Home ವಿಶೇಷ ಸುದ್ದಿ ಹೋಮ್ ಅಪ್ಲೈಯನ್ಸ್ ಕಂಪನಿ ಮಾಡಿ ಗೆದ್ದ ಕುಣಿಗಲ್ ಹುಡುಗ

ಹೋಮ್ ಅಪ್ಲೈಯನ್ಸ್ ಕಂಪನಿ ಮಾಡಿ ಗೆದ್ದ ಕುಣಿಗಲ್ ಹುಡುಗ

0

ಕುಣಿಗಲ್ ತಾಲೂಕಿನ ಬಂಡಿಗೌಡನಪಾಳ್ಯ ಎಂಬ ಹಳ್ಳಿಯಲ್ಲಿ ಜನಿಸಿದ ಸೋಮ ಮಲ್ಲಯ್ಯ ಅವರು ರೈತ ಕುಟುಂಬದಿಂದ ಬಂದವರು. ಅವರ ತಂದೆ ಮಲ್ಲೇಶಯ್ಯ ಮತ್ತು ತಾಯಿ ಶಿವಮ್ಮ. ಬಾಲ್ಯದಿಂದಲೇ ಅತ್ಯಂತ ಶ್ರದ್ಧೆಯಿಂದ ಕೆಲಸಗಳನ್ನು ಮಾಡುತ್ತಿದ್ದ ಸೋಮ ಅವರಲ್ಲಿ ಉದ್ಯಮಶೀಲತೆಗೆ ಅಡಿಪಾಯವಾಗುವಂಥ ಮನೋಭಾವ ಆಗಿನಿಂದಲೇ ಸಾವಕಾಶವಾಗಿ ಬೆಳೆಯುತ್ತ ಬಂದಿತು. ಇದು ಇವತ್ತು ರಾಜ್ಯದಲ್ಲಿ ಹೆಸರು ಮಾಡಿರುವ ಮಲ್ಟಿ ಬ್ರ್ಯಾಂಡ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅನ್ನು ಹುಟ್ಟುಹಾಕಿದೆ.

ಸೋಮ ಅವರ ಶೈಕ್ಷಣಿಕ ಪ್ರಯಾಣವು ಅಂಕನಳ್ಳಿ ಮಠದ ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾಯಿತು. ನಂತರ ಹುಲಿಕಟ್ಟೆಯ ಪಿಯು ಕಾಲೇಜಿನಲ್ಲಿ ಓದಿ, ರಾಮನಗರ ಸರ್ಕಾರಿ ಕಾಲೇಜಿನಿಂದ ವಾಣಿಜ್ಯದಲ್ಲಿ ಪದವಿ ಪಡೆದರು. ಸೋಮ ಅವರಿಗೆ ಶಿಕ್ಷಣ ಎನ್ನುವುದು ಬರೀ ಗುರಿಯನ್ನು ತಲುಪುವ ಸಾಧನವಷ್ಟೇ ಆಗದೆ, ಎಲ್ಲವನ್ನೂ ಸಮಗ್ರ ದೃಷ್ಟಿಕೋನದಿಂದ ನೋಡುವಂಥ ಮನೋಭಾವವನ್ನು ನೀಡಿತು.

ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಕಲ್ಯಾಣಿ ಮೋಟಾರ್ಸ್‌ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರು ಹಾಗೂ ಆಟೋಮೋಟಿವ್ ಉದ್ಯಮದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆದುಕೊಂಡರು, ಸಾಕಷ್ಟು ಅನುಭವವನ್ನೂ ಗಳಿಸಿದರು. ತತ್ಪರಿಣಾಮ ಗ್ರಾಹಕ ಸೇವೆ ಮತ್ತು ನಿರ್ವಹಣೆಯಲ್ಲಿ ಅವರ ಕೌಶಲ ಹೆಚ್ಚಿತು. ಆದರೆ ತಮ್ಮದೇ ಏನಾದರೊಂದು ಸ್ವಂತ ಉದ್ದಿಮೆ ಮಾಡಬೇಕು, ನಾನೇ ಏನಾದರೊಂದು ಹೊಸದನ್ನು ಮಾಡಬೇಕು ಎಂಬ ಇಚ್ಛೆ ಸ್ವ ಉದ್ಯಮ ಕ್ಷೇತ್ರಕ್ಕೆ ಧುಮುಕುವಂತೆ ಮಾಡಿತು.

ವೈಟ್‌ಮೂನ್ ಟೆಕ್ನಾಲಜಿ ಸ್ಥಾಪನೆ: ಸ್ವಂತದ್ದೇನಾದರೂ ಮಾಡಬೇಕು ಎಂದು ಉತ್ಸುಕರಾಗಿದ್ದ ಸೋಮ ಮಲ್ಲಯ್ಯ ಅವರು 2018ರಲ್ಲೀ ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ವೈಟ್‌ಮೂನ್ ಟೆಕ್ನಾಲಜಿ ಎಂಬ ಕಂಪನಿ ಶುರು ಮಾಡುತ್ತಾರೆ. ಆ ಮೂಲಕ ಸೌರ ವ್ಯವಸ್ಥೆಗಳು, ನೀರಿನ ಪುರೀಫೈಯರ್‌ಗಳು, ವಾಟರ್ ಸಾಫ್ಟನ್‌ರ್‌ಗಳು, ಅಡುಗೆ ಮನೆಯ ಚಿಮಣಿಗಳಂತಹ ಅಗತ್ಯ ಗೃಹೋಪಯೋಗಿ ಉಪಕರಣಗಳನ್ನು ಒದಗಿಸಲು ಮುಂದಾಗಿ, ಇದರಲ್ಲಿ ಯಶಸ್ಸನ್ನೂ ಗಳಿಸುತ್ತಾರೆ. ಸೌರಶಕ್ತಿಯ ಮೂಲಕ ಸುಸ್ಥಿರ ಜೀವನವನ್ನು ಉತ್ತೇಜಿಸುವುದರ ಜೊತೆಗೆ ಕುಟುಂಬಗಳ ಜೀವನದ ಗುಣಮಟ್ಟವನ್ನೂ ಸುಧಾರಿಸುವ ಗುರಿಯನ್ನು ಹೊಂದಿದ್ದರು.

