಳಿದರು.
ಈ ಗೆಲುವಿನೊಂದಿಗೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಭಾರತದ ಯುವ ಆಟಗಾರ್ತಿಯರು ಮತ್ತು ಕ್ರೀಡಾ ಅಭಿಮಾನಿಗಳಲ್ಲಿ ಹೊಸ ಪ್ರೇರಣೆ ಮೂಡಿಸಿರುವ ಈ ವಿಜಯವನ್ನು ಕ್ರೀಡಾಭಿಮಾನಿಗಳು “ಕನಸಿನ ಗೆಲುವು” ಎಂದು ಹೊಗಳುತ್ತಿದ್ದಾರೆ.
