ಅಹಮದಾಬಾದ್: ಮಹಾರಾಷ್ಟ್ರದ ಮನ್ಮಾಡ್‌ನ ಹದಿನೆಂಟು ವರ್ಷದ ಸಾಯಿರಾಜ್ ಪರ್ದೇಸಿ, 2025 ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಿರಿಯರ ಪುರುಷರ 88 ಕೇಜಿ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಗಮನ ಸೆಳೆದಿದ್ದಾರೆ.
ಒಟ್ಟು 348 ಕೆಜಿ (ಸ್ನ್ಯಾಚ್‌ನಲ್ಲಿ 157 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್ನಲ್ಲಿ 191 ಕೆಜಿ) ಎತ್ತುವ ಮೂಲಕ ಜೂನಿಯರ್ ಕಾಮನ್‌ವೆಲ್ತ್ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೊಂದು ಹಿರಿಯ ವಿಭಾಗದ ವಿಜೇತರ ಒಟ್ಟು ತೂಕವನ್ನು ಮೀರಿಸಿರುವ ದಾಖಲೆಯಾಗಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳಿಂದ ಪ್ರಶಂಸಿಸಲ್ಪಟ್ಟ ಸಾಯಿರಾಜ್ ಅವರ ಜಯದಿಂದ, ಈಗ ಈ ಯುವ ಪ್ರತಿಭೆ 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಭರವಸೆ ನೀಡಿದೆ. ಈ ವಿಜಯವು ರಾಷ್ಟ್ರವ್ಯಾಪಿ ಆಚರಣೆ ಮತ್ತು ಭಾರತದ ಮಹಾನಗರ ಕೇಂದ್ರಗಳನ್ನು ಮೀರಿ ಕ್ರೀಡಾ ಪ್ರತಿಭೆಯನ್ನು ಪೋಷಿಸುವಲ್ಲಿ ನವೀಕೃತ ವಿಶ್ವಾಸದ ನಡುವೆ ಬಂದಿದೆ.
ಯಾರು ಈ ಸಾಯಿರಾಜ್?: ಸಾಯಿರಾಜ್ ಪರದೇಸಿ ಮನ್ಮಾಡ್ ಎಂಬ ಸಣ್ಣ ಪಟ್ಟಣದ ಸ್ಕ್ರ‍್ಯಾಪ್ ವ್ಯಾಪಾರಿಯ ಮಗನಾಗಿದ್ದು, ಸಹೋದರರೊಂದಿಗೆ ವೇಟ್‌ಲಿಫ್ಟಿಂಗ್‌ನ ಮೇಲಿನ ಆಸಕ್ತಿ ಹೆಚ್ಚಾಗಿತ್ತು. ಅವರ ಅಕ್ಕ ಕ್ರೀಡೆಯಲ್ಲಿ ಮಾಡಿದ ಸಾಧನೆಗಳಿಂದ ಪ್ರೇರಿತರಾದ ಈ 18ರ ಯುವಕ, ತಮ್ಮ ಊರಿನಲ್ಲಿ ಲಭ್ಯವಿದ್ದ, ತಾತ್ಕಾಲಿಕ ಉಪಕರಣಗಳಲ್ಲಿ ಅಭ್ಯಾಸ ಮಾಡಿ, ಕಾಮನ್‌ವೆಲ್ತ್‌ಗೆ ಸಿದ್ಧರಾಗಿದ್ದರು. ಕೋಚ್ ಪ್ರವೀಣ್ ವ್ಯವಾಹರೆ ಅವರ ಮಾರ್ಗದರ್ಶನದಲ್ಲಿ ಪ್ರಗತಿ ಸಾಧಿಸಿದ್ದ ಸಾಯಿರಾಜ್‌ಗೆ ನಂತರ ಔರಂಗಾಬಾದ್‌ನಲ್ಲಿರುವ ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಉನ್ನತ ತರಬೇತಿಯನ್ನು ಪಡೆದಿದ್ದರು.