Home ಕ್ರೀಡೆ ನೀರಜ್ ಚೋಪ್ರಾ ಸಾಧನೆಗೆ ಸಿಎಂ ಶುಭಾಶಯ

ನೀರಜ್ ಚೋಪ್ರಾ ಸಾಧನೆಗೆ ಸಿಎಂ ಶುಭಾಶಯ

0

ಬೆಂಗಳೂರು: ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟ ನೀರಜ್ ಚೋಪ್ರಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಅವರು ತಮ್ಮ ಸಂದೇಶದಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ದೇಶದ ಹೆಮ್ಮೆಯ ಪುತ್ರ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು.
ವಿಶ್ವ ಅಥ್ಲೆಟಿಕ್ಸ್ ಪಂದ್ಯಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟ ನೀರಜ್ ಚೋಪ್ರಾ ಅವರ ಸಾಧನೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತೆ ಮಾಡಿದೆ.
ತಮ್ಮ ಕ್ರೀಡಾಬದುಕು ಮುಂದೆಯೂ ಇಂಥ ಇನ್ನಷ್ಟು ಸಾಧನೆಗಳಿಂದ ವಿಜೃಂಭಿಸಲಿ ಎಂದು ಶುಭ ಕೋರುತ್ತೇನೆ ಎಂದಿದ್ದಾರೆ.

Exit mobile version