ಘರ್‌ಕಾರ್ಟ್‌ಗೆ ಅಡಿಪಾಯ: ಸೋಮ ಅವರ ಉದ್ಯಮಶೀಲತಾ ಮನೋಭಾವವು ವೈಟ್‌ಮೂನ್ ಟೆಕ್ನಾಲಜಿಯನ್ನು ಸ್ಥಾಪಿಸುವುದರೊಂದಿಗೆ ನಿಲ್ಲಲಿಲ್ಲ. ಈ ಡಿಜಿಟಲ್ ಯುಗದ ಮಹತ್ವವನ್ನು ಹಾಗೂ ಜನ ಅದರ ಮೇಲೆ ಅವಲಂಬಿತವಾಗಿರುವುದನ್ನು ಅರಿತ ಅವರು ಘರ್‌ಕಾರ್ಟ್ ಎಂಬ ಆನ್‌ಲೈನ್ ಮಲ್ಟಿ ಬ್ರ್ಯಾಂಡ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಶುರು ಮಾಡಿದರು. ಈ ನವೀನ ವೇದಿಕೆಯು ಬಳಕೆದಾರರಿಗೆ ಗೃಹೋಪಯೋಗಿ ಉಪಕರಣಗಳನ್ನು ಅನುಕೂಲಕರವಾಗಿ ಖರೀದಿಸಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಅಗತ್ಯ ಹೋಮ್ ಅಪ್ಲೈಯನ್ಸ್‌ಗಳು ಜನರ ಮನೆ ಬಾಗಿಲಿಗೇ ಹೋಗವ ವ್ಯವಸ್ಥೆಯನ್ನು ಇವರು ನಿರ್ಮಿಸುತ್ತಾರೆ.

ಗ್ರಾಹಕರು ಮತ್ತು ಅಗತ್ಯ ಉತ್ಪನ್ನಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಅಪ್ಲಿಕೇಶನ್ ಅನ್ನು ಬಳಕೆದಾರ ಸ್ನೇಹಪರತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ, ಇದು ಗ್ರಾಹಕರಿಗೆ, ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯಿಂದ ಬಂದವರಿಗೆ, ನ್ಯಾವಿಗೇಟ್ ಮಾಡಲು ಮತ್ತು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಸುಲಭಗೊಳಿಸುತ್ತದೆ. ಭವಿಷ್ಯದಲ್ಲಿ ಸೋಮ ಘರ್‌ಕಾರ್ಟ್‌ನ ವ್ಯಾಪ್ತಿಯನ್ನು ಮೊಬೈಲ್ ಪ್ಲಾಟ್‌ಫಾರ್ಮ್‌ಗಳಿಗೆ ವಿಸ್ತರಿಸಲು ಯೋಜಿಸಿದ್ದಾರೆ. ಆ ಮೂಲಕ ತಂತ್ರಜ್ಞಾನದಿಂದ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಜನರಿಗೆ ಉಪಯೋಗವಾಗುವಂತ ಕಾರ್ಯ ಮಾಡುವುದು ಅವರ ಉದ್ದೇಶವಾಗಿದೆ. ಮೊಬೈಲ್ ಪ್ಲಾಟ್‌ಫಾರ್ಮ್‌ಗಳಿಗೆ ಘರ್‌ಕಾರ್ಟ್‌ನ್ನು ವಿಸ್ತರಿಸಿದರೆ ಯಾವುದೇ ಮೂಲೆಯಲ್ಲಿರುವ ಸಣ್ಣ ಊರಿಗೂ ಗೃಹೋಪಯೋಗಿ ವಸ್ತುಗಳನ್ನು ತಲುಪಿಸುವುದು ಸಾಧ್ಯವಾಗಬಹುದು. ಇದನ್ನು ಮುಂದಿನ ದಿನಗಳಲ್ಲಿ ಸಾಧ್ಯವಾಗಿಸುವುದು ಸೋಮ ಅವರ ಗುರಿಯಾಗಿದೆ.

ಶುರು ಮಾಡಿದ್ದು ಏಕೆ?: ಈ ಉದ್ದಿಮೆ ಶುರು ಮಾಡಿರುವ ಸೋಮ ಅವರ ಹಿಂದಿನ ಉದ್ದೇಶವನ್ನು ಗಮನಿಸುವುದು ಬಹಳ ಮುಖ್ಯ. ಕೈಗೆಟುಕುವ ಮತ್ತು ಅಗತ್ಯವಾದ ಹೋಮ್ ಅಪ್ಲೈಯನ್ಸ್‌ಗಳನ್ನು ಕಡಿಮೆ ಬೆಲೆಗೆ ಒದಗಿಸುವುದು, ಆ ಮೂಲಕ ಕುಟುಂಬಗಳನ್ನು ಸಬಲೀಕರಣಗೊಳಿಸುವುದು, ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯಕರ ಜೀವನ ಪರಿಸರವನ್ನು ಉತ್ತೇಜಿಸುವುದು ಆಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version