Home ಕ್ರೀಡೆ ಯುಎಸ್ ಮಾಜಿ ಅಧ್ಯಕ್ಷರೊಂದಿಗೆ ಧೋನಿ ಗಾಲ್ಫ್ ಆಟ

ಯುಎಸ್ ಮಾಜಿ ಅಧ್ಯಕ್ಷರೊಂದಿಗೆ ಧೋನಿ ಗಾಲ್ಫ್ ಆಟ

0

ನ್ಯೂಯಾರ್ಕ್: ಯುಎಸ್ ಓಪನ್ ೨೦೨೩ರ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲಿಸ್ಟ್ಗಳಾದ ಕಾರ್ಲೋಸ್ ಅಲ್ಕರಾಜ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಟೆನ್ನಿಸ್ ಆಟವನ್ನು ವೀಕ್ಷಿಸಲು ಭಾರತದ ಮಾಜಿ ಕ್ರಿಕೆಟ್ ಆಟಗಾರ ಎಂ.ಎಸ್. ಧೋನಿ ಆರ್ಥರ್ ಆಶ್ ಸ್ಟೇಡಿಯಂನಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಅವರು ಆಟಗಾರರ ಕುಳಿತುಕೊಳ್ಳುವ ಪ್ರದೇಶದ ಹಿಂದೆಯೇ ಕುಳಿತಿದ್ದು, ಎಮ್‌ಎಸ್‌ಡಿ ನಗುತ್ತಿರುವ ಮತ್ತು ಟೆನಿಸ್‌ನ ಉತ್ತಮ ಆಟವನ್ನು ಆನಂದಿಸುತ್ತಿರುವ ವೀಡಿಯೊ ವೈರಲ್ ಕೂಡ ಆಗಿದೆ.
ವರದಿಗಳ ಪ್ರಕಾರ, ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಧೋನಿಯನ್ನು ಗಾಲ್ಫ್ ಆಟಕ್ಕೆ ಆಹ್ವಾನಿಸಿದ್ದರು. ಧೋನಿ ರಜೆಗಾಗಿ ಯುಎಸ್‌ಎಯಲ್ಲಿದ್ದಾರೆ ಎಂದು ವರದಿಯಾಗಿದೆ. ಟ್ರಂಪ್ ಅವರೊಂದಿಗೆ ಗಾಲ್ಫ್ಆಡಿರುವ ವಿಡಿಯೋ ಹಾಗೂ ಗಾಲ್ಫ್ ಗೇರ್‌ನಲ್ಲಿ ಟ್ರಂಪ್ ಅವರೊಂದಿಗೆ ಕ್ಲಿಕ್ ಮಾಡಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://twitter.com/samyuktakarnat2/status/1700089195031671027

Exit mobile version