Home ಕ್ರೀಡೆ ಪ್ಲೇಆಫ್​ನಿಂದ ಹೊರಬಿದ್ದ ಆರ್​ಸಿಬಿ

ಪ್ಲೇಆಫ್​ನಿಂದ ಹೊರಬಿದ್ದ ಆರ್​ಸಿಬಿ

0

ಶುಭಮನ್ ಗಿಲ್ ಭರ್ಜರಿ ಶತಕ ಮತ್ತು ವಿಜಯ ಶಂಕರ ಅವರ ಅರ್ಧ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.
ಈ ಸೋಲಿನೊಂದಿಗೆ ಆರ್ ಸಿಬಿ ಟೂರ್ನಿಯಿಂದ ಹೊರಬಿದಿದ್ದು, ಬೆಂಗಳೂರು ತಂಡದ ಕಪ್ ಗೆಲ್ಲುವ ಕನಸು ದೂರವಾಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತ್ತು. ಕೊಹ್ಲಿ ಅಜೇಯ 101 ರನ್ ಗಳಿಸಿದ್ದರು. ಬಳಿಕ ಗುರಿ ಬೆನ್ನಟ್ಟಿದ ಗುಜರಾತ್ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿತು.
ಗುಜರಾತ್ 19.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಮಾಡಿತು. ಗಿಲ್ ಕೇವಲ 52 ಎಸೆತಗಳಲ್ಲಿ 104 ರನ್ ಗಳಿಸಿ ಗೆಲುವಿಗೆ ಕಾರಣರಾದರು.

Exit mobile version